128ನೇ ಭಜನಾ ಮಂಗಲೋತ್ಸವ: ಸಾವಿರಾರು ಭಕ್ತರಿಗೆ ಲಾಡು ವಿತರಣೆ
ಉಡುಪಿ: ಹರಿಖಂಡಿಗೆ ಸಮೀಪದ ಕಾರ್ಣಿಕ ಕೇತ್ರ ದೊಂಡೇರಂಗಡಿ ಶ್ರೀ ರಾಮ ಮಂದಿರದಲ್ಲಿ 33 ನೇ ಪುನರ್ ಪ್ರತಿಷ್ಠಾ ವರ್ಧಂತಿ ಹಾಗೂ 128ನೇ ಭಜನಾ ಮಂಗಲೋತ್ಸವ ಶನಿವಾರ ಮುಂಜಾನೆ ಆರಂಭಗೊಂಡಿದ್ದು ಊರ ಪರಊರ ಸಂತ ಮಂಡಳಿಗಳಿಂದ ಅಹೋ ರಾತ್ರಿ ಏಕಾಹ ಭಜನೆ ನೆಡೆಸಿ, ರಾತ್ರಿ ರಂಗಪೂಜೆ, ದೀಪಾರಾಧನೆ ನಡೆಯಿತು.ಆದಿತ್ಯವಾರ 128ನೇ ಭಜನಾ ಮಂಗಲೋತ್ಸವ ಅಂಗವಾಗಿ ಶ್ರೀ ರಾಮ ದೇವರಿಗೆ ವಿಶೇಷ ಹೂವಿನ ಅಲಂಕಾರ, ನೂರಾರು ಭಕ್ತರಿಂದ ವಿವಿಧ ಬಗೆಯ ಹರಕೆ ರೂಪವಾಗಿ ಸಂತಾನ ಭಾಗ್ಯ, ವಿವಾಹ, ಗ್ರಹ ನಿರ್ಮಾಣ, […]
ಉಡುಪಿ: ಪಿಯು ಪ್ರಾಯೋಗಿಕ ಪರೀಕ್ಷೆ ನಾಳೆಗೆ ಮುಂದೂಡಿಕೆ
ಉಡುಪಿ, ಫೆ.17: ಇಂದಿನಿಂದ ಪ್ರಾರಂಭಗೊಳ್ಳಬೇಕಿದ್ದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರಾಯೋಗಿಕ ಪರೀಕ್ಷೆಗಳನ್ನು ತಾಂತ್ರಿಕ ಕಾರಣಗಳಿಂದಾಗಿ ನಾಳೆಗೆ ಮುಂದೂಡಲಾಗಿದೆ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ನಾಳೆಯಿಂದ ಪ್ರಾಯೋಗಿಕ ಪರೀಕ್ಷೆಗಳು ಪಾರಂಭಗೊಳ್ಳಲಿವೆ ಎಂದವರು ಹೇಳಿದ್ದಾರೆ. ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗಳನ್ನು ಇಂದಿನಿಂದ ಮಾ.25ರೊಳಗೆ ಮುಗಿಸಲು ರಾಜ್ಯ ಪ.ಪೂ. ಶಿಕ್ಷಣ ಮಂಡಳಿ ಸೂಚನೆ ನೀಡಿದೆ. ಅದರಂತೆ ಜಿಲ್ಲೆಯ ವೇಳಾಪಟ್ಟಿ ತಯಾರಿಸಲಾಗುವುದು ಎಂದು ಮಾರುತಿ ತಿಳಿಸಿದ್ದಾರೆ. ಇಂದು ನಡೆಯಬೇಕಿದ್ದ ಪ್ರಾಯೋಗಿಕ ಪರೀಕ್ಷೆಯನ್ನು ಮಾ.11ರಂದು ನಡೆಸಲಾಗುತ್ತಿದೆ […]
ಉಡುಪಿ: ಮಹಿಳೆ ನಾಪತ್ತೆ
ಉಡುಪಿ, ಫೆ.17: ಆರೋಗ್ಯ ತಪಾಸಣೆಗೆಂದು ಜಿಲ್ಲಾ ಆಸ್ಪತ್ರೆಗೆ ತೆರಳಿದ್ದ, ನಗರದ ಪುತ್ತೂರು ಗ್ರಾಮದ ನಿಟ್ಟೂರು ಸ್ತ್ರೀ ಸೇವಾ ನಿಕೇತನದಲ್ಲಿ ವಾಸವಿದ್ದ ನಳಿನಿ ದೇವಾಡಿಗ (45) ಎಂಬ ಮಹಿಳೆಯು ಫೆಬ್ರವರಿ 7 ರಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಕಪ್ಪು ಮೈ ಬಣ್ಣ, ಸಪೂರ ಶರೀರ ಹೊಂದಿದ್ದು, ಮಾತನಾಡಲು ಬರುವುದಿಲ್ಲ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುಂತೆ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕಂದಾಯ ಸಚಿವರ ಗ್ರಾಮ ವಾಸ್ತವ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಕೂರ್ಮಾರಾವ್
ಉಡುಪಿ: ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ಕಂದಾಯ ಸಚಿವ ಅಶೋಕ್ ಅವರು ಫೆ. 19ರಂದು ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಸಚಿವರ ಕಾರ್ಯಕ್ರಮಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂದಾಯ ಸಚಿವರು ಮೊದಲಿಗೆ ಕಾರ್ಕಳ ತಾಲೂಕಿಗೆ ಭೇಟಿ […]
ಪಕ್ಷದ ಬೆಳವಣಿಗೆಯಲ್ಲಿ ವಿಸ್ತಾರಕರ ಕಾರ್ಯ ವ್ಯಾಪ್ತಿ, ಜವಾಬ್ದಾರಿ ಮಹತ್ವಪೂರ್ಣ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ‘ಸಶಕ್ತ ಬೂತ್ ಸದೃಢ ಪಕ್ಷ ಸಂಘಟನೆ’ ಪರಿಕಲ್ಪನೆಯಡಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪ್ರತೀ ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖರು ಮತ್ತು ವಿವಿಧ ಸ್ತರದ ಪದಾಧಿಕಾರಿಗಳು ವಿಸ್ತಾರಕರಾಗಿ ಸೇವೆ ಸಲ್ಲಿಸಲಿದ್ದಾರೆ, ಪಕ್ಷದ ಬೆಳವಣಿಗೆಯಲ್ಲಿ ವಿಸ್ತಾರಕರ ಕಾರ್ಯ ವ್ಯಾಪ್ತಿ ಮತ್ತು ಜವಾಬ್ದಾರಿ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಫೆ.16ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ನಡೆದ ಬಿಜೆಪಿ ಬೈಂದೂರು ಮತ್ತು ಕುಂದಾಪುರ ಮಂಡಲಗಳ ವ್ಯಾಪ್ತಿಯ […]