ಬಜೆಟ್ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಪೂರಕ ಮೈಲಿಗಲ್ಲು: ಯಶ್ ಪಾಲ್ ಸುವರ್ಣ

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು ಮಂಡಿಸಿದ 2022-23 ನೇ ಸಾಲಿನ ಕೇಂದ್ರ ಬಜೆಟ್ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಪೂರಕ ಮೈಲಿಗಲ್ಲು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್‌ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ. ರಕ್ಷಣಾ ಇಲಾಖೆಯಲ್ಲಿ 68% ಸ್ಥಳೀಯ ಸಾಮಾಗ್ರಿ ಖರೀದಿ, ಸಹಕಾರ ಸಂಘಗಳ ಸರ್ ಚಾರ್ಜ್ 12% ನಿಂದ 7% ಇಳಿಕೆ, ರಾಜ್ಯ ಸರಕಾರಗಳಿಗೆ 50 ವರ್ಷಗಳ ಕಾಲ 1 ಲಕ್ಷ ಕೋಟಿ ಅನುದಾನ, ಡಿಜಿಟಲೀಕರಣಕ್ಕೆ ವಿಶೇಷ […]

ಮಾಚಿದೇವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ, ಫೆ.01: ಮಡಿವಾಳ ಮಾಚಿದೇವರಂತಹ ಮಹಾನ್ ಪುರುಷರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕರೆ ನೀಡಿದರು. ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ, ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. 12 ನೇ ಶತಮಾನದಲ್ಲಿಯೇ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದ ಮಡಿವಾಳ ಮಾಚಿದೇವ ಅವರು, ಮಹಿಳೆಯರಿಗೆ ಸಮಾನತೆ […]

ಬಂಡವಾಳ ಶಾಹಿಗಳಿಗೆ ನೆರವಾಗುವ ಬಜೆಟ್: ರಮೇಶ್ ಕಾಂಚನ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಅವರು ಮಂಡಿಸಿರುವ ಬಜೆಟ್‌ ನಿರಾಶಾದಾಯಕವಾಗಿದ್ದು ಮಧ್ಯಮ ಹಾಗೂ ಬಡವರ್ಗದವರನ್ನು ಸಂಪೂರ್ಣ ನಿರ್ಲಕ್ಷಿಸಿ ಕೇವಲ ಬಂಡವಾಳಶಾಹಿಗಳಿಗೆ ನೆರವಾಗುವ ನಿಟ್ಟಿನಲ್ಲಿದೆ ಎಂದು ಉಡುಪಿ ನಗರಸಭೆಯ ಪ್ರತಿಪಕ್ಷ ನಾಯಕ ಹಾಗೂ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ಹೇಳಿದ್ದಾರೆ. ಈ ಬಾರಿಯ ಬಜೆಟ್‌ ಕುರಿತು ದೇಶದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಮಧ್ಯಮ ಹಾಗೂ ಬಡವರ್ಗದ ಜನರು ವಿಶೇಷವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ದಿನನಿತ್ಯದ ಬೆಲೆಗಳ ಏರಿಕೆ ಮಾಡಿರುವುದರೊಂದಿಗೆ ಗ್ಯಾಸ್‌, ಇಂಧನ ಹಾಗೂ ಪ್ರತಿಯೊಂದರಲ್ಲೂ […]

ಕೇಂದ್ರ ಸರ್ಕಾರದ ಬಜೆಟ್ ಮಂಡನೆ: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ !

ನವದೆಹಲಿ: ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಕೇಂದ್ರೀಯ ಬಜೆಟ್ ನಲ್ಲಿ ಯಾವುದು ಅಗ್ಗ ಯಾವುದು ತುಟ್ಟಿ ಯಾಗಿರಲಿದೆ ಇಲ್ಲಿದೆ ನೋಡಿ.. ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿದಂತೆ, ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ಫೋನ್ ಚಾರ್ಜರ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು ಅಗ್ಗವಾಗಲಿವೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಹಾಗೂ ರತ್ನದ ಕಲ್ಲುಗಳ ಮೇಲಿನ ಸೀಮಾ ಸುಂಕವನ್ನು ಶೇ 5ಕ್ಕೆ ಇಳಿಸಲಾಗಿದೆ. ಆ ನಂತರದಲ್ಲಿ 350ಕ್ಕೂ ಹೆಚ್ಚು ಸೀಮಾ […]

ದೇಶದ ಅಭಿವೃದ್ಧಿಗೆ ಪೂರಕವಾದ ಬಜೆಟ್: ನಯನಾ ಗಣೇಶ್

ಉಡುಪಿ: ಮುಂದಿನ 25 ವರ್ಷಗಳ ಹಿತ ದೃಷ್ಟಿಯನ್ನಿಟ್ಟುಕೊಂಡು ಈ ಬಾರಿಯ ಬಜೆಟ್ ಮಂಡಿಸಲಾಗಿದೆ, ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೈಸರ್ಗಿಕ ಕೃಷಿ,‌ ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮುಖಾಂತರ 18ಲಕ್ಷ ಮನೆ ನಿರ್ಮಾಣ, ಹರ್ ಘರ್, ನಲ್ ಜಲ್ ಯೋಜನೆ ಮುಖಾಂತರ 12 ಕೋಟಿ ಮನೆಗಳಿಗೆ ನಲ್ಲಿ ನೀರು ವ್ಯವಸ್ಥೆ, ಒನ್ ನೇಶನ್, ಒನ್ ರಿಜಿಸ್ಟ್ರೇಷನ್ ವ್ಯವಸ್ಥೆ, ಅಂಚೆ ಕಚೇರಿಗಳಿಗೆ […]