ಕಾರ್ಕಳ: ಅಸ್ವಸ್ಥಗೊಂಡು ಮಹಿಳೆ ಸಾವು

ಕಾರ್ಕಳ: ಅಸ್ವಸ್ಥಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ತಾರೆದಡ್ಡು ಎಂಬಲ್ಲಿ ನಡೆದಿದೆ. ಈದು ಗ್ರಾಮದ ತಾರೆದಡ್ಡು ನಿವಾಸಿ 34 ವರ್ಷದ ಮಮತಾಶ್ರೀ ಮೃತ ದುರ್ದೈವಿ. ಇವರು ಫೆ‌. 28ರಂದು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಮತಾಶ್ರೀ ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತೆಕಟ್ಟೆ: ಬಸ್- ಸ್ಕೂಟರ್ ಮಧ್ಯೆ ಭೀಕರ ಅಪಘಾತ; ತಂದೆ- ಮಗಳು ದುರ್ಮರಣ

ಉಡುಪಿ: ಬಸ್ ಮತ್ತು ಸ್ಕೂಟರ್‌ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗಳು ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂತೆಕಟ್ಟೆ ಜಂಕ್ಷನ್‌ ನಲ್ಲಿ ನಡೆದಿದೆ. ಮೃತರನ್ನು ಗರಡಿಮಜಲು ನಿವಾಸಿಗಳಾದ 58 ವರ್ಷದ ಗಣೇಶ್‌ ಪೈ ಮತ್ತು ಅವರ ಮಗಳು ಗಾಯತ್ರಿ ಪೈ ಎಂದು ಗುರುತಿಸಲಾಗಿದೆ. ಗಣೇಶ್ ಅವರು ಹುಬ್ಬಳಿಯಿಂದ ಆಗಮಿಸಿದ್ದ ತನ್ನ ಮಗಳು ಗಾಯತ್ರಿ ಪೈ ಅವರನ್ನು ಕರೆದುಕೊಂಡು ಹೋಗಲು ಸ್ಕೂಟರ್‌ ನಲ್ಲಿ ಬಂದಿದ್ದರು. ಆಕೆಯನ್ನು ಕರೆದುಕೊಂಡು ಸಂತೆಕಟ್ಟೆ ಜಂಕ್ಷನ್‌ ಬಳಿ ರಸ್ತೆ ದಾಟುತ್ತಿದ್ದಾಗ […]