ಮಧ್ವ ಪರಂಪರೆಯ ಐತಿಹಾಸಿಕ ಮಹಿಮೆ: ತಂದೆಯವರು ತೋರಿಸಿದ ಪುರಾಣ ದರ್ಶನವಿದು!: ಲಾತವ್ಯ ಬರಹ
ತಪಸ್ಸು ಶ್ರೀನೃಸಿಂಹ ದೇವರಿಗಾಗಿ.. ಒಲಿದದ್ದು ರುದ್ರದೇವರು.. ಹರಿದದ್ದು ಶ್ರೀಪಾದರ ಕಣ್ಣೀರ ಕೋಡಿ.. ನಮ್ಮ ಬಾಲ್ಯದಲ್ಲಿ ತಂದೆ ಶ್ರೀ ವಿಠಲ ಆಚಾರ್ಯರು ಧರ್ಮ, ದೇವರುಗಳಿಗೆ ಸಂಬಂಧಿಸಿದ ಏನಾದರೊಂದು ಕತೆಯನ್ನೋ ಇಲ್ಲಾ ಅವರ ಅನುಭವವನ್ನೋ ಆಗಾಗ್ಗೆ ತೆರೆದಿಡುತ್ತಿದ್ದರು. ಅವರು ಹೇಳುತ್ತಿದ್ದ ಕೆಲವು ಸತ್ಯ ಘಟನೆಗಳು ದಂತ ಕತೆಗಳಂತೆ ಭಾಸವಾಗುತ್ತಿತ್ತು. ಇದೂ ಸಾಧ್ಯವೇ ಅನ್ನುವಷ್ಟರ ಮಟ್ಟಿಗೆ ಸಂಕೀರ್ಣತೆಯಿಂದ ಕೂಡಿರುತ್ತಿದ್ದವು. ಒಮ್ಮೆ 90ರ ದಶಕದಲ್ಲಿ ತಂದೆಯವರು ಹೇಳಿದ್ದ ಒಂದು ಘಟನೆಯನ್ನು ಬೆಂಬತ್ತಿ ಸಾಗಿದಾಗ ನಾನು ಮೂಕವಿಸ್ಮಿತನಾಗಿದ್ದೆ.. ಆಚಾರ್ಯ ಮಧ್ವರ ಯತಿ ಪರಂಪರೆಯಲ್ಲಿ ಸಂಭವಿಸಿದ […]