ಉಡುಪಿ: ವೈರಲ್ ವಾಸಣ್ಣ ಆಸ್ಪತ್ರೆ ದಾಖಲು

ಉಡುಪಿ,ಫೆ.21; ಆಶೀರ್ವಾದ ಚಿತ್ರಮಂದಿರದ ಬಳಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ಸೋಮವಾರ ನಡೆದಿದೆ.ಆಟೋ ಚಾಲಕ ಆದಂ ಸಹಕರಿಸಿದ್ದಾರೆ. ರೋಗಿಯನ್ನು ಮಲ್ಪೆಯ ವೈರಲ್ ವಾಸಣ್ಣ ಎಂದು ಗುರುತಿಸಲಾಗಿದೆ. ಸಂಬಂಧಿಕರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಶಿವಮೊಗ್ಗ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಇಬ್ಬರ ಬಂಧನ

  ಶಿವಮೊಗ್ಗ: ಫೆ. 20 ರಂದು ಶಿವಮೊಗ್ಗ ಜಿಲ್ಲೆಯ ಸೀಗೆ ಹಟ್ಟಿಯಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ(24) ನನ್ನು ಬರ್ಬರವಾಗಿ ಕೊಲೆಗೈಯಲಾಗಿದ್ದು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಎಡಿಜಿಪಿಎಸ್ ಮುರುಗನ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗನ್, ನಗರದಲ್ಲಿ ಕಾನೂನು ಸುವ್ಯವಸ್ಥೆಹದಗೆಡಲು ಬಿಡುವುದಿಲ್ಲ, ಶಾಂತಿ ಕಾಪಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ ಮತ್ತು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದೇವೆ. ಜನರು ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಭಜರಂಗದಳ ಕಾರ್ಯಕರ್ತನ ಹತ್ಯೆಯಿಂದ ಜಿಲ್ಲೆಯಾದ್ಯಂತ ಉದ್ವಿಗ್ನ ಪರಿಸ್ಥಿತಿ […]

ಉಡುಪಿ: ಬೇಸ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿನಿ ಭಾರ್ಗವಿ ಬೋರ್ಕರ್ ಪುಣೆಯ ಎಎಫ್ಎಂಸಿಗೆ ಆಯ್ಕೆ 

ಈ ಸಂಸ್ಥೆಗೆ 2021 ನೇ ಸಾಲಿಗೆ ಆಯ್ಕೆಯಾದ ಉಡುಪಿಯ ವಿದ್ಯಾರ್ಥಿನಿ ಉಡುಪಿ ಬೇಸ್ ಕೋಚಿಂಗ್ ಸಂಸ್ಥೆಯ ವಿದ್ಯಾರ್ಥಿನಿ ಭಾರ್ಗವಿ ಬೋರ್ಕರ್ ಅವರು ಪುಣೆಯ ಆರ್ಮಡ್ ಪೋರ್ಸ್ ಮೆಡಿಕಲ್ ಕಾಲೇಜ್ (ಎಎಫ್ಎಂಸಿ) ಗೆ ಆಯ್ಕೆಯಾಗಿದ್ದಾರೆ. ಈ ಸಂಸ್ಥೆಗೆ ಆಯ್ಕೆಯಾದವರಲ್ಲಿ ಭಾರ್ಗವಿ ಅವರು ಕರ್ನಾಟಕದ ಮೂವರು ವಿದ್ಯಾರ್ಥಿನಿಯರ ಪೈಕಿ ಒಬ್ಬಳಾಗಿದ್ದು, ಭಾರತದ ಮೂವತ್ತು ವಿದ್ಯಾರ್ಥಿನಿಯರಲ್ಲಿ ಭಾರ್ಗವಿ ಒಬ್ಬರಾಗಿದ್ದಾರೆ. ಪುಣೆಯ ಎಎಫ್ ಎಂಸಿ ಸಂಸ್ಥೆ ದೇಶಾದ್ಯಂತ ವರ್ಷಕ್ಕೆ ಮೂವತ್ತು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಕರ್ನಾಟಕದಿಂದ ಮೂವರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. […]

ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಗೆ ಉಡುಪಿ ಜಿಲ್ಲಾ ಬಿಜೆಪಿ ತೀವ್ರ ಖಂಡನೆ: ಹಂತಕರನ್ನು ಕಾನೂನಾತ್ಮಕ ಗಲ್ಲು ಶಿಕ್ಷೆಗೆ ಗುರಿಪಡಿಸಲು ಕುಯಿಲಾಡಿ ಆಗ್ರಹ

ಉಡುಪಿ: ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ಫೆ.20 ರಂದು ನಡೆದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಿಂದೂ ಯುವ ಕಾರ್ಯಕರ್ತನ ಹತ್ಯೆ ಪ್ರಕರಣ ಹಿಂದೂ ಸಮಾಜವನ್ನು ಭೀತಿಗೊಳಪಡಿಸುವ ದುಷ್ಕೃತ್ಯವಾಗಿದೆ. ಮೊಗಲ್ ಕಾಲದಿಂದಲೂ ಈ ರೀತಿಯ ಭೀತಿ ಇದ್ದರೂ ಕೂಡಾ ಹಿಂದೂ ಸಮಾಜ ಯಾವುದಕ್ಕೂ ಜಗ್ಗದೆ ತಲೆ ಎತ್ತಿ ನಿಂತಿದೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹಿಂದೂ ಸಮಾಜ ಎಂದೂ ಸೊಪ್ಪು ಹಾಕದು. ಈ ಹಿಂದೆಯೂ ರಾಜ್ಯದಲ್ಲಿ ನಡೆದ ಹಲವಾರು ಹಿಂದೂ […]

ಮನೆ ಮನೆ ಮಾತಾಗಲಿರುವ ಕಾರ್ಕಳ ಉತ್ಸವ: ಮಾರ್ಚ್ 10 ರಿಂದ 20 ರವರೆಗೆ ಸಂಸ್ಕೃತಿಯ ರಸದೌತಣ

ಕಾರ್ಕಳ: ಮಾರ್ಚ್ 10 ರಿಂದ 20 ರವರೆಗೆ ಕಾರ್ಕಳ ದಲ್ಲಿ ನಡೆಯುವ ಕಾರ್ಕಳ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೋಮವಾರದಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಇದು ಮನೆ ಮನೆ ಮಾತಾಗಲಿದೆ ಎಂದರು. ನ್ಯಾಯವಾದಿ ಎಂ.ಕೆ ವಿಜಯ ಕುಮಾರ್, ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ್ ಪ್ರಭು, ಅನಂತ ಪದ್ಮನಾಭ ದೇವಸ್ಥಾನದ […]