ಗುರುನಾರಾಯಣ ಸ್ವಾಮಿ ಯುವಕ ಸಂಘದ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ಕೊಡುಗೆ

ಕಾರ್ಕಳ: ಇರ್ವತ್ತೂರು ಗ್ರಾಮದ ಕೊಳಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುನಾರಾಯಣ ಸ್ವಾಮಿ ಯುವಕ ಸಂಘ ಆರಂತಬೆಟ್ಟು ವತಿಯಿಂದ ಫೆ. 12ರಂದು ಶುದ್ಧ ಕುಡಿಯುವ ನೀರಿನ ಯಂತ್ರ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯಕ್ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧ್ವರಾಜ್ ಅವರಿಗೆ ಯಂತ್ರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್.‌ ಕೋಟ್ಯಾನ್‌, ಜಯಕೀರ್ತಿ ಕಡಂಬ, ರತ್ನರಾಜ ಹೆಗಡೆ, ಶಂಕರ ಪೂಜಾರಿ, ಗೋಪಾಲ ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿತಾ ಕುಲಾಲ್, […]

ಉಡುಪಿ: ಕೃಷ್ಣಮೂರ್ತಿ ಅಭಿಮಾನಿ ಬಳಗದಿಂದ ಬೃಹತ್ ರಕ್ತದಾನ ಶಿಬಿರ

ಉಡುಪಿ: ಕೆ.ಕೃಷ್ಣಮೂರ್ತಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಭಾನುವಾರ ಮಥುರಾ ಕಂಫರ್ಟ್ಸ್ ನಲ್ಲಿ  ನಡೆಯಿತು. ರೆಡ್ ಕ್ರಾಸ್ ಕುಂದಾಪುರ ವಿಭಾಗದ ಸಭಾಪತಿ ಜಯಕರ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊರೊನಾ ಹಾಗೂ ವಿವಿಧ ಕಾರಣದಿಂದಾಗಿ ಎಲ್ಲಾ ಕಡೆ ರಕ್ತದ ಕೊರತೆ ಇದೆ. ಹೀಗಾಗಿ ಕೃಷ್ಣ ಮೂರ್ತಿ ಆಚಾರ್ಯ […]

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐವತ್ತೆರಡು ಅಡಿ ಎತ್ತರದ ಶಿವಲಿಂಗ ಪ್ರದರ್ಶನ ಹಾಗೂ ಉದ್ಘಾಟನೆ

ಬಸ್ರೂರು ಫೆ.13: ಕುಂದಾಪುರ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಐವತ್ತೆರಡು ಅಡಿ ಎತ್ತರದ ಶಿವಲಿಂಗ ಪ್ರದರ್ಶನ ಹಾಗೂ ಈಶ್ವರೀಯ ಸಂದೇಶ ಕಾರ್ಯಕ್ರಮವನ್ನು ಧರ್ಮದರ್ಶಿ ಶ್ರೀ ಅಪ್ಪಣ್ಣ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಿ.ಕೆ. ವಾದಿರಾಜ ಭಟ್ ಸ್ವಾಗತಿಸಿದರೆ, ಸಂಚಾಲಕಿ ಬಿ.ಕೆ. ಗೀತಕ್ಕನವರು ಈಶ್ವರೀಯ ಕಾಣಿಕೆ ನೀಡಿ ವಂದಿಸಿದರು. ಬಿ.ಕೆ .ಜಯಶ್ರೀ ಅಕ್ಕನವರು ಈಶ್ವರೀಯ ಸಂದೇಶ ನೀಡಿದರು. ಇವತ್ತು & ನಾಳೆ ಸೋಮವಾರ ಈ ಅದ್ಭುತ ಶಿವಲಿಂಗದ ಪ್ರದರ್ಶನವನ್ನು ಸಾರ್ವಜನಿಕರು […]

ಉಡುಪಿ ಜಿಲ್ಲೆಯಲ್ಲಿ ಫೆ.14 ರಿಂದ 19ರ ವರೆಗೆ ಸೆಕ್ಷನ್ 144 ಜಾರಿ; ನಗರದಲ್ಲಿ ಜಿಲ್ಲಾಧಿಕಾರಿ ಘೋಷಣೆ

ಉಡುಪಿ: ಹಿಜಾಬ್- ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೆ.14ರಿಂದ 19ರ ವರೆಗೆ ಎಲ್ಲ ಪ್ರೌಢಶಾಲೆಗಳ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಭಾನುವಾರ ಆದೇಶ ಹೊರಡಿಸಿದ್ದಾರೆ. ನಿಷೇಧಾಜ್ಞೆ ಅವಧಿಯಲ್ಲಿ ಶಾಲೆಯ ಸುತ್ತಮುತ್ತ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆ, ವಿಯೋತ್ಸವ, ಸಾರ್ವಜನಿಕ ಸಭೆ ಸಮಾರಂಭಕ್ಕೆ ನಿಷೇಧ ಹೇರಲಾಗಿದೆ. ಯಾರ ಪರ- ವಿರುದ್ಧ ಘೋಷಣೆ ಕೂಗುವಂತಿಲ್ಲ. ಯಾವುದೇ […]