ಆಗುಂಬೆ ಘಾಟಿಯಲ್ಲಿ‌ ರಸ್ತೆ ದುರಸ್ತಿ ಕಾಮಗಾರಿ: ವಾಹನ ಸಂಚಾರ ನಿರ್ಬಂಧ

ಉಡುಪಿ, ಮಾ.11: ರಾಷ್ಟ್ರೀಯ ಹೆದ್ದಾರಿ 169 ಎ ರ ಕಿ. ಮೀ. 33.00 ರಿಂದ 51.60 ವರೆಗೆ ನಿಯತಕಾಲಿಕ ದುರಸ್ಥಿ ಹಿನ್ನಲೆಯಲ್ಲಿ ರಸ್ತೆ ದುರಸ್ಥಿ ಕಾಮಗಾರಿಯನ್ನು ಆಗುಂಬೆ ಘಾಟಿಯಲ್ಲಿ ನಿರ್ವಹಿಸಬೇಕಾಗಿರುವುದರಿಂದ ಕಿರಿದಾದ ರಸ್ತೆ ಇದ್ದು ಡಾಂಬರೀಕರಣ ಸಮಯದಲ್ಲಿ ವಾಹನ ಸಂಚಾರ ಮಾಡಲು ಜಾಗವಿಲ್ಲದ ಹಿನ್ನಲೆ, ಮಾರ್ಚ್ 5 ರಿಂದ 15 ರವರೆಗೆ ಆಗುಂಬೆ ಘಾಟಿಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ನಡೆಸುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ […]

ಕಂದಾಯ ದಾಖಲೆ ಮನೆ ಬಾಗಿಲಿಗೆ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ, ಮಾ.11: ಸಾರ್ವಜನಿಕರಿಗೆ ಕಂದಾಯ ಇಲಾಖೆ ವತಿಯಿಂದ ನೀಡಲಾಗುತ್ತಿರುವ ಮೂಲ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮವು ಶನಿವಾರ ಬೆಳಗ್ಗೆ 11 ಗಂಟೆಗೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಹಿಸ್ಸಾ ಸ್ಕೆಚ್, ಆದಾಯ ಪ್ರಮಾಣ ಪತ್ರ ಮತ್ತು […]

ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ, ವಿಶ್ವನಾಥರ ಮನೆಗೆ ಪೇಜಾವರ ಶ್ರೀ ಭೇಟಿ ಸಾಂತ್ವನ

ಉಡುಪಿ: ಶಿವಮೊಗ್ಗದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹಿಂದೂ ಸಂಘಟನೆಗಳ ಮುಖಂಡ ಹರ್ಷನ ಮನೆಗೆ ಶುಕ್ರವಾರ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭೇಟಿ ನೀಡಿ ಮನೆಮಂದಿಗೆ ಸಾಂತ್ವನ ಹೇಳಿ ಆಶೀರ್ವಾದಗೈದರು. ಹರ್ಷನ ಅಗಲುವಿಕೆಯಿಂದ ಆತನ ಹತ್ತವರು ಅನುಭವಿಸುತ್ತಿರುವ ನೋವು ದುಃಖದಲ್ಲಿ ನಮಗೆ ಸಹಾನುಭೂತಿ ಇದೆ. ಇಂಥಹ ಹೇಯಕೃತ್ಯಗಳ ಮೂಲಕ ನಮ್ಮ ಸಂಘಟನೆಗಳ ನೈತಿಕ‌ಸ್ಥೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವುದನ್ನು ಖಂಡಿಸುತ್ತೇವೆ. ಸರ್ಕಾರ ಮತ್ತು ಕಾನೂನು ಹರ್ಷನ ಸಾವಿಗೆ ನ್ಯಾಯ ಕೊಡಿಸುವುದೆಂಬ ವಿಶ್ವಾಸದಲ್ಲಿದ್ದೇವೆ. ಭಗವಂತನು ಆತನ ಹತ್ತವರಿಗೆ ಈ ದುಃಖವನ್ನು ಸಹಿಸುವ ಶಕ್ತಿ […]

