ಶೆಟ್ಟಿಬೆಟ್ಟು ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ

ಉಡುಪಿ: ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶೆಟ್ಟಿಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾಯಿತು. ಶಿಬಿರದಲ್ಲಿ ಅಧಿಕ ರಕ್ತದೊತ್ತಡ , ಮಧುಮೇಹ, ನೇತ್ರ ತಪಾಸಣೆ, ದಂತ ತಪಾಸಣೆ, ಕ್ಷಯರೋಗ ತಪಾಸಣೆ, ಆಪ್ತ ಸಮಾಲೋಚನೆ, oral cancer, Brest Cancer, ಗರ್ಭಕಂಠದ ಕ್ಯಾನ್ಸರ್‌ ತಪಾಸಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕೋವಿಡ್ ಲಸಿಕಾ ಶಿಬಿರ ಕೂಡ ನಡೆಯಿತು. ಶಿಬಿರದಲ್ಲಿ ಒಟ್ಟು 145 ಮಂದಿ ಪಾಲ್ಗೊಂಡು ಆರೋಗ್ಯ […]

ಮಣಿಪಾಲ: ಫೆ.8ರಂದು ಪರೀಕ್ಷಾ ಪೂರ್ವ ತಯಾರಿಯ ಉಚಿತ ಮಾಹಿತಿ ಕಾರ್ಯಾಗಾರ

ಉಡುಪಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿಯ ಉಚಿತ ಮಾಹಿತಿ ಕಾರ್ಯಾಗಾರ ಫೆಬ್ರವರಿ 8ರ ಮಂಗಳವಾರ ಸಂಜೆ 4.30 ಯಿಂದ 6 ರವರೆಗೆ 8, 9, 10ನೆಯ ತರಗತಿಯ ರಾಜ್ಯ ಹಾಗೂ ಸಿ.ಬಿ.ಎಸ್.ಇ ವಿದ್ಯಾರ್ಥಿಗಳಿಗೆ ಟಿಪ್ಸ್ ಅ್ಯಂಡ್ ಟ್ರಿಕ್ಸ್ (Tips and Tricks) ಮಾಹಿತಿ ಕಾರ್ಯಾಗಾರವನ್ನು ಮಣಿಪಾಲದ ಡಿಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ ಹಬ್ ಕಾಂಪ್ಲೆಕ್ಸ್ ನ ಮೊದಲನೆಯ ಮಹಡಿಯಲ್ಲಿರುವ ಶ್ರೀ ಶಾರದ ಟ್ರೈನಿಂಗ್ ಇನ್ಸ್ವಿಟ್ಯೂಟ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಪರಿಣಿತ ಅನುಭವೀ […]

ಫೆ.7: ಓಬವ್ವ ಆತ್ಮರಕ್ಷಣೆ ಕಲೆ ಉದ್ಘಾಟನೆ

ಉಡುಪಿ, ಫೆ.4:  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಓಬವ್ವ ಆತ್ಮರಕ್ಷಣೆ ಕಲೆ – ಕರಾಟೆ ಉದ್ಘಾಟನಾ ಕಾರ್ಯಕ್ರಮವು ಫೆಬ್ರವರಿ 7 ರಂದು ಬೆಳಗ್ಗೆ 10.30 ಕ್ಕೆ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.   ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಶಾಸಕ […]

ಕಟಪಾಡಿ: ಕೋಟೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಹೃದಯಾಘಾತದಿಂದ ವಿಧಿವಶ

ಕಟಪಾಡಿ: ಕೋಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ, ಗುಮಾಸ್ತೆ (ಕ್ಲಾರ್ಕ್) ಶಶಿಕಲಾ (52) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು. ಅವರು ಕಳೆದ ಸುಮಾರು 15 ವರ್ಷಗಳಿಂದ ಕೋಟೆ ಪಂಚಾಯತ್‍ನಲ್ಲಿ ಗುಮಾಸ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ 6 ಗಂಟೆಯ ಸುಮಾರಿಗೆ ಕಚೇರಿಯಿಂದ ಕರ್ತವ್ಯ ನಿಭಾಯಿಸಿಕೊಂಡು ಮನೆಗೆ ತೆರಳಿದ್ದರು. ಮುಂಜಾನೆ 3 ಗಂಟೆಯ ವೇಳೆ ಹೃದಯಾಘಾತವುಂಟಾಗಿದ್ದು, ಕೂಡಲೇ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಶಿಕಲಾ ಮೃತಪಟ್ಟಿದ್ದಾರೆ. ಶಶಿಕಲಾ ಅವರು 2000ನೇ ಅವಧಿಯಲ್ಲಿ ಕೋಟೆ ಪಂಚಾಯತ್ ಅಧ್ಯಕ್ಷರಾಗಿ […]

ಮುಳ್ಳಿಕಟ್ಟೆ: ಫೆ.6 ಕ್ಕೆ ಹೊಸಾಡು ಸೇವಾ ಸಹಕಾರ ಸಂಘ ಉದ್ಘಾಟನೆ

ಕುಂದಾಪುರ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ “ಹೊಸಾಡು ಸೇವಾ ಸಹಕಾರ ಸಂಘ (ನಿ.)” ವು ಮುಳ್ಳಿಕಟ್ಟೆಯ ಬಾಲಾಜಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಇದೇ ಫೆ.6ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ನೂತನ ಸಂಘವನ್ನು ಉದ್ಘಾಟಿಸುವರು. ಹೊಸಾಡು ಸೇವಾ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕಾಡೇರಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್.ವಿಶ್ವೇಶ್ವರ ಅಡಿಗ, ಅಡಿಗರ ಮನೆ ಹೊಸಾಡು, ಮಂಜಯ್ಯ ಶೆಟ್ಟಿ ಜಾಜಿಮಕ್ಕಿ ಹೊಸಾಡು, […]