ಸೇಬು ಹಣ್ಣು ತಿಂತೀರಾ? ಹಾಗಾದ್ರೆ ಈ ವಿಷ್ಯ ನಿಮಗೆ ಗೊತ್ತಿರಲೇಬೇಕು
ಪ್ರತಿದಿನ ಒಂದು ಸೇಬು ಹಣ್ಣನ್ನು ತಿಂದು ವೈದ್ಯರಿಂದ ದೂರವಿರಿ ಎಂಬ ಮಾತನ್ನು ಕೇಳಿರುತ್ತೇವೆ. ಸೇಬುಹಣ್ಣಿನಲ್ಲಿ ಜೀವಸತ್ವಗಳು, ಆಂಟಿ-ಆಕ್ಸಿಡೆಂಟ್ ಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಕೆ ಗಳಂತಹ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇಷ್ಟೆಲ್ಲಾ ಅಂಶಗಳಿರುವ ಸೇಬು ಹಣ್ಣನ್ನು ಯಾವಾಗ ಸೇವಿಸಬೇಕು ಎಂಬುದನ್ನು ನಾವು ತಿಳಿದಿರಬೇಕು. ಸೇಬು ಹಣ್ಣನ್ನು ರಾತ್ರಿ ಮಲಗುವ ಮೊದಲು ಸೇವಿಸಬಾರದು. ಬದಲಾಗಿ ಹಣ್ಣನ್ನು ಹಗಲಿನಲ್ಲಿ ಸೇವಿಸುವುದು ದೇಹಕ್ಕೆ ಉತ್ತಮ. ಹಾಗೇ ಹಸಿವಾಯಿತೆಂದು ಸೇಬು ಹಣ್ಣನ್ನು ತಿನ್ನಬಾರದು. ಸೇಬುಹಣ್ಣನ್ನು ಯಾವಾಗಲೂ ತುಂಬಿದ […]
ರಾಜ್ಯಾದ್ಯಂತ ಜ.31 ರಿಂದ ನೈಟ್ ಕರ್ಪ್ಯೂ ರದ್ದು
ಬೆಂಗಳೂರು: ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಧಿಸಲಾಗಿದ್ದ ನೈಟ್ ಕರ್ಪ್ಯೂ ಅನ್ನು ರದ್ದುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜ.31 ರ ಬಳಿಕ ನೈಟ್ ಕರ್ಫ್ಯೂ ರದ್ದಾಗಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಚ್ಚಿದ ಶಾಲೆಗಳನ್ನು ಇನ್ನು ತೆರೆಯಬಹುದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ತಜ್ಞರು, ಅಧಿಕಾರಿಗಳು ಮತ್ತು ಸಚಿವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಾತ್ರೆ, ಪ್ರತಿಭಟನೆ, ರ್ಯಾಲಿಗಳಿಗೆ ನಿರ್ಬಂಧ ಮುಂದುವರಿಕೆ ಮಂದಿರ – ಚರ್ಚ್- ಮಸೀದಿಗಳಲ್ಲಿ ಸೇವೆ […]
ಅಂಗನವಾಡಿ ಕೇಂದ್ರಗಳಿಗೆ ಆಯಾ ತಾಲೂಕಿನ ಫಾರ್ಮ್ ಗಳಿಂದಲೇ ಮೊಟ್ಟೆ ವಿತರಣೆಗೆ ವ್ಯವಸ್ಥೆ; ಸಚಿವ ಹಾಲಪ್ಪ ಆಚಾರ್
ಅಂಗನವಾಡಿ ಕೇಂದ್ರಗಳಿಗೆ ಇನ್ಮುಂದೆ ಆಯಾ ತಾಲೂಕಿನ ಫಾರ್ಮ್ ಗಳಿಂದ ಇ ಟೆಂಡರ್ ಮೂಲಕ ಮೊಟ್ಟೆ ವಿತರಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಬಿ.ಆಚಾರ್ ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಮೊಟ್ಟೆ ವಿತರಣೆ ಮಾಡಲು ತಾಲೂಕು ಮಟ್ಟದಲ್ಲಿ ಇ ಟೆಂಡರ್ ನೀಡುತ್ತೇವೆ. ಆಯಾ ತಾಲೂಕುಗಳಲ್ಲೇ ಮೊಟ್ಟೆ ಫಾರ್ಮ್ ಹಾಗೂ ಡಿಸ್ಟಿಬ್ಯೂಟರ್ ಗಳಿದ್ದಾರೆ. ಹಾಗಾಗಿ ಅವರಿಗೆ […]
ಶ್ರೀಕೃಷ್ಣಮಠಕ್ಕೆ ಸಚಿವ ಹಾಲಪ್ಪ ಬಿ.ಆಚಾರ್ ಭೇಟಿ
ಉಡುಪಿ: ಶ್ರೀಕೃಷ್ಣಮಠಕ್ಕೆ ಕರ್ನಾಟಕ ಸರಕಾರದ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ, ಮಕ್ಕಳ ಕಲ್ಯಾಣ ಇಲಾಖಾ ಮಂತ್ರಿಗಳಾದ ಹಾಲಪ್ಪ ಬಿ.ಆಚಾರ್ ರವರು ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಪ್ರಸಾದ ಪಡೆದರು. ಈ ಸಂದರ್ಭದಲ್ಲಿ, ಗಣಿ ಮತ್ತು ಭೂವಿಜ್ಞಾನ ಇಲಾಖಾ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಇಲಾಖೆಯ ನಿರ್ದೇಶಕ ರಾಮಮನೋಹರ ಪ್ರಸಾದ್, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ ಭಟ್, ಸಚಿವರ ಪತ್ನಿ ಹಾಗೂ ಆಪ್ತ […]
ಜ.30ಕ್ಕೆ ಕಾನೂನು ಸಚಿವ ಜೆ.ಸಿ. ಮಧುಸ್ವಾಮಿ ಉಡುಪಿ ಪ್ರವಾಸ
ಉಡುಪಿ: ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಜನವರಿ 30 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30 ಕ್ಕೆ ನಗರದ ಆದರ್ಶ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಹೆಬ್ರಿ ತಾಲೂಕು ಶಿವಪುರ ಗ್ರಾಮದ ದೇವಸ್ಥಾನ ಬೆಟ್ಟ ಎಂಬಲ್ಲಿ ಕಾರ್ಕಳ- ಉಡುಪಿ ಉಪವಿಭಾಗದ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಉದ್ಘಾಟನೆ ನೆರವೇರಿಸಿ, ನಂತರ ತುಮಕೂರಿಗೆ ತೆರಳಲಿರುವರು.