ಫೆಬ್ರವರಿ 11ರ, 11 ಗಂಟೆ 11 ನಿಮಿಷಕ್ಕಾಗಿ ಕಾಯ್ತಾ ಇರಿ!

ಫೆಬ್ರವರಿ 11 ರಂದು, 11 ಗಂಟೆ 11 ನಿಮಿಷಕ್ಕಾಗಿ ಕಾಯ್ತಾ ಇರಿ! ಹೀಗೊಂದು ಸಂದೇಶ ಬಂದಿದ್ದು ಜೇಮ್ಸ್ ಚಿತ್ರತಂಡದ ಕಡೆಯಿಂದ. ಯಸ್. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಫ್ಯಾನ್ಸ್​​ಗಳಿಗೆ ಶೀಘ್ರದಲ್ಲೇ  ‘ಜೇಮ್ಸ್’ ಚಿತ್ರತಂಡ ಗಿಫ್ಟ್ ಕೊಡಲು ರೆಡಿಯಾಗಿದೆ. ಪ್ರತಿಕ್ಷಣ ‘ಜೇಮ್ಸ್​’ ಚಿತ್ರದ ಅಪ್ಡೇಟ್​ಗಳ ಬಗ್ಗೆ ಕಾಯುತ್ತುರುವ ಅಪ್ಪು ಫ್ಯಾನ್ಸ್​ಗಳಿಗೆ ನಿರಾಸೆ ಮಾಡಬಾರದು ಅಂತ ಜೇಮ್ಸ್ ಚಿತ್ರತಂಡ ನಿರ್ಧರಿಸಿದ್ದು, ಜೇಮ್ಸ್ ಚಿತ್ರದ ಟೀಸರ್, ಟ್ರೈಲರ್ ಏನನ್ನು ಲಾಂಚ್ ಮಾಡದೇ ನೇರವಾಗಿ ಚಿತ್ರವನ್ನು ಥಿಯೇಟರ್​​ನಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ […]

ಕಳವು ತಡೆಗಟ್ಟಲು ಗೋ ರಕ್ಷಣಾ ಸಮಿತಿ ರಚಿಸಿ: ಜಿಲ್ಲಾಡಳಿತಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಸಚಿವ ಪ್ರಭು ಬಿ.ಚವ್ಹಾಣ್

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಕಳವು ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಕೂಡಲೇ ಕ್ರಮಕೈಗೊಂಡು, ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗೋ ರಕ್ಷಣಾ ಸಮಿತಿ ರಚಿಸಬೇಕೆಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮೂಲಕ ಖಡಕ್ ಎಚ್ಚರಿಕೆ ನೀಡಿದರು. ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳು ಕಳವು ಆಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯನ್ನು ಸೂಕ್ಷ್ಮವಾಗಿ […]

ಮರವಂತೆ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಗಂಗೊಳ್ಳಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ತಾಲೂಕಿನ ಮರವಂತೆ ಗ್ರಾಮದ ಮೂಡು ಮರವಂತೆ ಎಂಬಲ್ಲಿ ಫೆ.3ರಂದು ಮಧ್ಯಾಹ್ನ ನಡೆದಿದೆ. ಮೂಡು ಮರವಂತೆ ಶ್ರೀನಿವಾಸ ನಾಯಕ್ ಅವರ ಪತ್ನಿ 53ವರ್ಷದ ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಸುಮಾರು 12 ವರ್ಷಗಳಿಂದ ಮಾನಸಿಕ  ಖಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರೂ  ಸಂಪೂರ್ಣ ಗುಣಮುಖವಾಗಿರುವುದಿಲ್ಲ. ಇದೇ ಖಿನ್ನತೆಯಲ್ಲಿ ಫೆ.3ರಂದು ಮಧ್ಯಾಹ್ನ 2:30ರ ಸುಮಾರಿಗೆ ಮನೆಯ ಬದಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು […]

ಕುಂದಾಪುರದ ಉದ್ಯಮಿ ಮೊಹಮ್ಮದ್ ಗೌಸ್ ನಿಧನ

ಕುಂದಾಪುರ: ಇಲ್ಲಿನ ಶಾಸ್ತ್ರೀ ಸರ್ಕಲ್ ಬಳಿಯ ಪಾದುಕಾಲಯ ಅಂಗಡಿ ಮಾಲಕ, ಕುಂದಾಪುರ ಎಲ್ ಐ ಸಿ ರಸ್ತೆಯ ನಿವಾಸಿ ಮೊಹಮ್ಮದ್ ಗೌಸ್ (74) ಶುಕ್ರವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಸಂಜೆ 5 ಗಂಟೆಗೆ ಕುಂದಾಪುರ ಜಾಮೀಯ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಾವುಂದ: ಸೌಪರ್ಣಿಕ ಹೊಳೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಬೈಂದೂರು: ಹೊಳೆಯ ದಡದ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದು  ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ನಾವುಂದ ಗ್ರಾಮದ ರೈಲ್ವೆ ಬ್ರಿಡ್ಜ್ ಬಳಿಯ ಸೌಪರ್ಣಿಕ ಹೊಳೆಯಲ್ಲಿ ಸಂಭವಿಸಿದೆ‌. ಮೃತರನ್ನು ನಾವುಂದ ಗ್ರಾಮದ ಅರೆಹೊಳೆ ನಿವಾಸಿ 50 ವರ್ಷದ ವಿಜಯ ಮಡಿವಾಳ ಎಂದು ಗುರುತಿಸಲಾಗಿದೆ. ಇವರು ಕೆಲಸಕ್ಕೆಂದು ಹೋದವರು  ಎರಡ್ಮೂರು ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ದು, ಅದರಂತೆ ಫೆ.1ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಮನೆಗೆ ಬಂದಿರುವುದಿಲ್ಲ. ಫೆ. 3ರಂದು ಬೆಳಿಗ್ಗೆ  ವ್ಯಕ್ತಿಯೊಬ್ಬರು ವಿಜಯ ಮನೆಯವರಿಗೆ ಕರೆ […]