ಉಡುಪಿ: ಮೃತ ಕೋವಿಡ್ ರೋಗಿಯ ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಸಮಾಜ ಸೇವಕರು.!

ಉಡುಪಿ: ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಲು ಸಂಬಂಧಿಕರು ಅಸಹಾಯಕರಾದ ಹಿನ್ನೆಲೆಯಲ್ಲಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ವಿನಯಚಂದ್ರ ಸಾಸ್ತಾನ ಅವರು ಸಂಬಂಧಿಕರ ಸಮಕ್ಷಮದಲ್ಲಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಕೋಟೇಶ್ವರ ಸಾರ್ವಜನಿಕ ಸ್ಥಳದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಅಪರಿಚಿತ ರೋಗಿಯನ್ನು ಸಮಾಜಸೇವಕ ವಿನಯಚಂದ್ರ ಸಾಸ್ತಾನ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ರೋಗಿ ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟರು. ಬಳಿಕ ಮೃತನ ಸಂಬಂಧಿಕರನ್ನು ಪತ್ತೆಗೊಳಿಸಲಾಯಿತು. ಆದರೆ, ಸಂಬಂಧಿಕರಿಗೆ […]

ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮವೇ ಅಂತಿಮ: ಸಚಿವ ಕೋಟ ಹೇಳಿಕೆ

ಉಡುಪಿ: ರಾಜ್ಯ ಸರ್ಕಾರವು ಶಾಲಾ ಕಾಲೇಜಿನ ವಸ್ತ್ರಸಂಹಿತೆ ಕುರಿತಂತೆ ಈಗಾಗಲೇ ಆದೇಶ ಹೊರಡಿಸಿದೆ. ಅದರಂತೆ ಶಾಲಾ ಸಮವಸ್ತ್ರವೇ ಅಂತಿಮ. ವಿದ್ಯಾರ್ಥಿಗಳು ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶವನ್ನು ಅನುಷ್ಟಾನಗೊಳಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ. ಅದನ್ನು ಮಾಡಿಸುತ್ತೇವೆ ಎಂದರು..

ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡುವಂತೆ ಸಿಎಂಗೆ ಮನವಿ: ಸಚಿವ ಕೋಟ

ಉಡುಪಿ: ಈ ಬಾರಿಯ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಕೋವಿಡ್ ಕಾರಣದಿಂದ ಅನುದಾನ ಕಡಿತಗೊಂಡಿತ್ತು. 3500 ದಿಂದ 4 ಸಾವಿರ ಕೋಟಿ ಅನುದಾನ ದೊರಕಿತ್ತು. ಆದರೆ, ಈ ಸಲ […]

ಸಾಣೂರಿನಲ್ಲಿ ಸ್ವಚ್ಛತಾ ಸಾಪ್ತಾಹಿಕ ಆಂದೋಲನ; ಶ್ರಮದಾನದ ಮೂಲಕ ರಸ್ತೆ ಬದಿ ಸ್ವಚ್ಛತೆ

ಸಾಣೂರು ಯುವಕ ಮಂಡಲದ ವತಿಯಿಂದ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಕ್ಲೀನ್ ಇಂಡಿಯಾ ಪ್ಲಾಸ್ಟಿಕ್ ಮುಕ್ತ ಪ್ರದೇಶ ಕಾರ್ಯಕ್ರಮದಡಿ ಭಾನುವಾರ ಸ್ವಚ್ಛತಾ ಸಾಪ್ತಾಹಿಕ ಆಂದೋಲನ ನಡೆಸಲಾಯಿತು. ಹತ್ತೊಂಬತ್ತನೆ ವಾರದ ಸ್ವಚ್ಛತಾ ಸಾಪ್ತಾಹಿಕವನ್ನು ಗಾಡಿದಕೊಟ್ಯ ಸೇತುವೆ ಬಳಿಯಿಂದ ಆರಂಭಿಸಿ ಸಾಣೂರು ಗುತ್ತುರಸ್ತೆ ಸಂಪರ್ಕ ರಸ್ತೆಯವರೆಗೆ ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಶೆಟ್ಟಿ, ಸಾಣೂರು ಯುವಕ ಮಂಡಲದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಪೂಜಾರಿ, […]

ಉಡುಪಿ: ನಗರದ ಶ್ರೀಗುರು ನಿತ್ಯಾನಂದ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ “ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ನ ನೂತನ ಶಾಖೆಯ ಉದ್ಘಾಟನೆ

ಉಡುಪಿ: ಇಲ್ಲಿನ ಕಲ್ಪನಾ ರಸ್ತೆಯ ಮಿತ್ರ ಆಸ್ಪತ್ರೆಯ ಸಮೀಪದ ಶ್ರೀ ಗುರು ನಿತ್ಯಾನಂದ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ “ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ಶಾಖೆ ಭಾನುವಾರ ಉದ್ಘಾಟನೆಗೊಂಡಿತು. ಸ್ಥಳಾಂತರ ಗೊಂಡಿರುವ ಶಾಖೆಯನ್ನು ಡೈಜಿ ವರ್ಲ್ಡ್ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಅವರು ಉದ್ಘಾಟಿಸಿದರು. ಬಳಿಕ ಸಂಸ್ಥೆಯ ಯಶಸ್ವಿಗೆ ಶುಭ ಹಾರೈಸಿದರು. ಈ ವೇಳೆ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ತಮ್ಮ ಉದ್ದಿಮೆಯಲ್ಲಿ ಯಶಸ್ವಿಯಾಗಬೇಕಾದರೆ […]