ಕುಂದಾಪುರ: ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್ ವತಿಯಿಂದ ಉಚಿತ ವೈದ್ಯಕೀಯ ಶಿಬಿರ
ಕುಂದಾಪುರ: ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್ ವತಿಯಿಂದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವು ಶುಕ್ರವಾರದಂದು ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆಯಿತು. ಸುಮಾರು 150 ರೋಗಿಗಳು ಶಿಬಿರದ ಪ್ರಯೋಜನವನ್ನು ಪಡೆದರು. ಈ ಸಂದರ್ಭದಲ್ಲಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಶೋಕ್, ಗಿರಿಜಾ ಹೆಲ್ತ್‌ಕೇರ್ ಮತ್ತು ಸರ್ಜಿಕಲ್ಸ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಯತೀಶ್ ಕುಮಾರ್, ಕೃಷ್ಣ, ಹೇಮಾ ಯತೀಶ್ ಉಪಸ್ಥಿತರಿದ್ದರು.
ದ.ಕ ಜಿಲ್ಲೆಯಲ್ಲಿ ಕಡತ ವಿಲೇವಾರಿ ಅಭಿಯಾನ: ಫೆ. 28 ರೊಳಗೆ ಬಾಕಿ ಇರುವ 82000 ಕಡತಗಳಿಗೆ ಮುಕ್ತಿ: ಸುನಿಲ್ ಕುಮಾರ್
ದಕ್ಷಿಣ ಕನ್ನಡದ 45 ಸರಕಾರಿ ಕಚೇರಿಗಳಲ್ಲಿ ಬಾಕಿ ಉಳಿದಿರುವ 82,400 ಕಡತಗಳನ್ನು ಫೆ.19 ರಿಂದ ಫೆ.28ರೊಳಗೆ ವಿಶೇಷ ಕಡತ ತೆರವು ಅಭಿಯಾನದಡಿ ವಿಲೇವಾರಿ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು. ಅವರು ಫೆಬ್ರವರಿ 19 ಶುಕ್ರವಾರದಂದು ಮಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಕಡತ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡುತ್ತಾ ಮಾತನಾಡಿ, ಬಾಕಿ ಉಳಿದಿರುವ ಕಡತಗಳನ್ನು ಬಾಕಿ ಉಳಿದಿರುವ ಹಳೆಯ ಕಡತಗಳು, ಕುಂದುಕೊರತೆಗಳ ಬಾಕಿ ಇರುವ ಅರ್ಜಿಗಳು […]
ಉಡುಪಿಯ ಸುದ್ದಿ ವಾಹಿನಿಯಲ್ಲಿದೆ ಉದ್ಯೋಗಾವಕಾಶ:ಕೂಡಲೇ ಅರ್ಜಿ ಸಲ್ಲಿಸಿ
ಉಡುಪಿ:ಉಡುಪಿಯಲ್ಲಿ ಹೊಸದಾಗಿ ಆರಂಭಗೊಳ್ಳುತ್ತಿರುವ ಸುದ್ದಿವಾಹಿನಿಯೊಂದಕ್ಕೆ ಕೂಡಲೇ ಟಿವಿ ಮಾಧ್ಯಮದ PCR MCR ಕುರಿತು ಅನುಭವವಿರುವ ,ಸಮರ್ಥವಾಗಿ ನಿರ್ವಹಿಸಬಲ್ಲ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ವೇತನ ಹಾಗೂ ವಸತಿ ಸೌಲಭ್ಯ ಕೂಡ ಲಭ್ಯವಿದೆ.ಉಡುಪಿ ಜಿಲ್ಲೆಯವರಿಗೆ ಮೊದಲ ಆದ್ಯತೆ.ಕೂಡಲೇ ಸಂಪರ್ಕಿಸಿ: ನಿಮ್ಮ ಹೆಸರು ವಿವರ ಮೊಬೈಲ್ ಸಂಖ್ಯೆ ಇ-ಮೇಲ್/Whtsapp (7483419099) ಮಾಡಿ [email protected]
ನ್ಯಾಯಾಂಗ ವ್ಯವಸ್ಥೆಯ ಕೆಲ ಲೋಪ ದೋಷಗಳಿಗೆ ಪರಿಹಾರ ಕಂಡುಕೊಂಡಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅಭಿಮತ
ಉಡುಪಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವ ಕೆಲವೊಂದು ಮೂಲಭೂತ ಲೋಪದೋಷಗಳಿಗೆ ಪರಿಹಾರ ಕಂಡುಕೊಂಡಲ್ಲಿ ಪ್ರಕರಣಗಳ ಶೀಘ್ರ ಇತ್ಯರ್ಥ ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಹೇಳಿದ್ದಾರೆ. ಉಡುಪಿ ನ್ಯಾಯಾಲಯದ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯದ ಕಟ್ಟಡದ ಮೂರನೇ ಮಹಡಿ, ನೂತನ ಎರಡನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ, ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿ.ಸಿ. ಕ್ಯಾಬಿನ್ ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕೋರ್ಟ್ ಗಳಲ್ಲಿರುವ ಕೇಸ್ […]
ಮಣಿಪಾಲದಲ್ಲಿ ಅಕ್ಕನ ಮಗನಿಂದಲೇ ಮಹಿಳೆಯ ಕೊಲೆ ಯತ್ನ: ಇಬ್ಬರು ಆರೋಪಿಗಳ ಸೆರೆ
ಮಣಿಪಾಲ: ರಾತ್ರಿ ವೇಳೆ ಒಂಟಿಯಾಗಿದ್ದ ಮಹಿಳೆಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಮಣಿಪಾಲದ ಮಂಚಿಕುಮೇರಿ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕೊಲೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಸ್ಥಳೀಯರು ಸೆರೆಹಿಡಿದು ಮಣಿಪಾಲ ಪೊಲೀಸರಿಗೊಪ್ಪಿಸಿದ್ದಾರೆ. ಮಣಿಪಾಲದ ಶಿವಳ್ಳಿ ಗ್ರಾಮದ ರಮಾನಾಥ್ ರೈ ಅವರ ಪತ್ನಿ ಸುಮತಿ ರೈ ಅವರು ರಾತ್ರಿ ಒಬ್ಬರೇ ಮನೆಯಲ್ಲಿದ್ದರು. ಈ ವೇಳೆ ಮನೆಯೊಳಗೆ ಬಂದ ಸುಮತಿಯವರ ಅಕ್ಕನ ಮಗ ಮಂಗಳೂರಿನ ಮಿಥುನ್ ಮತ್ತು ಆತನ ಸ್ನೇಹಿತ ನಾಗೇಶ್ ಸುಮತಿಯವರ ಕೊಲೆ ಯತ್ನ ಮಾಡಿದ್ದಾರೆ. ತಕ್ಷಣ ಮನೆಗೆ […]