ರೈತರ ಮಕ್ಕಳಿಗೆ ತೋಟಗಾರಿಕಾ ತರಬೇತಿ

ಉಡುಪಿ, ಮಾ.10: ತೋಟಗಾರಿಕೆ ಇಲಾಖೆಯ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಸಾಮಾನ್ಯ ವರ್ಗದ 6 ಹಾಗೂ ಪರಿಶಿಷ್ಟ ಜಾತಿಯ 1 ಒಟ್ಟು 7 ಅಭ್ಯರ್ಥಿಗಳ ಗುರಿ ಇದ್ದು, ಸದರಿ ಗುರಿಯಲ್ಲಿ 5 ಪುರುಷ ಹಾಗೂ 2 ಮಹಿಳೆಯರಿಗೆ ಮೀಸಲಿರುತ್ತದೆ. ಕನಿಷ್ಠ 18 ವರ್ಷದೊಳಗಿನ ಹಾಗೂ ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗೆ 30 ವರ್ಷ, ಪ.ಜಾತಿ ಮತ್ತು ಪಂಗಡದ […]

ಪವರ್ ಸಂಸ್ಥೆ ಆಶ್ರಯದಲ್ಲಿ ‘ಚಾರ್ಟರ್ ಡೇ’ ಹಾಗೂ ‘ಮಹಿಳಾ ದಿನಾಚರಣೆ’

ಉಡುಪಿ: ಪವರ್ ಫ್ಲಾಟ್‌ ಫಾರಂ ಆಫ್ ವುಮೆನ್ ಎಂಟರ್‌ಫ್ರಿನಿಯರ್ಸ್(ರಿ) ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚಾರ್ಟರ್‌ ಡೇ ಯು ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಭಾಷಾ ನಟಿ ವಿನಯ ಪ್ರಸಾದ್ ಅವರು ನೆರವೇರಿಸಿದರು. ಪವರ್ ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ಪೂನಂ ಶೆಟ್ಟಿ, ಕಾರ್ಯದರ್ಶಿಯಾಗಿ ಅರ್ಚನಾ ರಾವ್, ಕೋಶಾಧಿಕಾರಿಯಾಗಿ ಪ್ರತಿಭಾ ಆರ್.ವಿ., ಜೊತೆ ಕಾರ್ಯದರ್ಶಿಯಾಗಿ ತೃಪ್ತಿ ನಾಯಕ್, ಉಪಾಧ್ಯಕ್ಷರಾಗಿ ಸುವರ್ಶಾ ಮಿನ್ಜ್ ಹಾಗೂ ಶಾಲಿನಿ ಬಂಗೇರ ಪದಗ್ರಹಣ ಸ್ವೀಕರಿಸಿದರು. […]

ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಎಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಮಾ. 12 ರಂದು ಬಾರ್ಕೂರು ಬಿಲ್ಲವ ಸಂಘದಲ್ಲಿ ಬಾರ್ಕೂರು, ಯಡ್ತಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ, 13 ರಂದು ಸಾಲಿಗ್ರಾಮ […]

ಉಡುಪಿ: ಗ್ಯಾರೇಜ್ ಮಾಲೀಕರ ಸಂಘ; ಪಿಂಚಣಿ ನೋಂದಣಿ ಶಿಬಿರ ಉದ್ಘಾಟನೆ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಸಂಘ ಉಡುಪಿ ವಲಯ ಮತ್ತು ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಪಿಂಚಣಿ ಸಪ್ತಾಹ ಆಚರಣೆ ಮತ್ತು ಪ್ರಧಾನ ಮಂತ್ರಿ ಪಿಂಚಣಿ ನೋಂದಣಿ ಶಿಬಿರ ಬುಧವಾರ ಉದ್ಯಾವರದ ಸಂಘದ ಕಚೇರಿಯಲ್ಲಿ ಆಯೋಜಿಸಲಾಯಿತು. ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರೋಷನ್ ಕರ್ಕಡ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ, ಗೌರವ ಸಲಹೆಗಾರ ಯಾದವ್ ಶೆಟ್ಟಿಗಾರ್, ವಿಲ್ಸನ್ ಅಂಚನ್, ಉಪಾಧ್ಯಕ್ಷ ರಾಜೇಶ್ […]