ಉಡುಪಿ: ಆರೋಗ್ಯ ಅಧಿಕಾರಿ, ಸಿಬ್ಬಂದಿಗಳಿಗೆ ಪರ್ಯಾಯ ಕೃಷ್ಣಾಪುರ ಮಠದಿಂದ ಗೌರವ
ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ಪರ್ಯಾಯ ಕೃಷ್ಣಾಪುರ ಮಠಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಪರ್ಯಾಯೋತ್ಸವದ ಸಂದರ್ಭದಲ್ಲಿ ಭಕ್ತಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ಸಹಕರಿಸಿದ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶನಿವಾರ ಮಠದಲ್ಲಿ ಸನ್ಮಾನಿಸಿದರು. ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ವೈದ್ಯರಾದ ಡಾ.ರಾಮ ರಾವ್, ಡಾ.ಪ್ರಶಾಂತ್ ಭಟ್, ಡಾ.ನಾಗರತ್ನ, ಡಾ.ವಾಸುದೇವ್ ಹಾಗೂ ರಥಬೀದಿಯ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ವೈದ್ಯರಾದ ಡಾ. ರವಿಚಂದ್ರ ಉಚ್ಚಿಲ, ಡಾ.ಅರ್ಚನಾ, ಡಾ.ಸತೀಶ್, ಡಾ.ಜಯಂತ್, ಡಾ. ಸ್ವಾತಿ ಶಿವಾನಂದ ಅವರಿಗೆ […]
ಮಣಿಪಾಲ: ಪೊಲೀಸರಿಗೆ ಹಲ್ಲೆ, ದೂರು ದಾಖಲು
ಮಣಿಪಾಲ: ಬಾರ್ ವೊಂದರ ಮುಂದೆ ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಲು ಹೋದ ಪೊಲೀಸರಿಗೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮಣಿಪಾಲದ ವಿದ್ಯಾರತ್ನ ನಗರದಲ್ಲಿ ಫೆ. 4ರಂದು ರಾತ್ರಿ ನಡೆದಿದೆ. ಠಾಣಾ ಎ.ಎಸ್.ಐ ನಾಗೇಶ್ ನಾಯಕ್, ಪ್ರೋ. ಪಿಎಸ್.ಐ ಸುಷ್ಮಾ ಹಾಗೂ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಮಣಿಪಾಲ ವಿದ್ಯಾರತ್ನ ನಗರದ ಬಾರ್ & ರೆಸ್ಟೋರೆಂಟ್ ಮುಂದೆ ಸಿದ್ದಾರ್ಥ್, ಅಭಿಷೇಕ್ ಮತ್ತು ಇತರರ ಜೊತೆಗೆ ರಂಜನ್ ಕುಮಾರ್ ಎಂಬಾತ ಜಗಳವಾಡುತ್ತಿದ್ದನು. ಇದನ್ನು ಪ್ರಶ್ನಿಸಲು ಹೋಗಿದ್ದ ಪೊಲೀಸರಿಗೆ ರಂಜನ್ […]
ಸರ್ಕಾರದ ಆದೇಶ ಹಿಜಾಬ್ ವಿವಾದದ ಹೋರಾಟಕ್ಕೆ ಸಂದ ಗೆಲುವು: ಯಶ್ ಪಾಲ್ ಸುವರ್ಣ ಹರ್ಷ
ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನ್ವಯ ಶಾಲಾ, ಕಾಲೇಜುಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರದ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಇದು ಹಿಜಾಬ್ ವಿವಾದದ ವಿಚಾರದಲ್ಲಿ ನಡೆದ ಹೋರಾಟಕ್ಕೆ ಸಂದ ಪ್ರಥಮ ಗೆಲುವು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶ್ ಪಾಲ್ ಸುವರ್ಣ ಬಣ್ಣಿಸಿದ್ದಾರೆ. ಹಿಂದೂ ಸಂಘಟನೆಗಳ ಮನವಿಗೆ ಸ್ಪಂದಿಸಿ ಆದೇಶ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಹೃತ್ಪೂರ್ವಕ […]
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ನಾಣ್ಯ ತುಲಾಭಾರ
ಅಯೋಧ್ಯೆ ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರು ಆಗಿರುವ ಉಡುಪಿ ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಮಂಡ್ಯ ಮದ್ದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಭಕ್ತರು ಅಭಿಮಾನಿಗಳು ನಾಣ್ಯ ತುಲಾಭಾರ ನೆರವೇರಿಸಿ ಅಭಿವಂದಿಸಿದರು. ಇದಕ್ಕೂ ಮೊದಲು ಶ್ರೀಗಳು ಮಠದ ಪಟ್ಟದ ದೇವರ ಪೂಜೆ ಹಾಗೂ ಹೊಳೆ ಆಂಜನೇಯನಿಗೆ ಪಂಚಾಮೃತ ಅಭಿಷೇಕ ಸಹಿತ ಪೂಜೆ ಮಾಡಿದರು.
ಗಾನ ಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ
ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ (93) ಅವರು ಇಂದು ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಕೊರೊನಾ ಸೋಂಕು ತಗುಲಿ ಕಳೆದ ಒಂದು ತಿಂಗಳಿನಿಂದ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾದೊಂದಿಗೆ ನ್ಯೂಮೋನಿಯದಿಂದ ಬಳಲುತ್ತಿದ್ದ ಅವರ ಆರೋಗ್ಯ ಗಂಭೀರವಾಗಿದೆ ಎಂದು ನಿನ್ನೆ ವೈದ್ಯರು ಮಾಹಿತಿ ನೀಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಲತಾ ಮಂಗೇಶ್ಕರ್ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತದ ನೈಟಿಂಗೇಲ್ ಎಂದೇ ಕರೆಸಿಕೊಳ್ತಿದ್ದ […]