ಬೈಂದೂರು: ಮರಕ್ಕೆ ನೇಣು ಬಿಗಿದುಕೊಂಡು ಯುವಕ‌ ಆತ್ಮಹತ್ಯೆ

ಬೈಂದೂರು: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಸೊನಗಾರಹಿತ್ಲು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಯಡ್ತರೆ ಗ್ರಾಮದ ಸೊನಗಾರಹಿತ್ಲು ನಿವಾಸಿ 34 ವರ್ಷದ ಮಣಿಕಂಠ ಆತ್ಮಹತ್ಯೆಮಾಡಿಕೊಂಡ ಯುವಕ. ಇವರು ಬೆಳಗಾವಿಯಲ್ಲಿ ಹೋಟೆಲ್ ಕೆಲಸ ಮಾಡುತ್ತಿದ್ದು, ವರ್ಷದಲ್ಲಿ ಎರಡ್ಮೂರು ಬಾರಿ ಮನೆಗೆ ಬರುತ್ತಿದ್ದರು. ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದು, ಮನೆಗೆ ಬಂದಿರಲಿಲ್ಲ. ಫೆ.8ರಂದು ಮಧ್ಯಾಹ್ನ 2:30ರ ಸುಮಾರಿಗೆ ಯಡ್ತರೆ ಗ್ರಾಮದ ಸೊನಗಾರಹಿತ್ಲು ಎಂಬಲ್ಲಿ ಹೊಸದಾಗಿ ಕಟ್ಟುತ್ತಿರುವ ಮನೆಯ […]

ಹಿಜಾಬ್ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಹಿಜಾಬ್ ಧರಿಸಲು ಅನುಮತಿ‌ ಕೋರಿ ಸಲ್ಲಿಸಲಾಗಿದ್ದ ಅರ್ಜಿ‌ ವಿಚಾರಣೆಯನ್ನು‌ ನಾಳೆ (ಫೆ.9) ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ಹೊರಡಿಸಿದೆ.

ಹಿಜಾಬ್- ಕೇಸರಿ ಶಾಲು ವಿವಾದ; ನಾಳೆಯಿಂದ (ಫೆ.9) ಮೂರು ದಿನ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ಹಿಜಾಬ್- ಕೇಸರಿ ಶಾಲು ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಳೆಯಿಂದ (ಫೆ.9) ಮೂರು ದಿನಗಳ ಕಾಲ ಹೈಸ್ಕೂಲ್, ಪಿಯುಸಿ ಹಾಗೂ ಪದವಿ ಕಾಲೇಜುಗಳಿಗೆ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಶಾಲಾ ಕಾಲೇಜುಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಜೆ ಘೋಷಣೆ ಮಾಡಲಾಗಿದೆ ಎಂದರು.  

ಏ.16ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಬೆಂಗಳೂರು: ಪ್ರಸಕ್ತ ಸಾಲಿನ (2021–22) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಏಪ್ರಿಲ್‌ 16ರಿಂದ ಮೇ 6 ರವರೆಗೆ ನಡೆಯಲಿದೆ. ಶಿಕ್ಷಣ ಇಲಾಖೆಯ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್‌ 16ರಂದು ಗಣಿತ, 18ರಂದು ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ, 20ರಂದು ಇತಿಹಾಸ, ಭೌತವಿಜ್ಞಾನ, 21ರಂದು ಸಂಸ್ಕೃತ, 22ರಂದು ವ್ಯವಹಾರ ಅಧ್ಯಯನ, 23ರಂದು ರಸಾಯನ ವಿಜ್ಞಾನ, 25ರಂದು ಅರ್ಥಶಾಸ್ತ್ರ, 26ರಂದು ಹಿಂದಿ, 28ರಂದು ಕನ್ನಡ, 30ರಂದು ಸಮಾಜಶಾಸ್ತ್ರ, ಮೇ 2ರಂದು ಭೌತವಿಜ್ಞಾನ, ಭೋಗೋಳ ವಿಜ್ಞಾನ, ಮೇ 4ರಂದು ಇಂಗ್ಲಿಷ್‌, ಮೇ 6ರಂದು ಐಚ್ಚಿಕ […]

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮೊಳಗಿದ ಜೈ ಶ್ರೀರಾಮ್, ಭಾರತ್ ಮಾತಕೀ‌ ಜೈ ಘೋಷಣೆ.!

ಉಡುಪಿ: ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಉಡುಪಿ ಎಂಜಿಎಂ ಕಾಲೇಜಿನ‌ ಆವರಣ ಇಂದು ಅಕ್ಷರಶಃ ರಾಣಾಂಗಣವಾಯಿತು. ಹಿಜಾಬ್ ಗೆ ಪ್ರತಿರೋಧವಾಗಿ ನೂರಾರು ವಿದ್ಯಾರ್ಥಿಗಳು ‌ಕೇಸರಿ ಪೇಟ, ಶಾಲು ತೊಟ್ಟು ಬಂದಿದ್ದರು. ಆದರೆ ಕಾಲೇಜು ಆಡಳಿತ ಮಂಡಳಿ ಗೇಟ್ ಬಂದ್ ಮಾಡಿ ಕಾಲೇಜಿನ ಆವರಣಕ್ಕೆ ಪ್ರವೇಶಿಸಿದಂತೆ ತಡೆಯೊಡ್ಡಿದರು. ಹೀಗಾಗಿ ಕಾಲೇಜು ಹೊರಗಡೆ ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಬೀಸುತ್ತಾ, ಜೈ ಶ್ರೀರಾಮ್, ಭಾರತ್ ಮಾತಕೀ ಜೈ ಎಂದು ಘೋಷಣೆ ಮೊಳಗಿಸುತ್ತಾ ಪ್ರತಿಭಟನೆ ನಡೆಸಿದರು. ಹಿಜಾಬ್ ಹಾಕಿಕೊಂಡು ಬರುವ […]