ಉಡುಪಿ: ಏ.2ರಿಂದ 10ರ ವರೆಗೆ ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಡುಪಿ: ಇಲ್ಲಿನ ಇತಿಹಾಸ ಪ್ರಸಿದ್ಧ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏಪ್ರಿಲ್ 2 ರಿಂದ 10ರ ವರೆಗೆ ದೇವಸ್ಥಾನದ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಜೀರ್ಣೋದ್ಧಾರ ಸಮಿತಿ‌ಯ ಕೋಶಾಧಿಕಾರಿ ಕೆ. ಕೃಷ್ಣಮೂರ್ತಿ‌ ಆಚಾರ್ಯ ಮಾಹಿತಿ ನೀಡಿದರು. ಪುತ್ತೂರು ಶ್ರೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀದೇವಿಗೆ ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಏ.2 ರಂದು ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ […]

ಕನ್ನಡ ಶಾಲೆಗಳಲ್ಲಿ ಸಿಗುವ ಅನುಭವ ಶ್ರೀಮಂತವಾದುದು: ಡಾ| ಅಶೋಕ್ ಕಾಮತ್

ಉದ್ಯಾವರ: ಈ ಶತಮಾನದ ಕನ್ನಡ ಶಾಲೆಗಳಲ್ಲಿ ಎಲ್ಲರೂ ಸಮಾನಾಗಿ ಕಲೆತು ಕಲಿಯುವ ವಾತಾವರಣವಿದೆ. ಇಲ್ಲಿ ಬಡವ, ಶ್ರೀಮಂತ, ಮೇಲು-ಕೀಳು ಎಂಬ ತಾರತಮ್ಯ ಇಲ್ಲದೆ ಎಲ್ಲರೂ ಕೂಡಾ ಸಮಾನತೆಯಿಂದ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಾಯವಾಗಿ ಉಳ್ಳವರಿಗೆ ಒಂದು ಶಾಲೆ, ಇಲ್ಲದವರಿಗೆ ಒಂದು ಶಾಲೆ ಎಂದು ವರ್ಗಿಕರಣಗೊಂಡಿದೆ. ಒಬ್ಬರೊಂದಿಗೆ ಒಬ್ಬರಿಗೆ ಸಂಪರ್ಕ ಇಲ್ಲದೆ ಅವರವರ ಅನುಭವಗಳಿಗೆ ಮಾತ್ರ ಸೀಮಿತರಾಗಿ ಮಕ್ಕಳು ದ್ವೀಪ ಆಗುತ್ತಿದ್ದಾರೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಈ ಶತಮಾನದ […]

ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯ ಬಗ್ಗೆ ಪೂರ್ವಭಾವಿ ಸಭೆ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡಿ ಮುಂಬರುವ ದಿನಗಳಲ್ಲಿ ಜನಸ್ಪಂದನ ಕಾರ್ಯಕ್ರಮಗಳು ಮತ್ತು  ಸದಸ್ಯತ್ವ ನೋಂದಣಿ ಪ್ರಗತಿ ಪರಿಶೀಲನೆಯ ಬಗ್ಗೆ ವಿವರಣೆ ನೀಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಕೆ. ಅಣ್ಣಯ್ಯ ಸೇರಿಗಾರ್, ಬಿ. ಕುಶಲ್ […]

ಕಾರ್ಕಳ ಉತ್ಸವಕ್ಕೆ ರಂಗೇರಿ ನಿಂತಿದೆ ಶಿಲ್ಪಕಾಶಿ ಕಾರ್ಕಳ: ಎಷ್ಟೆಲ್ಲಾ ಕೆಲಸ ಆಗಿದೆ ಗೊತ್ತಾ?

ಕಾರ್ಕಳ: ಕೊನೆಗೂ ಕಾರ್ಕಳ‌ ಉತ್ಸವಕ್ಕೆ ಅಖಾಡ ಸಿದ್ಧಗೊಂಡಿದೆ. ಶಿಲ್ಪಕಾಶಿ ಎಂದೇ ಜನಮಾನಸದಲ್ಲಿ ಛಾಪು ಹೊತ್ತಿರುವ ಕಾರ್ಕಳದಲ್ಲೀಗ ಎಲ್ಲೆಡೆ ಜಗಮಗ, ಸಂಭ್ರಮ, ಸಡಗರದ ಅಬ್ಬರ. ಮಾ.10 ರಿಂದ ಮಾ.20 ರವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಭರ್ಜರಿ ಚಾಲನೆ ಸಿಗಲಿದೆ. ಬೀದಿ ಬೀದಿಗೂ ಬೆಳಕಿನ ಉತ್ಸವ: ಕಾರ್ಕಳ ನಗರದಲ್ಲೀಗ ಪ್ರತೀ ಬೀದಿ ಬೀದಿಯೂ ಸಿಂಗಾರಗೊಂಡಿದ್ದು ಪ್ರತೀ ಬೀದಿಯನ್ನೂ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಮೈಸೂರು ಚಾಮುಂಡೇಶ್ವರಿ ವಿದ್ಯುತ್ ನಿಗಮ ಮಂಡಳಿಯ ಇಂಜಿನಿಯರ್ ಗಳು ಈಗಾಗಲೇ ಸಂಪೂರ್ಣ ವಿದ್ಯುತ್ […]

ಕಾರ್ಕಳ ಉತ್ಸವಕ್ಕೆ ರಂಗೇರಿ ನಿಂತಿದೆ ಶಿಲ್ಪಕಾಶಿ ಕಾರ್ಕಳ: ಎಷ್ಟೆಲ್ಲಾ ಕೆಲಸ ಆಗಿದೆ ಗೊತ್ತಾ?

ಕಾರ್ಕಳ :ಕೊನೆಗೂ ಕಾರ್ಕಳ‌ ಉತ್ಸವಕ್ಕೆ ಅಖಾಡ ಸಿದ್ದಗೊಂಡಿದೆ. ಶಿಲ್ಪಕಾಶಿ ಎಂದೇ ಜನಮಾನಸದಲ್ಲಿ ಛಾಪು ಹೊತ್ತಿರುವ ಕಾರ್ಕಳದಲ್ಲೀಗ ಎಲ್ಲೆಡೆ ಜಗಮಗ, ಸಂಭ್ರಮ, ಸಡಗರದ ಅಬ್ಬರ. ಮಾ.10 ರಿಂದ ಮಾ.20 ರವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಭರ್ಜರಿ ಚಾಲನೆ ಸಿಗಲಿದೆ. ಬೀದಿ ಬೀದಿಗೂ ಬೆಳಕಿನ ಉತ್ಸವ: ಕಾರ್ಕಳ ನಗರದಲ್ಲೀಗ ಪ್ರತೀ ಬೀದಿ ಬೀದಿಯೂ ಸಿಂಗಾರಗೊಂಡಿದ್ದು ಪ್ರತೀ ಬೀದಿಯನ್ನೂ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ.  ಮೈಸೂರು ಚಾಮುಂಡೇಶ್ವರಿ ವಿದ್ಯುತ್ ನಿಗಮ ಮಂಡಳಿಯ ಇಂಜಿನಿಯರ್ ಗಳು ಈಗಾಗಲೆ ಸಂಪೂರ್ಣ  ವಿದ್ಯುತ್ […]