ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಕಾರು ಡಿಕ್ಕಿ; ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಉಡುಪಿ ತಾಲೂಕಿನ ಕಡಿಯಾಳಿ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಗುರುವಾರ ಸಂಜೆ ನಡೆದಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಓರ್ವ ಗರ್ಭಿಣಿ ಸಹಿತ ಮೂವರು‌ ರಸ್ತೆಯ ಎಡಭಾಗದಿಂದ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಡೆಗೆ ರಸ್ತೆ ದಾಟುತ್ತಿದ್ದರು.ಇದೇ ವೇಳೆ ಮಣಿಪಾಲದಿಂದ ಉಡುಪಿ ಕಡೆಗೆ ವೇಗವಾಗಿ ಬರುತ್ತಿದ್ದ ಇನೋವಾ ಕಾರು ಮೂವರಿಗೂ ಡಿಕ್ಕಿ‌ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮೂವರು ರಸ್ತೆಗೆ ಬಿದ್ದಿದ್ದು, ಗರ್ಭಿಣಿ ಮಹಿಳೆಯ ತಲೆಗೆ […]

ಮಣಿಪಾಲ ಕೆಎಂಸಿಯಲ್ಲಿ ರಕ್ತದ ಗುಂಪು ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ ಯಶಸ್ವಿ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯು ಮೂತ್ರಪಿಂಡದ ವೈಫಲ್ಯವನ್ನು ಹೊಂದಿದ್ದ ಮತ್ತು ಕಳೆದ ಆರು ತಿಂಗಳಿಂದ ಹಿಮೋಡಯಾಲಿಸಿಸ್ ನಲ್ಲಿರುವ ಮಗುವಿಗೆ ಮೊಟ್ಟ ಮೊದಲ ಬಾರಿಗೆ ರಕ್ತದ ಗುಂಪು ಎಬಿಒ ಹೊಂದಾಣಿಕೆಯಾಗದ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡಿತು. ಶಿವಮೊಗ್ಗದ 14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯ ಉಂಟಾಗಿ, ಬಾಲಕನ ದೈಹಿಕ ಬೆಳವಣಿಗೆ ಮತ್ತು ಚಟುವಟಿಕೆ ಕಡಿಮೆಯಾಯಿತು. ಹೆಚ್ಚಿನ ಆರೈಕೆಗಾಗಿ ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗಕ್ಕೆ ಶಿಫಾರಸು ಮಾಡಲಾಯಿತು. ಬಳಿಕ ವೈದ್ಯರು ನೀಡಿದ ಚಿಕಿತ್ಸೆಯ […]

ಫೆ.6ರಂದು ‘ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್’ ನೂತನ ಸ್ಥಳಾಂತರಿತ ಶೋ ರೂಮ್ ನ ಉದ್ಘಾಟನೆ

ಉಡುಪಿ: ಕರಾವಳಿಯಾದ್ಯಂತ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಪರಿಕರಗಳಿಗೆ ಹೆಸರುವಾಸಿಯಾರುವ ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ ಸಂಸ್ಥೆಯ ಉಡುಪಿ ಶಾಖೆಯು ಇದೇ ಬರುವ ಫೆ.6ರ ಭಾನುವಾರದಂದು ಉಡುಪಿ ಕಲ್ಪನಾ ರಸ್ತೆಯ ಮಿತ್ರ ಆಸ್ಪತ್ರೆಯ ಬಳಿಯ ಶ್ರೀ ಗುರು ನಿತ್ಯಾನಂದ ಬಿಲ್ಡಿಂಗ್‌ ಗೆ ಸ್ಥಳಾಂತರಗೊಳ್ಳಲಿದೆ. ಫೆ.6ರಂದು ಸಂಜೆ 5ಗಂಟೆಗೆ ನಡೆಯುವ ನೂತನ ಸ್ಥಳಾಂತರಿದ ಶೋರೂಮ್ ನ ಉದ್ಘಾಟನಾ ಸಮಾರಂಭದಲ್ಲಿ‌ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ನ ರವೀಂದ್ರ ಕೆ ಶೆಟ್ಟಿ, ಸುರೇಖಾ ರವೀಂದ್ರ ಶೆಟ್ಟಿ ಹಾಗೂ ಹರೀಶ್ […]