ಬ್ರಹ್ಮಾವರ: ಔಷಧಿಯೆಂದು ಇಲಿ ಪಾಷಣ ಸೇವಿಸಿ ಮಹಿಳೆ ಮೃತ್ಯು

ಬ್ರಹ್ಮಾವರ: ಔಷಧಿಯೆಂದು ಸಿರಾಫ್ ಬಾಟಲಿಯಲ್ಲಿದ್ದ ಇಲಿ ಪಾಷಣ ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಗುಂಡಾಲು ಎಂಬಲ್ಲಿ ನಡೆದಿದೆ. ಮೃತರನ್ನು ಪೆಜಮಂಗೂರು ಗ್ರಾಮದ ಗುಂಡಾಲು ನಿವಾಸಿ 47ವರ್ಷದ ದೇವಕಿ ಎಂದು ಗುರುತಿಸಲಾಗಿದೆ. ಇವರಿಗೆ ಮಾ.3 ರಂದು ಕೆಮ್ಮು ಶುರುವಾಗಿತ್ತು. ಹೀಗಾಗಿ ಸಿರಾಫ್ ಔಷಧಿಯೆಂದು ಸಿರಾಫ್ ಬಾಟಲಿಯಲ್ಲಿ ಹಾಕಿದ್ದ ಇಲಿ ಪಾಷಣವನ್ನು ಆಕಸ್ಮಿಕವಾಗಿ ಕುಡಿದಿದ್ದಾರೆ. ಇದರಿಂದ ಅಸ್ವಸ್ಥಗೊಂಡಿದ್ದ ದೇವಕಿಯನ್ನು ಬ್ರಹ್ಮಾವರದ ಮಹೇಶ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು, […]

ದೈವರಾಧನೆಯಿಂದ ತುಳು ಭಾಷೆ, ಪರಂಪರೆ ಜೀವಂತ; 61 ತಿಂಗಳೆ ಸಾಹಿತ್ಯೋತ್ಸವದಲ್ಲಿ ನಳಿನ್ ಕುಮಾರ್ ಕಟೀಲ್ ಅಭಿಮತ

ಉಡುಪಿ: ಸಾವಿರಾರು ವರ್ಷಗಳಿಂದ ತುಳುನಾಡಿನಲ್ಲಿ ಶ್ರದ್ದೆ ಭಕ್ತಿಯಿಂದ ದೈವರಾಧನೆ ನಡೆದುಕೊಂಡು ಬಂದಿದೆ. ಪರಕೀಯರಿಂದ ನಮ್ಮ ದೇಶ ಮತ್ತು ಸಂಸ್ಕೃತಿಯ ಮೇಲೆ ನಿರಂತರ ದಾಳಿ ನಡೆದರೂ ದೈವರಾಧನೆ ಸಮೃದ್ದವಾಗಿ ಉಳಿದಿದೆ, ಇದು ನಮ್ಮ ಸಂಸ್ಕೃತಿ ಮತ್ತು ನೆಲದ ಶಕ್ತಿ ಎಂದು ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಕೆ.ಎಸ್ ನಿತ್ಯಾನಂದರು ಅಭಿಪ್ರಾಯ ಪಟ್ಟರು. ಅವರು ಮಂಗಳವಾರ ಸಂಜೆ ತಿಂಗಳೆಯಲ್ಲಿ ನಡೆದ ೬೧ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಸದ್ಬಳಕೆ ಆಗುವಂತೆ ಶಾಸ್ತ್ರೀಯವಾಗಿ ಅರ್ಥ ಮಾಡಿಕೊಂಡು ಬಳಸಲು ತಂತ್ರಶಾಸ್ತ್ರ ರೂಪು ಗೊಂಡಿದೆ. ಶ್ರದ್ದೆ […]