ವಿಕೇಂಡ್, ನೈಟ್ ಕರ್ಫ್ಯೂ ರದ್ದು: ಕರಾವಳಿಯಲ್ಲಿ ಮತ್ತೆ ಕಲೆಗಟ್ಟಿದ ಕಂಬಳ ಉತ್ಸವ..!!

ಕಾರ್ಕಳ: ಕೋವಿಡ್ ವೀಕೆಂಡ್ ಹಾಗೂ ನೈಟ್ ಕರ್ಫ್ಯೂನಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಕಂಬಳ ಕೂಟಗಳು, ಇದೀಗ ಮತ್ತೆ ಶುರುವಾಗಿದೆ. ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ರದ್ದಾದ ಬೆನ್ನಲ್ಲೇ ಕಂಬಳ ಜಾತ್ರೆಗೆ ಕರಾವಳಿ ಸಜ್ಜುಗೊಂಡಿದೆ. ಇದೇ ಬರುವ ಫೆಬ್ರವರಿ 5ರಂದು ಕಾಂತಾವರ ಬಾರಾಡಿಬೀಡು ಸೂರ್ಯಚಂದ್ರ ಜೋಡುಕೆರೆ ಕಂಬಳದೊಂದಿಗೆ ಮತ್ತೆ ಕರಾವಳಿಯಾದ್ಯಂತ ಕಂಬಳ ಉತ್ಸವ ಆರಂಭವಾಗಲಿದೆ ಎಂದು ಕಂಬಳ ಸಮಿತಿಯ ಪ್ರಕಟಣೆ ತಿಳಿಸಿದೆ.

ಗೋಮಾಳ ಭೂಮಿ ಅನ್ಯ ಉದ್ದೇಶಗಳಿಗೆ ಬಳಸುವ ಚಿಂತನೆ ಖಂಡನೀಯ: ವಾಸುದೇವ ಭಟ್ ಪೆರಂಪಳ್ಳಿ 

ಗೋಮಾಳ ಭೂಮಿಗಳನ್ನು ಅನ್ಯ ಉದ್ದೇಶಗಳಿಗೆ ಬಳಸುವ ಕುರಿತಂತೆ ರಾಜ್ಯ ಸರ್ಕಾರವು ಚಿಂತನೆ ನಡೆಸಿರುವುದು ಖಂಡನೀಯವಾದುದು ಎಂದು ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಒಂದು ಕಡೆ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತಂದು, ಇನ್ನೊಂದು ಕಡೆ ಗೋವಿನ ನೆಲೆಗಳನ್ನು ನುಂಗುವ ಪ್ರವೃತ್ತಿಗೆ ಕೈಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹೆಕ್ಟೇರ್ ಗಟ್ಟಲೆ ಗೋಮಾಳ ಭೂಮಿ ಅನ್ಯ ಉದ್ದೇಶಗಳಿಗೆ ಬಳಕೆ ಆಗಿದೆ‌. ಈಗ ಉಳಿದಿರುವ […]

ಆಚಾರ್ಯಾಸ್ ಏಸ್: ದ್ವಿತೀಯ ಪಿಯುಸಿ ಪರೀಕ್ಷಾ ಸ್ನೇಹಿ ಕೃತಿ ಬಿಡುಗಡೆ

ಉಡುಪಿ: 9, 10, ಪಿಯುಸಿ, ಸಿ.ಇ.ಟಿ, ಜೆ.ಇ.ಇ, ನೀಟ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಟ ಫಲಿತಾಂಶ ಗಳಿಸುತ್ತಿರುವ ಉಡುಪಿ ಆಚಾರ್ಯಾಸ್ ಏಸ್ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸ್ನೇಹಿ ಕೃತಿಯನ್ನು ನೀಡಲಾಯಿತು. ದ್ವಿತೀಯ ಪಿಯುಸಿ ಯ ವಿಜ್ಞಾನ ವಿದ್ಯಾರ್ಥಿಗಳ ಗರಿಷ್ಟ ಫಲಿತಾಂಶಕ್ಕಾಗಿ ಏಸ್ ಸಂಸ್ಥೆಯ ಪ್ರತಿಭಾನ್ವಿತ ಪ್ರಾಧ್ಯಾಪಕ ವೃಂದ ರಚಿಸಿರುವ ಕೃತಿಯನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಶ್ರೀಯುತ ಜೇಸನ್ ಸರ್ ಅವರು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ನೀಡಿ […]

ಉಡುಪಿ: ಪಾರ್ಸೆಲ್ ವಸ್ತು ಸಮೇತ ಸ್ಕೂಟರ್ ಕಳವು; ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಡುಪಿ: ಪಾರ್ಸೆಲ್ ವಸ್ತುವಿನೊಂದಿಗೆ ಸ್ಕೂಟರ್ ಅನ್ನು ಕಳವು ಮಾಡಿರುವ ಘಟನೆ ಉಡುಪಿ ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ಎಂಬಲ್ಲಿ ಸೋಮವಾರ ನಡೆದಿದೆ. ಸ್ಕೂಟರ್ ಕಳ್ಳತನ ಮಾಡಿರುವ ವ್ಯಕ್ತಿಯನ್ನು ಸಾಲಿಗ್ರಾಮ ಸಾಸ್ತಾನ ವ್ಯಾಪ್ತಿಯ ಯುವಕ ಎಂದು ಗುರುತಿಸಲಾಗಿದೆ. ಬೈಕ್ ಮಾಲೀಕರು ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ಬಳಿ ಹೋಂಡಾ ಡಿಯೋ‌ ಸ್ಕೂಟರ್ ಅನ್ನು ನಿಲ್ಲಿಸಿ ಕರ್ಮಷಿಯಲ್ ಪಾರ್ಸೆಲ್ ಕೊಡಲು ಹೋಗಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಕಳ್ಳನೋರ್ವ ಪಾರ್ಸೆಲ್ ವಸ್ತುವಿನೊಂದಿಗೆ ಸ್ಕೂಟರ್ ಅನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ. ಆತ […]

ಜಿಲ್ಲೆಯಲ್ಲಿ ಕೋವಿಡ್-19 ಪರಿಷೃತ ಮಾರ್ಗಸೂಚಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ, ಜ.31: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಠಾನದಿಂದ ರಾಜ್ಯಾದ್ಯಂತ ಪಾಸಿಟಿವ್ ಪ್ರಕರಣಗಳ ಪ್ರಮಾಣದ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಕಂಡುಬಂದಿದ್ದರಿಂದ ಸರ್ಕಾರದ ಆದೇಶದಲ್ಲಿ ಕೆಲವೊಂದು ಮಾರ್ಪಾಡು ಮಾಡಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ ಉಡುಪಿ ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜನವರಿ 31 ರಿಂದ ಜಾರಿಗೆ ಬರುವಂತೆ ಪೆಬ್ರವರಿ 15 ರ ವರೆಗೆ ಈ ಕೆಳಗಿನಂತೆ ಮಾರ್ಗಸೂಚಿ/ನಿಬಂಧನೆಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ ಯನ್ನು […]