ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ನಿಂದ ‘ವೀ ದಿ ಪೀಪಲ್ ಆಫ್ ಇಂಡಿಯಾ’ ನಾಟಕ ಪ್ರದರ್ಶನ

ಉಡುಪಿ: ಭಾರತದ ಎಲ್ಲರೂ  ನಮ್ಮ ಸಂವಿಧಾನವನ್ನು ಸರಿಯಾದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಂಡರೆ, ನಾವು ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳು  ಸರಳವಾಗಿ ಪರಿಹಾರವಾಗುತ್ತದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕರಾದ ಸಂದೇಶ್ ಜವಳಿ ನುಡಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ಶಿವಮೊಗ್ಗ ರಂಗಾಯಣದ ಭಾರತ ಸಂವಿಧಾನದ ಕುರಿತ ನಾಟಕ ‘ವೀ ದಿ ಪೀಪಲ್ ಆಫ್ ಇಂಡಿಯಾ’ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಅಸಮಾನತೆ, ಅನ್ಯಾಯ, ಜಾತಿ ಮತ್ತು ಧರ್ಮದ ತಾರತಮ್ಯದ ಸಮಸ್ಯೆಗಳನ್ನು […]

ಮಣಿಪಾಲ: ಉಚಿತ ಗ್ಲುಕೋಮಾ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಗ್ಲುಕೋಮಾ ಕಾಯಿಲೆಯು ಶಾಶ್ವತ ಕುರುಡುತನಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಗ್ಲುಕೋಮಾದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಗ್ಲುಕೋಮಾ ವಾರವನ್ನು ಪ್ರತಿವರ್ಷ ಮಾರ್ಚ್ ಎರಡನೇ ವಾರದಲ್ಲಿ  ವಿಶ್ವಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಗ್ಲುಕೋಮಾ ವಾರ 2022 ರ ಅಂಗವಾಗಿ  ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ  ನೇತ್ರಶಾಸ್ತ್ರ ವಿಭಾಗ ಮತ್ತು ಆಪ್ಟೋಮೆಟ್ರಿ ವಿಭಾಗ –MCHP ಇವರ ಸಂಯುಕ್ತ ಆಶ್ರಯದಲ್ಲಿ 7 ನೇ ಮಾರ್ಚ್ 2022ರಂದು ಎರಡನೇ ಮಹಡಿಯಲ್ಲಿರುವ ನೇತ್ರಶಾಸ್ತ್ರ ವಿಭಾಗದ ಹೊರ ರೋಗಿ ವಿಭಾಗದಲ್ಲಿ  ಉಚಿತ […]

ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ಎರಟಾಡಿ ವಿಷ್ಣುಮೂರ್ತಿ ದೇವರಿಗೆ ನೂತನ ರಥ, ಆವರಣ ಗೋಡೆ ಸಮರ್ಪಣೆ

ಕಡಬ: ಪದವಿಭೂಷಣ ಪುರಸ್ಕೃತ ಹಿರಿಯ ಸಂತ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ದ.ಕ‌ ಜಿಲ್ಲೆ ಕಡಬ ತಾಲೂಕು ಹಳೇನೇರಂಕಿ ಗ್ರಾಮದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವರಿಗೆ ನೂತನವಾಗಿ ನಿರ್ಮಿಸಲಾಗಿರುವ ಚಂದ್ರಮಂಡಲ ರಥ ಹಾಗೂ ದೇವಾಲಯಕ್ಕೆ ನಿರ್ಮಿಸಲಾದ ಆವರಣಗೋಡೆಯ ಸಮರ್ಪಣೆ ಕಾರ್ಯಕ್ರಮಗಳು ಭಾನುವಾರ ಸೋಮವಾರ ನೆರವೇರಿತು. ರಾಜ್ಯ ಮುಜರಾಯಿ ಇಲಾಖೆಯ ಇಪ್ಪತ್ತು ಲಕ್ಷ ರೂ ಅನುದಾನ‌ ಹಾಗೂ ಭಕ್ತರ ನೆರವಿನಿಂದ ಈ ನಿರ್ಮಾಣಗಳು ನಡೆದಿವೆ. ಭಾನುವಾರ ಸಂಜೆ ರಾಜ್ಯ ಬಂದರು ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಮಂತ್ರಿ […]