ಜ್ಞಾನಸುಧಾ ಕಾಲೇಜಿನ ಪೂರ್ವ ವಿದ್ಯಾರ್ಥಿ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

ಕಾರ್ಕಳ: ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಸಚಿನ್ ಎಸ್. ಕೋಟ್ಯಾನ್ ಇವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಟ್ಸ್ ಆಫ್ ಇಂಡಿಯಾ  ನಡೆಸುವ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಂದ ತೇರ್ಗಡೆ ಹೊಂದಿದ್ದಾರೆ. ಇವರು ನಿಟ್ಟೆಯ ಶ್ರೀ ಸುಭಾಸ್ ಕೋಟ್ಯಾನ್ ಹಾಗೂ ವನಿತಾ ಕೋಟ್ಯಾನ್ ಇವರ ಸುಪುತ್ರ. ಇವರ ಸಾಧನೆಗೆ ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ  ಹಾಗೂ ಜ್ಞಾನಸುಧಾ ಪರಿವಾರ ಅಭಿನಂದನೆ ಸಲ್ಲಿಸಿದೆ.

ಫೆ.25 ರಿಂದ ಮಂಗಳೂರು- ರಾಯಚೂರು ಮಾರ್ಗದಲ್ಲಿ ರಾಜಹಂಸ ಸಾರಿಗೆ ಕಾರ್ಯಾಚರಣೆ

ಉಡುಪಿ, ಫೆ.16: ಕ.ರಾ.ರ.ಸಾ.ನಿಗಮವು ಮಂಗಳೂರಿನಿಂದ ರಾಯಚೂರಿಗೆ ವಯಾ ಉಡುಪಿ-ಮಣಿಪಾಲ-ಕುಂದಾಪುರ-ಸಿದ್ಧಾಪುರ-ಮಾಸ್ತಿಕಟ್ಟೆ-ನಗರ-ಹೊಸನಗರ-ರಿಪ್ಪನ್‌ಪೇಟೆ- ಆಯನೂರು-ಶಿವಮೊಗ್ಗ-ಹೊನ್ನಾಳಿ-ಹರಿಹರ-ಹರಪನಹಳ್ಳಿ-ಹಗರಿಬೊಮ್ಮನಹಳ್ಳಿ-ಹೊಸಪೇಟೆ-ಗಂಗಾವತಿ-ಸಿಂಧನೂರು-ಮಾನ್ವಿ ಮಾರ್ಗವಾಗಿ ಹೊಸ ರಾಜಹಂಸ ಸಾರಿಗೆ ಕಾರ್ಯಾಚರಣೆಯನ್ನು ಫೆಬ್ರವರಿ 25 ರಿಂದ ಪ್ರಾರಂಭಿಸಲಾಗುತ್ತದೆ. ಈ ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 05.30 ಕ್ಕೆ ರಾಯಚೂರು ತಲುಪುತ್ತದೆ. ಮರು ಪ್ರಯಾಣದಲ್ಲಿ ರಾಯಚೂರಿನಿಂದ ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 06.45 ಕ್ಕೆ ಮಂಗಳೂರಿಗೆ ತಲುಪುವುದು. ಸಾರಿಗೆಯಲ್ಲಿ ಮಂಗಳೂರಿನಿಂದ ರಾಯಚೂರಿಗೆ ಪ್ರತಿ ಪ್ರಯಾಣಿಕರಿಗೆ ಒಟ್ಟು ಪ್ರಯಾಣ ದರ 850 ರೂ. […]

ಹಿಜಾಬ್ ಜಿಹಾದಿ ಷಡ್ಯಂತ್ರ; ಪ್ರಕರಣವನ್ನು ಎನ್ ಐಎ ತನಿಖೆಗೆ ಒಳಪಡಿಸಿ; ಬಜರಂಗದಳ ಒತ್ತಾಯ

ಹಿಜಾಬ್ ಜಿಹಾದ್ ಷಡ್ಯಂತ್ರ ಮುಸ್ಲಿಮ್ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿಕೊಂಡು ಪ್ರತ್ಯೇಕತಾವಾದವನ್ನು ಬಿಂಬಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಜರಂಗದಳ ಆರೋಪಿಸಿದೆ. ಈ ಪ್ರಕರಣದ ಹಿಂದೆ PFI, SDPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದೆ. ಅಲ್ಲದೇ ಇದರ ಹಿಂದೆ ಪಾಕಿಸ್ತಾನ, ತಾಲಿಬಾನ್ ನಂತಹ ಮೂಲಭೂತವಾದಿಗಳು ಬೆಂಬಲ ಕೊಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರ್ನಾಟಕ ಪ್ರಾಂತ ಸಂಯೋಜಕ ಸುನಿಲ್ ಕೆ.ಆರ್. ಹೇಳಿದ್ದಾರೆ. ಬುಧವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ವಿವಾದದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ […]

ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2022- 23 ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕಾಗಿ, ಪ್ರಸ್ತುತ 5 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ, ಪ.ವರ್ಗ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ, ಡಾ.ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆ ನಡೆಸಿ, […]