ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಕಲ್ಮಾಡಿ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಅಮೀನ್ ಕಲ್ಮಾಡಿ ಆಯ್ಕೆ
ಉಡುಪಿ: ಕಲ್ಮಾಡಿ ಶ್ರೀ ಬ್ರಹ್ಮಬೈದೇರುಗಳ ಗರೋಡಿ ಇದರ 2021-24ನೇ ಸಾಲಿನ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಚ್ಯುತ ಆಮೀನ್ ಕಲ್ಮಾಡಿ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳಾಗಿ, ಗೌರವಾಧ್ಯಕ್ಷರು: ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷರು: ಶಶಿಧರ ಎಂ. ಅಮೀನ್ ವಡಬಾಂಡೇಶ್ವರ ಮತ್ತು ಗೋಪಾಲ್ ಸಿ. ಬಂಗೇರ ಪಂದುಬೆಟ್ಟು, ಪ್ರಧಾನ ಕಾರ್ಯದರ್ಶಿ: ಮನೋಹರ್ ಜತ್ತನ್ ಮಲ್ಪೆ, ಕೋಶಾಧಿಕಾರಿ: ಬಾಲಕೃಷ್ಣ ಕೊಡವೂರು, ಸಂಘಟನಾ ಕಾರ್ಯದರ್ಶಿ: ಎ.ಶಿವಕುಮಾರ್ ಅಂಬಲಪಾಡಿ, ಜತೆ ಕಾರ್ಯದರ್ಶಿ: ಲಕ್ಷ್ಮಣ ಪೂಜಾರಿ ಅಂಬಲಪಾಡಿ, ಜತೆ ಕೋಶಾಧಿಕಾರಿ: ವಿನಯ್ ಕುಮಾರ್ ಕಲ್ಮಾಡಿ, ಆಡಳಿತ […]
ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಮ್ನ ಡೈಮಂಡ್ ಪ್ರಿವೀವ್ ಉತ್ಸವಕ್ಕೆ ಚಾಲನೆ
ಉಡುಪಿ: ನಗರದ ವಿಎಸ್ಟಿ ರಸ್ತೆಯ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಮ್ನಲ್ಲಿ ನಡೆಯುವ ಡೈಮಂಡ್ ಪ್ರಿವೀವ್ ಉತ್ಸವವನ್ನು ಭಾನುವಾರ ಉದ್ಘಾಟಿಸಲಾಯಿತು. ಫೆ.18ರವರೆಗೆ ಹಮ್ಮಿಕೊಂಡಿರುವ ಈ ಉತ್ಸವವನ್ನು ಪೆನಿನ್ಸುಲಾ ಗ್ರಾಂಡ್ ಹೊಟೇಲ್ನ ಆಡಳಿತ ನಿರ್ದೇಶಕ ಹಾಗೂ ಚೇರ್ಮನ್ ಕರುಣಾಕರ್ ಆರ್. ಶೆಟ್ಟಿ ಉದ್ಘಾಟಿಸಿದರು. ಡೈಮಂಡ್ ಆಭರಣಗಳಾದ ತುರ್ಕಿಸ್ ಸಂಗ್ರಹವನ್ನು ವೈದ್ಯ ಡಾ. ಅನಂತ್ ಎಸ್. ಶೆಣೈ, ಮಿಡ್ಲ್ ಈಸ್ಟ್ ಸಂಗ್ರಹವನ್ನು ಉದ್ಯಮಿ ಎ.ಆರ್.ಬ್ಯಾರಿ, ಸೋಲಿಟೈರ್ ಸಂಗ್ರಹವನ್ನು ಸೂರಿ ಸೀಫುಡ್ನ ಅಬ್ದುಲ್ ರಹಿಮಾನ್, ಬೆಲ್ಜಿಯಂ ಸಂಗ್ರಹವನ್ನು […]
ಕೊಡವೂರು: ಆದರ್ಶ ಗ್ರಾಮ ನಿರ್ಮಾಣದ ಸಂಕಲ್ಪ
