ಕುಂದಾಪುರ: ಮೇಲ್ಸೇತುವೆ ದಂಡೆಗೆ ಹಾಕಿರುವ ಕಬ್ಬಿಣದ ಸರಳಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಕುಂದಾಪುರ ತಾಲೂಕಿನ ತ್ರಾಸಿ ಮೇಲ್ಸೇತುವೆ ದಂಡೆಯ ಕಬ್ಬಿಣದ ಸರಳಿಗೆ ನೇಣುಬಿಗಿದುಕೊಂಡು ವ್ಯಕ್ತಿಯೊಬ್ಬರು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಬೈಂದೂರು ನಾವುಂದ ಗ್ರಾಮದ ಶುಭದ ಶಾಲೆ ಬಳಿಯ ನಿವಾಸಿ 55 ವರ್ಷದ ನಾರಾಯಣ ಚಂದನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.‌ ಇವರು ಸರಿಯಾದ ಕೆಲಸವಿಲ್ಲದೆ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಚಿಂತೆಯಲ್ಲಿ ಮನನೊಂದು ಇಂದು ಬೆಳಿಗ್ಗೆ ತ್ರಾಸಿ ಮೇಲ್ಸೇತುವೆ ದಂಡೆಗೆ ಹಾಕಲಾದ ಕಬ್ಬಿಣದ ಸರಳಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಪ್ರಕರಣ […]

ಹೊಸಾಡು ಸೇವಾ ಸಹಕಾರ ಸಂಘ ಶುಭಾರಂಭ: ಸಹಕಾರಿ ರಂಗದ ಬೆಳವಣಿಗೆಗೆ ಗ್ರಾಮೀಣ ಜನರ ಸಹಕಾರ ಅಗತ್ಯ: ಇಂದ್ರಾಳಿ ಜಯಕರ ಶೆಟ್ಟಿ

ಕುಂದಾಪುರ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಬಾಲಾಜಿ ಕಾಂಪ್ಲೆಕ್ಸ್ ಮೊದಲನೇ ಮಹಡಿಯಲ್ಲಿ ಭಾನುವಾರ ನೂತನ ಹೊಸಾಡು ಸೇವಾ ಸಹಕಾರ ಸಂಘ   ಶುಭಾರಂಭಗೊಂಡಿತು. ಸಂಘವನ್ನು ಉದ್ಘಾಟಿಸಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರಿ ಸಂಘದ ಮೂಲಕ‌ ಸರ್ಕಾರದ ವಿವಿಧ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಬಲ ತುಂಬುವ ಕೆಲಸ ಸಹಕಾರಿ ಸಂಘಗಳ ಮೂಲಕ‌ ಆಗುತ್ತಿದೆ. ಇದೀಗ ಸಹಕಾರಿ ರಂಗವು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ […]

ಚಿತ್ರಮಂದಿರ, ಜಿಮ್, ಈಜುಕೊಳಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

ಉಡುಪಿ, ಫೆ.7: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಹೊರಡಿಸಲಾದ ಹೆಚ್ಚುವರಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ಜಿಲ್ಲೆಯಾದ್ಯಂತ ಪಾಸಿಟಿವ್ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ, ಹೊರಡಿಸಲಾದ ಆದೇಶದಲ್ಲಿ ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ. ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ, ಜಿಮ್ ಮತ್ತು ಯೋಗ ಕೇಂದ್ರ ಹಾಗೂ ಈಜುಕೊಳಗಳಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ. 100 ಸಾಮರ್ಥ್ಯದೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿಕೊಂಡು ಕಾರ್ಯಾಚರಿಸಲು ಅನುಮತಿ ನೀಡಲಾಗಿದ್ದು, ನಿಗಧಿತ ಆಸನ […]

ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಕಾಪು: ಬಿಜೆಪಿ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯೊಂದಿಗೆ ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕಾಗಿದೆ ಎಂದು ಕಾಪು ತೆಂಕ ಎರ್ಮಾಳು ರಾಜೀವ್ ಗಾಂಧಿ ನ್ಯಾಷನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜುಕೇಷನ್ ನಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಶಿಬಿರದ ಉದ್ಘಾಟನೆಯನ್ನು ಮಾಡಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಪಕ್ಷದ ಬಲವರ್ಧನೆಗೆ ಹಾಗೂ ನಾಯಕತ್ವ ಹೊರ ಹೊಮ್ಮಲು ಸದಸ್ಯತ್ವ ಅಭಿಯಾನ ಅತಿ ಅಗತ್ಯ. ಡಿಜಿಟಲ್ ಸದಸ್ಯತ್ವ […]

ಉಡುಪಿ: ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು

ಉಡುಪಿ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನ ಮಾಡಿರುವ ಘಟನೆ ಫೆ‌.5 ರಂದು ನಡೆದಿದೆ. ಈ ಬಗ್ಗೆ ಉಡುಪಿ ಕಲ್ಯಾಣಪುರ ಮೂಡುಬೆಟ್ಟು ನಿವಾಸಿ ರಾಜು ಅಂಚನ್‌ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜು ಅಂಚನ್ ಎಂದಿನಂತೆ ಫೆ.5ರಂದು ಬೆಳಿಗ್ಗೆ ನ್ಯಾಯಾಲಯದಲ್ಲಿ ಕರ್ತವ್ಯಕ್ಕೆ ಹೋಗಿದ್ದು, ತನ್ನ ಸ್ಕೂಟರ್‌ ನ್ನು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದರು. ಸಂಜೆ ಕರ್ತವ್ಯ ಮುಗಿಸಿ ಬಂದು ನೋಡುವಾಗ ನಿಲ್ಲಿಸಿದ್ದ ಜಾಗದಲ್ಲಿ ಸ್ಕೂಟರ್‌ ಇರಲಿಲ್ಲ. ಯಾರೋ ಕಳ್ಳರು ಸ್ಕೂಟರ್ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸ್ಕೂಟರ್‌ನ ಅಂದಾಜು […]