ಕಿದಿಯೂರು ಗ್ರಾಮದ ಯುವತಿ ನಾಪತ್ತೆ

ಉಡುಪಿ ತಾಲೂಕು ಕಿದಿಯೂರು ಗ್ರಾಮದ ನಿವಾಸಿ 23 ವರ್ಷದ ಏಕತಾ ವರ್ಮಾ ಎಂಬ ಯುವತಿಯು ಫೆ.21 ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಣಿಪಾಲಕ್ಕೆ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಚಹರೆ: 5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂಖ್ಯೆ: 0820-2537 999, ಪಿ.ಎಸ್.ಐ ಮೊ.ಸಂಖ್ಯೆ: 9480805447 ಹಾಗೂ ಮಲ್ಪೆ ವೃತ್ತ ನಿರೀಕ್ಷಕರು ಮೊ.ನಂ: 9480805430 […]

ಭಾರತದಲ್ಲಿ ಬ್ಯಾನ್, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಟಿಕ್ ಟಾಕ್ ಫ್ಯಾನ್! ಐತಿಹಾಸಿಕ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದ ಟಿಕ್ ಟಾಕ್

  ದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಗಡಿ ತಕರಾರು ಉಲ್ಭಣಗೊಂಡ ನಂತರ ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಚೀನಾ ವಸ್ತುಗಳ ಮತ್ತು ಚೀನೀ ಅಪ್ಲಿಕೇಷನ್ ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಭಾರತವು ಬ್ಯಾನ್ ಮಾಡಿರುವ ಚೀನೀ ಅಪ್ಲಿಕೇಷನ್ ಗಳಲ್ಲಿ ಟಿಕ್ ಟಾಕ್ ಕೂಡಾ ಒಂದಾಗಿದೆ. ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಗಳಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿದ್ದು, ಇಂತಹ ಅಪ್ಲಿಕೇಷನ್ ಗಳನ್ನು ಭಾರತವು ಬ್ಯಾನ್ ಮಾಡಿದೆ. ಚೀನೀ ಅಪ್ಲಿಕೇಷನ್ ಗಳ ಮೇಲೆ […]

ಯುದ್ಧ ಪೀಡಿತ ಉಕ್ರೇನ್‌ನಿಂದ ತನ್ನ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ನೋಡಲ್ ಅಧಿಕಾರಿಯನ್ನು ನೇಮಿಸಿದ ರಾಜ್ಯ ಸರ್ಕಾರ

  ಬೆಂಗಳೂರು: ರಷ್ಯಾ-ಉಕ್ರೇನ್ ಯುದ್ಧದ ನಡುವೆ ಕರ್ನಾಟಕ ಸರ್ಕಾರವು ಯುದ್ಧ ಪೀಡಿತ ಪೂರ್ವ ಯುರೋಪಿಯನ್ ರಾಷ್ಟ್ರದಿಂದ ತನ್ನ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅನುಕೂಲವಾಗುವಂತೆ ನೋಡಲ್ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ನಾಗರಿಕರನ್ನು ಆಯಾಯ ಸ್ಥಳಗಳಿಗೆ ಸುರಕ್ಷಿತವಾಗಿ ತಲುಪಿಸಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರವು ನೋಡಲ್ ಅಧಿಕಾರಿಯನ್ನು ನೇಮಿಸಿದೆ. ನೋಡಲ್ ಕಚೇರಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೀವ್ ನಲ್ಲಿ ಭಾರತದ ರಾಯಭಾರಿ ಕಚೇರಿಯೊಂದಿಗೆ ಸಮನ್ವಯ ಸಾಧಿಸುತ್ತದೆ ಮತ್ತು ಉಕ್ರೇನ್ ನಲ್ಲಿ ಸಿಕ್ಕಿಬಿದ್ದಿರುವ ಜನರನ್ನು ಸ್ಥಳಾಂತರಿಸಲು […]

ಯುಕ್ರೇನ್ ನಲ್ಲಿ ಸಿಲುಕಿರುವ ಉಡುಪಿಯ ಮೂವರು ವಿದ್ಯಾರ್ಥಿಗಳು

ಉಡುಪಿ: ಯುದ್ಧ ಪೀಡಿತ ಯುಕ್ರೇನ್ ನಲ್ಲಿ ಉಡುಪಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಡಾ.ಧನಂಜಯ ಅವರ ಪುತ್ರ ರೋಹನ್ ಉಕ್ರೇನ್‌ನ ಕಾರ್ಕೀವ್‌ನಲ್ಲಿರುವ ನೇಷನಲ್ ಮೆಡಿಕಲ್ ಯುನಿರ್ವಸಿಟಿಯಲ್ಲಿ ಐದನೇ ಹಾಗೂ ಅಂತಿಮ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಅವರೊಂದಿಗೆ ಮುಂದಿನ ಮೇ ತಿಂಗಳ ವೇಳೆ ಅವರ ಕೋರ್ಸ್ ಮುಗಿಯಲಿತ್ತು. ಇವರೊಂದಿಗೆ ಕಾರ್ಕಳ ಹಾಗೂ ಹಿರಿಯಡ್ಕ ಮೂಲದ ಪುಣೆಯ ಇಬ್ಬರು ಸಹ ಇದೇ ಮೆಡಿಕಲ್ […]