ಉಡುಪಿ: ಕೊಡವೂರು ವಾರ್ಡ್ ನಲ್ಲಿ ಕೆಮಿಕಲ್ ಮಿಶ್ರಿತ ಆಹಾರ ಸೇವನೆಯಿಂದ 22 ಜನರು ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಗತಿ ಇದಕ್ಕೆ ನಾವು ನಮ್ಮ ವ್ಯಾಪ್ತಿಯಲ್ಲಿ ಉತ್ತರ ಕೊಡಬೇಕು ಇದಕ್ಕೆ ಕಾರಣ ಕೆಮಿಕಲ್ ಇರುವ ಫಲವಸ್ತು ತರಕಾರಿ, ಎಣ್ಣೆ ಮತ್ತು ಮಾಂಸ, ಪ್ಲಾಸ್ಟಿಕ್ ಇದರ ವಿರುದ್ಧ ಹೋರಾಟ ಮಾಡಬೇಕು. ನಮ್ಮ ವಠಾರದ ಎಲ್ಲಾ ಮನೆ ಮನೆಗಳನ್ನು ಜನ ಜಾಗೃತಿ ಮಾಡುವುದರ ಮುಖಾಂತರ ಎಲ್ಲಾ ಮನೆ ಮಕ್ಕಳ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಎಂದು ಮಹಿಳೆಯರು ಕಂಕಣ ಕಟ್ಟಿ ಸಿದ್ಧರಾಗಿದ್ದಾರೆ.ಇದು ಮಾದರಿ […]
ಉಡುಪಿ: ಎಸ್.ಎಫ್. ಬ್ಯಾಟರಿಸ್ ಪವರ್ ಬೇ ಶೋರೂಮ್ ಉದ್ಘಾಟನೆ
ಉಡುಪಿ: ಉಡುಪಿ ಕಲ್ಸಂಕ ರಸ್ತೆಯ ಸಿಟಿ ಬಸ್ ನಿಲ್ದಾಣದ ಸಮೀಪದ ಸಬ್ಸನ್ ಕಾಂಪ್ಲೆಕ್ಸ್ ನಲ್ಲಿ ಸೋಮವಾರ ನೂತನ ಎಸ್.ಎಫ್. ಬ್ಯಾಟರಿಸ್ ಪವರ್ ಬೇ ಶೋರೂಮ್ ಉದ್ಘಾಟನೆಗೊಂಡಿತು. ಕೆನರಾ ಬ್ಯಾಂಕ್ ಬ್ರಹ್ಮಗಿರಿ ಶಾಖೆಯ ವ್ಯವಸ್ಥಾಪಕಿ ಎನ್. ಅರ್ಚನಾ ಅವರು ನೂತನ ಶೋರೂಮ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಸಂತೋಷ್ ಪವಾರ್, ಹಿರಿಯ ಪ್ರಾಂತ ಕಾರ್ಯನಿರ್ವಾಹಕ ಪ್ರತಾಪ್ ಎ.ಎನ್, ಸೇವಾ ಇಂಜಿನಿಯರ್ ಗಜಾನನ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೋರೂಮ್ ಮಾಲೀಕ ಪ್ರಶಾಂತ್ ರಾವ್ ಹಾಗೂ ಸಂಧ್ಯಾ […]
‘ಜೇಮ್ಸ್’ ಸಿನಿಮಾದ ಟೀಸರ್ ಗೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್
ಅಪ್ಪು ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ ಟೀಸರ್ ರಿಲೀಸ್ ಆಗಿದ್ದು, ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ‘ಜೇಮ್ಸ್’ ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಪುನೀತ್ ಅಭಿಮಾನಿಗಳು ‘ಜೇಮ್ಸ್’ ಟೀಸರ್ ನೋಡಿ ಮತ್ತೆ ಭಾವುಕರಾಗಿದ್ದು, ಕೆಲವು ಟೀಸರ್ ಮೆಚ್ಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ ‘ಜೇಮ್ಸ್’ ಟೀಸರ್ ಟ್ರೆಂಡಿಂಗ್ನಲ್ಲಿದೆ. ಈ ಟೀಸರ್ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಎಂಟ್ರಿ, ಆಕ್ಷನ್, ಮ್ಯಾನರಿಸಂ, ಸ್ಟೈಲ್ ಎಲ್ಲವನ್ನೂ ಪ್ರೇಕ್ಷಕರು ಕಣ್ತುಂಬಿ ಹರ್ಷ ವ್ಯಕ್ತಪಡಿಸಿದ್ದಾರೆ. […]