ಭೌಗೋಳಿಕ ರಾಜಕೀಯ ಸಮಸ್ಯೆಗೆ ಯುದ್ಧ ಪರಿಹಾರವಲ್ಲ: ಪ್ರೊ.ಎಂ.ಡಿ. ನಲಪತ್
ಮಣಿಪಾಲ: ರಷ್ಯಾ- ಉಕ್ರೇನ್ ಸಂಘರ್ಷದ ಈ ಸಂದರ್ಭದಲ್ಲಿ ಯುದ್ಧ ಅಪೇಕ್ಷಣೀಯ ಆಯ್ಕೆಯಲ್ಲ ಎಂದು ಯುನೆಸ್ಕೋ ಶಾಂತಿ ಪೀಠದ ಪ್ರೊ.ಎಂ.ಡಿ ನಲಪತ್ ಹೇಳಿದರು. “ಕಳೆದ ಕೆಲವು ವರ್ಷಗಳಲ್ಲಿನ ಭೌಗೋಳಿಕ ರಾಜಕೀಯ ಸನ್ನಿವೇಶಗಳು ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿವೆ, ಆದರೆ ಸೇನಾ ದಾಳಿಯ ಆಯ್ಕೆ ಇದಕ್ಕೆ ಪರಿಹಾರವಲ್ಲ” ಎಂದು ಅವರು ಪ್ರತಿಪಾದಿಸಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮಾಹೆಯ ಆಶ್ರಯದಲ್ಲಿ ನಡೆದ ‘ರಷ್ಯಾ, ಉಕ್ರೇನ್, ಯುದ್ಧ ಮತ್ತು ಶಾಂತಿ’ ಕುರಿತ ವಿಶೇಷ ಉಪನ್ಯಾಸದಲ್ಲಿ ಯುನೆಸ್ಕೋ ಶಾಂತಿ ಪೀಠದ […]
ಶಾಸಕರೇ ವಸ್ತ್ರ ಸಂಹಿತೆ ವಿಚಾರದಲ್ಲಿ ಶಾಂತಿ ಕದಡುವ ಕೆಲಸ ಬಿಟ್ಟು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ವೇತನ ನೀಡುವತ್ತ ಗಮನ ನೀಡಿ: ಡಿಯೋನ್ ಡಿʼಸೋಜಾ
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸ್ತುತ ಸ್ಥಿತಿಗತಿಗೆ ಕಾರಣವಾದ ಪ್ರಸ್ತುತ ಶಾಸಕ ರಘುಪತಿ ಭಟ್ ಅವರಿಗೆ ಆರೋಗ್ಯದ ವಿಚಾರದಲ್ಲಿ ಇರುವ ಕಾಳಜಿಯನ್ನು ಏನು ಎನ್ನುವುದನ್ನು ಎದ್ದು ತೋರಿಸುತ್ತದೆ. ಅವರ ದಿವ್ಯ ನಿರ್ಲಕ್ಷ್ಯದ ಪರಿಣಾಮ ಇಂದು ಅಲ್ಲಿನ ಸಿಬ್ಬಂದಿಗಳು ಕಷ್ಟ ಪಡುವಂತಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಡಿಯೋನ್ ಡಿಸೋಜಾ ಆರೋಪಿಸಿದ್ದಾರೆ. ಜಿಲ್ಲೆಯ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಉತ್ತಮ ಆರೋಗ್ಯ ಸವಲತ್ತುಗಳು ಸಿಗಬೇಕು ಎಂಬ ಕನಸನ್ನು ಇಟ್ಟುಕೊಂಡು […]
ಉಡುಪಿ ಶ್ರೀ ಕೃಷ್ಣಮಠಕ್ಕೆ ಚಿತ್ರನಟಿ ಹರಿಪ್ರಿಯಾ ಭೇಟಿ
ಉಡುಪಿ: ಉಡುಪಿ ಶ್ರೀ ಕೃಷ್ಣಮಠಕ್ಕೆ ಕನ್ನಡ ಚಿತ್ರನಟಿ ಹರಿಪ್ರಿಯಾರವರು ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಆಚಾರ್ ಇವರಿಂದ ಪ್ರಸಾದ ಸ್ವೀಕರಿಸಿದರು.
“ವಿ ದ ಪೀಪಲ್ ಆಫ್ ಇಂಡಿಯಾ” ನಾಟಕ ಪ್ರದರ್ಶನ
ಬ್ರಹ್ಮಾವರ: “ಮಂದಾರ” ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಹಾಗೂ ದಿಮ್ಸಾಲ್ ನಾಟಕ ಶಾಲೆ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಆಯೋಜನೆಗೊಂಡ ರಂಗಾಯಣ ಶಿವಮೊಗ್ಗ ಇವರ “ವಿ ದ ಪೀಪಲ್ ಆಫ್ ಇಂಡಿಯ” ನಾಟಕವು ಫೆ.26 ರಂದು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಪ್ರದರ್ಶನಗೊಂಡಿತು. ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಾದ ರಾಜಶೇಖರ್ ಮೂರ್ತಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು “ಎರಡುವರೆ ಸಾವಿರ ವರ್ಷಗಳಿಂದ ನಾವು ಜಾತಿ, ಧರ್ಮ, ಭಾಷಾ ವ್ಯಕ್ತಿ, ಪ್ರಾದೇಶಿಕ ವ್ಯಕ್ತಿಗಳಾಗಿ ಬದುಕಿದ್ದೀವಿ ಇದೆಲ್ಲವನ್ನೂ […]
ಪೋಲಿಯೋ ನಿರ್ಮೂಲನೆಗೆ ಸಹಕರಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
ಉಡುಪಿ, ಫೆ27: ಎಲ್ಲಾ ಪೋಷಕರು 0-5 ವರ್ಷದೊಳಗಿನ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸುವ ಮೂಲಕ ವಿಶ್ವದಿಂದ ಪೋಲೀಯೋವನ್ನು ನಿರ್ಮೂಲನೆ ಮಾಡಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು, ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ 2011ರಿಂದ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ ಆದರೆ ಪಕ್ಕದ ದೇಶದಲ್ಲಿ ಪೋಲಿಯೋ ಪ್ರಕರಣಗಳು ಕಂಡು ಬಂದಿದ್ದು, ಆ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೂಲಕ ಹರಡುವ ಸಾಧ್ಯತೆಗಳಿದ್ದು, […]