ಬಿಹಾರದ ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನದಲ್ಲಿ ಪೇಜಾವರ ಶ್ರೀ

ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಷ್ಠಾಪನಾಚಾರ್ಯ ಜಗದ್ಗುರು ಶ್ರೀರಾಮಾನುಜಾಚಾರ್ಯರ ಜನ್ಮಸಹಸ್ರಾಬ್ಧ ಪ್ರಯುಕ್ತ ಬಿಹಾರದ ಬಕ್ಸರ್ ನಲ್ಲಿ ಶ್ರೀ ದೇವಭೂಮಿ ವಾಮನಾಶ್ರಮದಲ್ಲಿ ನಡೆದ ಅಂತಾರಾಷ್ಟ್ರೀಯ ಧರ್ಮ ಸಮ್ಮೇಳನದಲ್ಲಿ ಶ್ರೀಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುವಾರ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಧರ್ಮಸಂದೇಶ ನೀಡಿದರು. ಶ್ರೀ ಜೀಯರ್ ಸ್ವಾಮೀಜಿ, ಶ್ರೀ ಅಯೋಧ್ಯಾನಾಥ ಸ್ವಾಮೀಜಿ, ಶ್ರೀಧರಾಚಾರ್ಯ ಸ್ವಾಮೀಜಿ ಮೊದಲಾದವರ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ದೇಶಾದ್ಯಂತದಿಂದ ಹಾಗೂ ವಿದೇಶಗಳಿಂದಲೂ ನೂರಾರು ಸಾಧು ಸಂತರು ಮಠಾಧಿಪತಿಗಳು, ಧಾರ್ಮಿಕ ಮುಖಂಡರು ಭಾಗವಹಿಸಿ ಧರ್ಮ ಚಿಂತನ- ಮಂಥನ […]

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ ಉಡುಪಿಯ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಇಂದು ನಡೆಯಿತು. ಕನ್ನಡದ ಬಾವುಟವನ್ನು ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಅವರಿಗೆ ಹಸ್ತಾಂತರಿಸಿದರು ಸಮಾರಂಭದಲ್ಲಿ ಮನೋವೈದ್ಯ ಡಾ. ಪಿ ವಿ ಭಂಡಾರಿ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ವಿವಿಧತೆಯ ಭಾಷೆಯಾಗಿದೆ. ಪುಸ್ತಕ ಪ್ರೀತಿ ನಾವೆಲ್ಲರೂ ಬೆಳೆಸಬೇಕಾಗಿದೆ. ನಮ್ಮ ಶ್ರೇಷ್ಠ ಕವಿಗಳು ನಮ್ಮ ನಾಡು ನುಡಿಗೆ ಬಹಳಷ್ಟು ಕೆಲಸ […]

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ₹3.65 ಕೋಟಿ ಮೌಲ್ಯದ ವಿವಿಧ ಸವಲತ್ತುಗಳ ವಿತರಣೆ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು ಇದರ ವತಿಯಿಂದ ಮಲ್ಪೆ ಏಳೂರು ಮೊಗವೀರ ಸಭಾಭವನದಲ್ಲಿ ಆಯೋಜಿಸಿದ್ದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯ ಸಹಕಾರಿ ಸಂಘ ಹಾಗೂ ಗ್ರಾಹಕ ಬೋಟ್ ಮಾಲಕರಿಗೆ 2.33 ಕೋಟಿ ಮೌಲ್ಯದ ಪ್ರೋತ್ಸಾಹಕ ಉಡುಗೊರೆ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಫೆಡರೇಷನ್ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಸುವರ್ಣ ವಹಿಸಿದ್ದು, ಸಮಾರಂಭವನ್ನು ನಾಡೋಜ ಡಾ. ಜಿ ಶಂಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗಿನ್ನಿಸ್ ದಾಖಲೆಯ […]

ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ ಕ್ಯಾಂಪಸ್ ಸಂದರ್ಶನ

ಮಣಿಪಾಲ: ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನಲ್ಲಿ, ಇಶ್ನಾ ಪ್ಲೇ ಸ್ಕೂಲ್ ಅಜ್ಜರಕಾಡು, ಉಡುಪಿ ಇವರ ವತಿಯಿಂದ 2021-22 ಸಾಲಿನ ಮಾಂಟೆಸ್ಸರಿ / ನರ್ಸರಿ ಪ್ರಶಿಕ್ಷಣಾರ್ಥಿ ಶಿಕ್ಷಕಿಯರಿಗೆ ಕ್ಯಾಂಪಸ್ ಸಂದರ್ಶನ ನಡೆಯಿತು. ಗುಂಪು ಚರ್ಚೆ, ಬರಹ, ರೈಮ್ಸ್, ಕಥೆ ಹೇಳುವಿಕೆ ಹಾಗೂ ಮುಖಾಮುಖಿ ಸಂದರ್ಶನ ಹೀಗೆ ಮೂರು ಹಂತಗಳಲ್ಲಿ ಸಂದರ್ಶಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಸುನೀತಾ ಹಾಗೂ ಇಶ್ನಾ ಪ್ಲೇ ಸ್ಕೂಲಿನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ರಂಜೀತ್ ಆರ್ ಶೆಟ್ಟಿ ಹಾಗೂ ಶ್ರೀಮತಿ ಶಿಲ್ಪಾ ಆರ್ […]

ಆರ್ ಸಿಬಿ ತಂಡದ ನೂತನ ನಾಯಕನಾಗಿ “ಫಾಪ್ ಡುಫ್ಲೆಸಿಸ್” ನೇಮಕ

ಬೆಂಗಳೂರು: ಆರ್ ಸಿ ಬಿ ತಂಡದ ನೂತನ ನಾಯಕನಾಗಿ ಆಗಿ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾಪ್ ಡು ಫ್ಲೆಸಿಸ್ ಅವರನ್ನು ಆಯ್ಕೆ ಮಾಡಿದೆ. ಐಪಿಎಲ್ ಕಳೆದ ಆವೃತ್ತಿಯ ಮುಕ್ತಾಯದ ವೇಳೆಗೆ ನಾಯಕರಾಗಿದ್ದ ವಿರಾಟ್ ಕೊಹ್ಲಿ ತನ್ನ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರು. ಆ ಬಳಿಕ ನಾಯಕತ್ವಕ್ಕೆ ಮ್ಯಾಕ್ಸ್‌ವೆಲ್ ಸೇರಿದಂತೆ ಹಲವು ಆಟಗಾರರ ಹೆಸರು ಕೇಳಿ ಬಂದಿತ್ತು. ಇದೀಗ ಐಪಿಎಲ್ ಪ್ರಾರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ತಂಡ ನೂತನ ನಾಯಕನನ್ನು ನೇಮಕ ಮಾಡಿದೆ.