ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಡಾ. ಸುಬ್ರಹ್ಮಣ್ಯ ಭಟ್ ನೇಮಕ

ಉಡುಪಿ: ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಚಿಂತನೆಗಳನ್ನು ಬೆಳೆಸುವುದರ ಜೊತೆಗೆ ಮೌಢ್ಯವನ್ನು ದೂರ ಮಾಡುವ ಮತ್ತು ಹಲವಾರು ಪ್ರಗತಿಪರ ಯೋಜನೆಗಳನ್ನು ಕಾರ್ಯಾನುಷ್ಠಾನ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಆಯ್ಕೆಯಾಗಿದ್ದಾರೆ. ರಾಜ್ಯದಾದ್ಯಂತ ಕ್ರಿಯಾಶೀಲವಾಗಿರುವ ಕ.ರಾ.ವೈ.ಸಂ.ಪರಿಷತ್ತು ರಾಜ್ಯಾಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅವರ ಮಾರ್ಗದರ್ಶನದಲ್ಲಿ ಜನಸಾಮಾನ್ಯರಲ್ಲೂ ವೈಜ್ಞಾನಿಕ ಚಿಂತನೆಯನ್ನು ಹುಟ್ಟುಹಾಕಿ ಜಾಗೃತಿ ಮೂಡಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಸಂಘಟನೆಯ ಸದಸ್ಯರ ಸಭೆಯಲ್ಲಿ ವೃತ್ತಿಯಲ್ಲಿ ವೈದ್ಯರಾಗಿ, […]

ವಸತಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಉಡುಪಿ, ಫೆ.14: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಡಾ.ಬಿ.ಅರ್ ಅಂಬೇಡ್ಕರ್ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಸ್ವಂತ ನಿವೇಶನ ಹೊಂದಿರುವ, ಸರ್ಕಾರದ ಸಹಾಯಧನವನ್ನು ಹಂತವಾರು ಪಡೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಲು ಅರ್ಹ ವಸತಿ ರಹಿತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಕಳ ಪುರಸಭಾ ವ್ಯಾಪ್ತಿಯ ನಿವಾಸಿಯಾಗಿರುವ, ವಾರ್ಷಿಕ 87600 ರೂ. ಕ್ಕಿಂತ ಕಡಿಮೆ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳು ಏಳು ದಿನಗಳ ಒಳಗಾಗಿ ಕಾರ್ಕಳ ಪುರಸಭಾ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭೆ ಕಛೇರಿಯನ್ನು […]

ಅಡ್ವೆ ನಂದಿಕೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಪಡುಬಿದ್ರೆ: ಭಾನುವಾರ ನಡೆದ 29ನೇ ವರ್ಷದ ಅಡ್ವೆ ನಂದಿಕೂರು “ಕೋಟಿ – ಚೆನ್ನಯ” ಜೋಡುಕರೆ ಕಂಬಳ ಕೂಟದ ಫಲಿತಾoಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 03 ಜೊತೆ ಅಡ್ಡಹಲಗೆ: 07 ಜೊತೆ ಹಗ್ಗ ಹಿರಿಯ: 13 ಜೊತೆ ನೇಗಿಲು ಹಿರಿಯ: 30 ಜೊತೆ ಹಗ್ಗ ಕಿರಿಯ: 17 ಜೊತೆ ನೇಗಿಲು ಕಿರಿಯ: 75 ಜೊತೆ ಒಟ್ಟು ಕೋಣಗಳ ಸಂಖ್ಯೆ: 145 ಜೊತೆ ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ […]

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ರಥೋತ್ಸವ ಸಂಭ್ರಮ

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಕೆಂಡೋತ್ಸವ, ರವಿವಾರ ಶ್ರೀ ಮನ್ಮಹಾರಥೋತ್ಸವ ಸಂಭ್ರಮದಿಂದ ಜರಗಿತು. ಶನಿವಾರದಂದು ಕುಂಭ ಸಂಕ್ರಮಣ, ರಾತ್ರಿ ಕೆಂಡ ಸೇವೆ ನೆರವೇರಿತು. ರವಿವಾರ ಮಧ್ಯಾಹ್ನ ರಥಾವರೋಹಣ, ತಾಲೀಮು, ಸಂಜೆ ರಥೋತ್ಸವ, ಆಕರ್ಷಕ ಸುಡುಮದ್ದು ಪ್ರದರ್ಶನ ನೆರವೇರಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಾರು ಪಾಲ್ಗೊಂಡಿದರು. ಕೆಂಡಸೇವೆ ಮತ್ತು ರಥೋತ್ಸವ ಪ್ರಯುಕ್ತ ಮಹಾ ಅನ್ನಸಂತರ್ಪಣೆ ಜರಗಿತು. ಕಾರ್ಯನಿರ್ವಹಣ ಅಧಿಕಾರಿ ಎಸ್.ಪಿ.ಬಿ. ಮಹೇಶ, ಅನುವಂಶಿಕ ಮೊಕ್ತೇಸರರಾದ ಧನಂಜಯ ಶೆಟ್ಟಿ, ಸುರೇಂದ್ರ ಶೆಟ್ಟಿ, ಪ್ರಭಾಕರ ಶೆಟ್ಟಿ, ಎಚ್. ಶಂಭು […]

ಆಸರೆ ಚಾರಿಟೇಬಲ್ ಟ್ರಸ್ಟ್ (ರಿ.) ಕಡಿಯಾಳಿ ಇವರ ವತಿಯಿಂದ 101ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ

ಉಡುಪಿ: ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸೇವಾ ಪ್ರಕಲ್ಪವಾದ ಆಸರೆ ಚಾರಿಟೇಬಲ್ ಟ್ರಸ್ಟ್ (ರಿ.) ಕಡಿಯಾಳಿ ಇವರ ವತಿಯಿಂದ 101 ನೇ ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿನ ಪ್ರಧಾನಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ 2022 ರೊಳಗೆ ಇಡೀ ಉಡುಪಿ ನಗರದ ಎಲ್ಲಾ ಬಡವರ ಮನೆಗೆ ಉಚಿತ ವಿದ್ಯುತ್ ನೀಡುವುದರ ಮುಖೇನ 100 ಶೇಕಡ ವಿದ್ಯುತ್ ಹೊಂದಿದ ದೇಶದ ಮೊಟ್ಟ ಮೊದಲ ನಗರವನ್ನಾಗಿಸುವ ಪ್ರಯತ್ನ ಯಶಸ್ಸಿನತ್ತ ಸಾಗುತ್ತಿದೆ ಎಂದರು. ಅಲ್ಲದೆ […]