ಉಡುಪಿ: ನಾಳೆ (ಫೆ.14) ಎಸ್.ಎಫ್. ಬ್ಯಾಟರಿಸ್ ಪವರ್ ಬೇ ಶೋರೂಮ್ ಉದ್ಘಾಟನೆ
ಉಡುಪಿ: ಉಡುಪಿ ಕಲ್ಸಂಕ ರಸ್ತೆಯ ಸಿಟಿ ಬಸ್ ನಿಲ್ದಾಣದ ಸಮೀಪದ ಸಬ್ಸನ್ ಕಾಂಪ್ಲೆಕ್ಸ್ ನಲ್ಲಿ ನಾಳೆ (ಫೆ.14) ಸಂಜೆ 4 ಗಂಟೆಗೆ ನೂತನ SF ಬ್ಯಾಟರಿಗಳು ಪವರ್‌ಬೇ ಶೋರೂಮ್ ಉದ್ಘಾಟನೆಗೊಳ್ಳಲಿದೆ. ಕೆನರಾ ಬ್ಯಾಂಕ್ ಬ್ರಹ್ಮಗಿರಿ ಶಾಖೆಯ ವ್ಯವಸ್ಥಾಪಕಿ ಎನ್. ಅರ್ಚನಾ ನೂತನ ಶೋರೂಮ್ ಅನ್ನು ಉದ್ಘಾಟಿಸುವರು. ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಸಂತೋಷ್ ಪವಾರ್, ಹಿರಿಯ ಪ್ರಾಂತ ಕಾರ್ಯನಿರ್ವಾಹಕ ಪ್ರತಾಪ್ ಎ.ಎನ್, ಸೇವಾ ಇಂಜಿನಿಯರ್ ಗಜಾನನ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 95909 […]
ಯುವ ಜನತೆಯಲ್ಲಿ ಸಸ್ಯಗಳ ಅರಿವಿನ ಕೊರತೆ: ಪೇಜಾವರ ಶ್ರೀ ವಿಷಾದ
ಉಡುಪಿ: ಜೀವವಾಯು ನೀಡುವ ಮೂಲಕ ಮನುಷ್ಯನ ಅಸ್ತಿತ್ವಕ್ಕೆ ಕಾರಣವಾದ ಸಸ್ಯಗಳ ಬಗ್ಗೆ ಇಂದಿನ ಯುವ ಜನತೆ ಅನಾಸಕ್ತಿ ವಹಿಸಿರುವುದು ಖೇದಕರ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಷಾದಿಸಿದರು. ರಂಜನಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಎಂಜಿಎಂ ಗೀತಾಂಜಲಿ ಸಭಾಂಗಣದಲ್ಲಿ ನಡೆದ ಹಿರಿಯ ಸಸ್ಯಶಾಸ್ತ್ರಜ್ಞ ಡಾ.ಕೆ. ಗೋಪಾಲಕೃಷ್ಣ ಭಟ್ ಅವರ ಬದುಕು- ಸಾಧನೆ ಕುರಿತ ಪುಸ್ತಕ ‘ಟ್ಯಾಕ್ಸೊನೊಮಿ ಭಟ್ಟರ ಯಾನ’ ಅನಾವರಣ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಭೂಮಿಯ ಮೇಲೆ ಸಸ್ಯಗಳು, ಪರ್ವತಗಳು, ನದಿ ತೊರೆಗಳು ಇರುವಷ್ಟು […]
ಉಡುಪಿ ತಾಲೂಕಿನ ಸಂಘಟನೆ, ಧಾರ್ಮಿಕ ಮುಖಂಡರ ಶಾಂತಿ ಸಭೆ; ಕ್ಯಾಂಪಸ್ ಫ್ರಂಟ್ ಸಂಘಟನೆ ಗೈರು
ಉಡುಪಿ: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಹಾಗೂ ನಾಳೆಯಿಂದ ಪ್ರೌಢಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಹಾಗೂ ಧಾರ್ಮಿಕ ಮುಖಂಡರ ಶಾಂತಿ ಸಭೆಯು ಭಾನುವಾರ ಉಡುಪಿ ತಾಲೂಕು ಕಚೇರಿಯಲ್ಲಿ ನಡೆಯಿತು. ಆದರೆ, ಹಿಜಾಬ್ ಧರಿಸಲು ಅವಕಾಶ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿಯರಿಗೆ ಬೆಂಬಲವಾಗಿ ನಿಂತಿದ್ದ ಕ್ಯಾಂಪಸ್ ಫ್ರಂಟ್ ಸಂಘಟನೆ ಗೈರಾಗಿತ್ತು. ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಹುರ್ಡೇಕರ್, ಉಡುಪಿ ತಾಲೂಕಿನ ಸರ್ವಪಕ್ಷ ಹಾಗೂ ಸರ್ವಧರ್ಮ ಸಭೆ ನಡೆಸಿದ್ದೇವೆ. ಈ ಸಭೆಯಲ್ಲಿ […]
ಮದ್ಯವ್ಯಸನಿಗಳ ಮಕ್ಕಳಲ್ಲಿ ಭಯ, ಕೀಳರಿಮೆ ಹೆಚ್ಚಳ; ಮದ್ಯವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹ ಉದ್ಘಾಟಿಸಿ ನ್ಯಾಯಾಧೀಶೆ ಶರ್ಮಿಳಾ ಅಭಿಮತ
ಉಡುಪಿ: ಮದ್ಯಪಾನ ವ್ಯಸನದ ಪರಿಣಾಮದಿಂದ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ತಲೆದೋರಿ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಲ್ಲದೆ ಮಕ್ಕಳಲ್ಲಿ ಭಯ, ಆತಂಕ, ಕೀಳರಿದು ಕೂಡ ಉಂಟಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಹೇಳಿದ್ದಾರೆ. ಉಡುಪಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್ ಮಣಿಪಾಲ, ರೋಟರಾಕ್ಟ್ ಕ್ಲಬ್ ಮಣಿಪಾಲ, ರೋಟರಾಕ್ಟ್ ಕ್ಲಬ್ಸ್ ಆಫ್ ಮಣಿಪಾಲ, ಐಎಂಎ ಉಡುಪಿ- ಕರಾವಳಿ, ಸಂಸ್ಕೃತಿ ವಿಶ್ವ […]
ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಗೆ ಹಿಂದಿನಂತೆ ಅವಕಾಶ; ಶಾಸಕ ಕೆ. ರಘುಪತಿ ಭಟ್
ಉಡುಪಿ: ಸಮವಸ್ತ್ರ ಕಡ್ಡಾಯ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದೆ ಇದ್ದ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬಹುದು. ಸಮವಸ್ತ್ರ ಕಡ್ಡಾಯ ಇರುವ ಕಾಲೇಜುಗಳಲ್ಲಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು. ಉಡುಪಿ ತಾಲೂಕು ಸೌಧದಲ್ಲಿ ಭಾನುವಾರ ನಡೆದ ಶಾಂತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಹಾಕಿಕೊಂಡು ಹಿಂದಿನಂತೆ ಬರಬಹುದು. ಕೋರ್ಟ್ ಅದನ್ನು ಹೇಳಿಲ್ಲ. ಎಲ್ಲಿ ಸಮವಸ್ತ್ರ ಇದೆಯೋ ಅಲ್ಲಿ ಹಾಕಿಕೊಂಡು ಬರಲು ಹೇಳಿದೆ ಎಂದರು. ಸಭೆಯಲ್ಲಿ ಯಾವುದೇ […]