ಹಿಜಾಬ್ ವಿವಾದಕ್ಕೆ ಇತಿಶ್ರೀ, ಸರ್ಕಾರದಿಂದ ಒಳ್ಳೆಯ ನಿರ್ಧಾರ: ಶಾಸಕ ರಘುಪತಿ ಭಟ್
ಉಡುಪಿ: ಶಾಲಾ, ಕಾಲೇಜುಗಳ ಸಮವಸ್ತ್ರದ ಕುರಿತಂತೆ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ಕೈಗೊಂಡಿದೆ. ಆ ಮೂಲಕ ಹಿಜಾಬ್ ಧರಿಸುವ ಹಾಗೂ ಸಮವಸ್ತ್ರ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ಇತಿಶ್ರೀ ಹಾಡಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಜಾರಿಗೊಳಿಸಿರುವ ಆದೇಶದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅವರ ಸಮಿತಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸಮವಸ್ತ್ರ ನಿರ್ಧಾರ ಮಾಡಬಹುದು. ಒಂದು ಪಕ್ಷ ನಿರ್ಧಾರ ಆಗದಿದ್ದರೂ, […]
ಚಾಂತಾರು: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ
ಬ್ರಹ್ಮಾವರ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ ರಥಬೀದಿಯ ದೇವಾಡಿಗರ ಬೆಟ್ಟು ಎಂಬಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಚಾಂತಾರು ಗ್ರಾಮದ ದೇವಾಡಿಗರ ಬೆಟ್ಟು ನಿವಾಸಿ 38 ವರ್ಷದ ಉದಯ ನೇಣಿಗೆ ಶರಣಾದ ವ್ಯಕ್ತಿ. ಇವರು ಫೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಸುಮಾರು 15 ವರ್ಷಗಳಿಂದ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದರು. ಇದೇ ಖಿನ್ನತೆಯಲ್ಲಿ ಬಳಲುತ್ತಿದ್ದ ಉದಯ್, ಫೆ.4ರ ರಾತ್ರಿ 8:45 ರಿಂದ ಫೆ.5ರ ಬೆಳಿಗ್ಗೆ 8:30 ರ ಮಧ್ಯ ಅವಧಿಯಲ್ಲಿ […]
ಅಜೆಕಾರು: ಮಲಗಿದ್ದ ಸ್ಥಿತಿಯಲ್ಲಿಯೇ ವ್ಯಕ್ತಿ ಸಾವು
ಅಜೆಕಾರು: ವಿಪರೀತವಾಗಿ ಮದ್ಯ ಸೇವಿಸಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಜೆಕಾರಿನ ಕೆರ್ವಾಶೆ ಪೇಟೆಯಲ್ಲಿ ಫೆ.5 ರಂದು ಬೆಳಿಗ್ಗೆ ನಡೆದಿದೆ. ಕೆರ್ವಾಶೆ ನಿವಾಸಿ 53 ವರ್ಷದ ಹಮೀದ್ ಮೃತಪಟ್ಟ ವ್ಯಕ್ತಿ. ಇವರು ವಿಪರೀತ ಸಾರಾಯಿ ಕುಡಿಯುವ ಅಭ್ಯಾಸ ಹೊಂದಿದ್ದು, ಸುಮಾರು 1 ವರ್ಷದಿಂದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ಕೆರ್ವಾಶೆಯಲ್ಲಿ ಸುತ್ತ-ಮುತ್ತ ತಿರುಗಾಡುತ್ತಿದ್ದರು. ಆರು ತಿಂಗಳಿನಿಂದ ಮನೆಗೆ ಹೋಗದೆ ಕೆರ್ವಾಶೆ ಪೇಟೆಯಲ್ಲಿಯೇ ಶೇಂದಿ ಅಂಗಡಿಯ ವರಾಂಡದಲ್ಲಿ ಮಲಗುತ್ತಿದ್ದರು. ಎಂದಿನಂತೆ ಫೆ.4 ರಂದು ಸಂಜೆ ವಿಪರೀತ ಸಾರಾಯಿ […]
ಬ್ರಹ್ಮಾವರ: ಬನ್ನಾಡಿಯ ಮಹಿಳೆ ನಾಪತ್ತೆ
ಉಡುಪಿ: ಬನ್ನಾಡಿಯ ಪರಮ ಹಂಸ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ. 36 ವರ್ಷದ ಅನುರಾಧ ನಾಪತ್ತೆಯಾಗಿರುವ ಮಹಿಳೆ. ಇವರು ಜನವರಿ 25 ರಂದು ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಚಹರೆ: 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ವೃತ್ತ ಕಚೇರಿ ಮೊ.ನಂ: 9480805432, ಕೋಟ ಠಾಣೆ ದೂ.ಸಂಖ್ಯೆ: 0820-2564155 ಅಥವಾ 9480805454 ಅನ್ನು […]
ಹಿಜಾಬ್ ಹಠಕ್ಕೆ ಸೊಪ್ಪು ಹಾಕದ ರಾಜ್ಯ ಸರ್ಕಾರ: ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರವೇ ಅಂತಿಮ
ಬೆಂಗಳೂರು: ಶೈಕ್ಷಣಿಕ ಕ್ಷೇತ್ರದ ಸಮವಸ್ತ್ರ ನಿಯಮದ ಕುರಿತಂತೆ ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983 ಅನ್ವಯ ಶಾಲಾ, ಕಾಲೇಜುಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರದ ನಿಯಮಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983 ನಿಯಮದನ್ವಯ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸತಕ್ಕದ್ದು, ಖಾಸಗಿ ಶಾಲೆಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸುವಂತಹ ಸಮವಸ್ತ್ರವನ್ನು ಧರಿಸತಕ್ಕದ್ದು ಎಂಬ ಆದೇಶ ನೀಡಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ […]