ಉಡುಪಿ: ಎಂಜಿಎಂ ಕಾಲೇಜಿನ ಕ್ಯಾಂಪಸ್ ನಲ್ಲಿ ಕೇಸರಿ ಶಾಲು, ಪೇಟದ ದರ್ಬಾರ್; ಆಡಳಿತ ಮಂಡಳಿ ಕಂಗಾಲು

ಉಡುಪಿ: ಎಂಜಿಎಂ ಕಾಲೇಜಿನ ಆವರಣದಲ್ಲಿ‌ ಮಂಗಳವಾರ ಕೇಸರಿ ಪೇಟ, ಶಾಲಿನ ಆರ್ಭಟ ಜೋರಾಗಿತ್ತು. ಹಿಜಾಬ್ ಗೆ ಟಕ್ಕರ್ ಕೊಡಲು ನೂರಾರು ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಬಂದಿದ್ದು, ಕಾಲೇಜ್ ಕ್ಯಾಂಪಸ್ ಕೇಸರಿಮಯವಾಗಿತ್ತು. ಕೇಸರಿ ಪೇಟ, ಶಾಲಿನೊಂದಿಗೆ ದಿಢೀರ್ ಆಗಿ ಕಾಲೇಜ್ ಕ್ಯಾಂಪಸ್ ಬಂದ ವಿದ್ಯಾರ್ಥಿಗಳನ್ನು ಕಂಡು ಕಾಲೇಜು ಆಡಳಿತ ಮಂಡಳಿ ಕಂಗಾಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಆಡಳಿತ ಮಂಡಳಿ ಹರಸಾಹಸ ಪಟ್ಟಿತು. ಆದರೆ, ಆಡಳಿತ ಮಂಡಳಿಯ ಸೂಚನೆಗೆ ಬಗ್ಗದ ವಿದ್ಯಾರ್ಥಿಗಳು […]

ಉಡುಪಿ: ಎಂಜಿಎಂ ಕಾಲೇಜಿನ ಕ್ಯಾಂಪಸ್ ನಲ್ಲಿ ಕೇಸರಿ ಶಾಲು, ಪೇಟದ ದರ್ಬಾರ್; ಆಡಳಿತ ಮಂಡಳಿ ಕಂಗಾಲು

ಉಡುಪಿ: ಎಂಜಿಎಂ ಕಾಲೇಜಿನ ಆವರಣದಲ್ಲಿ‌ ಮಂಗಳವಾರ ಕೇಸರಿ ಪೇಟ, ಶಾಲಿನ ಆರ್ಭಟ ಜೋರಾಗಿತ್ತು. ಹಿಜಾಬ್ ಗೆ ಟಕ್ಕರ್ ಕೊಡಲು ನೂರಾರು ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲಿನೊಂದಿಗೆ ಕಾಲೇಜಿಗೆ ಬಂದಿದ್ದು, ಕಾಲೇಜ್ ಕ್ಯಾಂಪಸ್ ಕೇಸರಿ ಮಯವಾಗಿತ್ತು. ಕೇಸರಿ ಪೇಟ, ಶಾಲಿನೊಂದಿಗೆ ದಿಢೀರ್ ಆಗಿ ಕಾಲೇಜ್ ಕ್ಯಾಂಪಸ್ ಬಂದ ವಿದ್ಯಾರ್ಥಿಗಳನ್ನು ಕಂಡು ಕಾಲೇಜು ಆಡಳಿತ ಮಂಡಳಿ ಕಂಗಾಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಆವರಣದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಆಡಳಿತ ಮಂಡಳಿ ಹರಸಾಹಸ ಪಟ್ಟಿತು. ಆದರೆ, ಆಡಳಿತ ಮಂಡಳಿಯ ಸೂಚನೆಗೆ ಬಗ್ಗದ […]

ಕೇಸರಿ ಪೇಟ- ಹಿಜಾಬ್ ವಿವಾದ; ಎಂಜಿಎಂ ಕಾಲೇಜಿಗೆ ಅನಿರ್ದಿಷ್ಟಾವಧಿವರೆಗೆ ರಜೆ ಘೋಷಣೆ

ಉಡುಪಿ: ಕಾಲೇಜಿನಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ  ಅನಿರ್ದಿಷ್ಟಾವಧಿವರೆಗೆ ಕಾಲೇಜಿಗೆ ರಜೆ ಕೊಟ್ಟಿದ್ದೇವೆ. ಕೋರ್ಟ್ ಆದೇಶ ಏನು ಬರುತ್ತದೆ ಎಂಬುವುದನ್ನು ಕಾದು ನೋಡುತ್ತೇವೆ. ಮುಂದಿನ ತೀರ್ಮಾನ ಆಡಳಿತ ಮಂಡಳಿ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಪಿಯುಸಿ ಹಾಗೂ ಪದವಿ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದೇವೆ ಎಂದು ಉಡುಪಿ ಎಂಜಿಎಂ ಕಾಲೇಜಿನ ಡಾ. ದೇವಿದಾಸ್ ಎಸ್.ನಾಯ್ಕ್ ತಿಳಿಸಿದ್ದಾರೆ. ಕೇಸರಿ ಪೇಟ ವಿವಾದದಿಂದ ಕಾಲೇಜಿನಲ್ಲಿ ಮಂಗಳವಾರ ಉಂಟಾದ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಜಿಎಂ […]

ಉಡುಪಿ ಎಂಜಿಎಂ ಕಾಲೇಜಿನಲ್ಲಿ ತಾರಕಕ್ಕೇರಿದ ಕೇಸರಿ ಪೇಟ- ಹಿಜಾಬ್ ವಿವಾದ; ತರಗತಿ ಪ್ರವೇಶಕ್ಕೆ ಅನುಮತಿ ನೀಡುವಂತೆ ವಿದ್ಯಾರ್ಥಿಗಳ ಬೀಗಿಪಟ್ಟು

ಉಡುಪಿ: ಜಿಲ್ಲೆಯಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಸದ್ಯಕ್ಕೆ ತಣ್ಣಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಉಡುಪಿ ಎಂಜಿಎಂ ಕಾಲೇಜಿನಲ್ಲೂ ಹಿಜಾಬ್ ವಿವಾದ ಭುಗಿಲೆದಿದ್ದು, ಮಂಗಳವಾರ ಕೇಸರಿ ಶಾಲು ಪೇಟದೊಂದಿಗೆ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ತರಗತಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.ಇನ್ನೊಂದು ಕಡೆ ಹಿಜಾಬ್ ಹಾಕಿಕೊಂಡ ಬಂದ ವಿದ್ಯಾರ್ಥಿನಿಯರು ತರಗತಿ ಪ್ರವೇಶಕ್ಕೆ ಅನುಮತಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಕೇಸರಿ ಶಾಲು ಹಾಗೂ ಹಿಜಾಬ್ ಧರಿಸಿಕೊಂಡ ಬಂದ ವಿದ್ಯಾರ್ಥಿ ಗುಂಪುಗಳ ಬೀಗಿ ಪಟ್ಟುವಿನಿಂದ ಕಾಲೇಜು ಆಡಳಿತ […]