ಮಣಿಪಾಲ: ಹೆಬ್ರಿಬೀಡು ಡಾ.ಅರವಿಂದ ಬಲ್ಲಾಳ್ ಸ್ಮಾರಕ ದತ್ತಿನಿಧಿ ಉದ್ಘಾಟನೆ
ಮಣಿಪಾಲ: ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಯೆನಪೋಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರು ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿ ಸುಮಾರು ನಾಲ್ಕೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹೆಬ್ರಿಬೀಡು ಡಾ.ಅರವಿಂದ ಬಲ್ಲಾಳ್‌ರ ಸ್ಮರಣಾರ್ಥ ಅವರ ಕುಟುಂಬಿಕರು ಹಾಗೂ ಶಿಷ್ಯರು ಮಾಹೆಯಲ್ಲಿ ಸ್ಥಾಪಿಸಿರುವ ದತ್ತಿನಿಧಿಯನ್ನು ಶನಿವಾರ ಉದ್ಘಾಟಿಸಲಾಯಿತು. ಈ ದತ್ತಿನಿಧಿಯನ್ನು ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ರಂಜನ್ ಆರ್.ಪೈ ಅವರು ಉದ್ಘಾಟಿಸಿದರು. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್ ಹಾಗೂ ಮಾಹೆಯ ಸಹಕುಲಪತಿ ಡಾ.ಎಂ.ವೆಂಕಟ್ರಾಯ ಪ್ರಭು […]
ಜಿಲ್ಲೆಯಲ್ಲಿ ಇಂಧನ ಸಚಿವರ ಪ್ರವಾಸ
ಉಡುಪಿ,ಜ.29: ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಜನವರಿ 30 ರಿಂದ ಫೆ. 1 ರ ವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜ.30 ರಂದು ಬೆಳಗ್ಗೆ 11 ಗಂಟೆಗೆ ನಗರದ ಆದರ್ಶ ಆಸ್ಪತ್ರೆಯಲ್ಲಿ ಆದರ್ಶ ಕಾಲೇಜು ಆಫ್ ನರ್ಸಿಂಗ್ ಮತ್ತು ಆದರ್ಶ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜು ಉದ್ಘಾಟನಾ ಕಾರ್ಯಕ್ರಮ, ಮ.12 ಕ್ಕೆ ಶಿವಪುರದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಂಡಿ ಆಣೆಕಟ್ಟು ನಿರ್ಮಾಣ ಕಾಮಗಾರಿ ಉದ್ಘಾಟನೆ ಹಾಗೂ […]
ಉಡುಪಿ: ನರ್ಮ್ ಬಸ್ ದರ ಏರಿಕೆ ವಿರೋಧಿಸಿ ಸಿಐಟಿಯು ಪ್ರತಿಭಟನೆ
ಉಡುಪಿ: ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ಸರಕಾರಿ ನರ್ಮ್ ಬಸ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ಎಲ್ಲಾ ರೂಟ್ ಗಳಲ್ಲಿ ಬಸ್ ಓಡಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಉಡುಪಿ ತಾಲೂಕಿನ ಸಮಿತಿ ನೇತೃತ್ವದಲ್ಲಿ ಶನಿವಾರ ಉಡುಪಿ ನರ್ಮ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಖಾಸಗಿ ಬಸ್ ಮಾಲೀಕರ ಒತ್ತಡಕ್ಕೆ ಮಣಿದು ನರ್ಮ್ ಬಸ್ ಗಳ ದರ ಹೆಚ್ಚಳ ಮಾಡಲಾಗಿದೆ. ಇದು ಖಂಡನೀಯ. ಕೂಡಲೇ ನರ್ಮ್ ಬಸ್ ದರವನ್ನು ಇಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಉಡುಪಿ […]
ಕರ್ನಾಟಕದ ಸೂಪರ್ ಮಾರ್ಕೆಟ್ಗಳಲ್ಲಿ ಲಭ್ಯ ಈ ಸೂಪರ್ ಐಟಂ, ಏನಿದು?
ಬೆಂಗಳೂರು: ಕರ್ನಾಟಕ ಸರ್ಕಾರವು ನೆರೆಯ ಮಹಾರಾಷ್ಟ್ರದಂತೆ ಅಂಗಡಿಗಳಲ್ಲಿ ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಮಹಾರಾಷ್ಟ್ರ ಕ್ಯಾಬಿನೆಟ್ 100 ಚದರ ಮೀಟರ್ ಪ್ರದೇಶಗಳಲ್ಲಿ ಹರಡಿರುವ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಿದೆ. ಈ ಹೊಸ ಕ್ರಮವು ದ್ರಾಕ್ಷಿ ಬೆಳೆಯುವ ರೈತರಿಗೆ ಹಾಗೂ ಕೈಗಾರಿಕೆಗೆ ಸಹಾಯಕವಾಗಿದೆ. ನಮ್ಮ ಅಧಿಕಾರಿಗಳ ತಂಡವು ಶೀಘ್ರವೇ ಮಹರಾಷ್ಟ್ರಕ್ಕೆ ಭೇಟಿ ನೀಡಿ ಇದರ ಸಾಧಕ-ಭಾದಕಗಳನ್ನು ಅಧ್ಯಯನ ಮಾಡಿ ವರದಿ ನೀಡಲಿದೆ ಎಂದು […]
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅಮೈ ಮಹಾಲಿಂಗ ನಾಯ್ಕ್ ಮನೆಗೆ ಪೇಜಾವರ ಶ್ರೀ ಭೇಟಿ; ಮಹಾಲಿಂಗರ ಸಾಧನೆ ದೇಶಕ್ಕೆ ಮಾತ್ರವಲ್ಲ, ಜಗತ್ತಿಗೇ ಸ್ಫೂರ್ತಿ ಎಂದ ಶ್ರೀಗಳು
ಬಂಟ್ವಾಳ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ರೈತ ಅಮೈ ಮಹಾಲಿಂಗ ನಾಯ್ಕ್ ತೋಟಕ್ಕೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು. ಶ್ರೀಗಳ ದಿಢೀರ್ ಭೇಟಿಯಿಂದ ಅಚ್ಚರಿಗೊಂಡ ಮಹಾಲಿಂಗ ಅವರು ಅತೀವ ಸಂತಸಪಟ್ಟು ಭಕ್ತಿ ಗೌರವದಿಂದ ಶ್ರೀಗಳನ್ನು ಬರಮಾಡಿಕೊಂಡರು. ತೋಟಕ್ಕೆ ತೆರಳಿದ ಶ್ರೀಗಳು, ಮಹಾಲಿಂಗರು ಕೊರೆದ ಸುರಂಗದ ಒಳಹೊಕ್ಕು ವಿಸ್ಮಯಗೊಂಡರು. ಸುರಂಗ ಕೊರೆದು ಗಂಗೆಯನ್ನು ಪಡೆದ ಯಶೋಗಾಥೆಯನ್ನು ನಾಯ್ಕರಿಂದಲೇ ಕೇಳಿ, ತುಂಬಿರುವ ಸಮೃದ್ಧ ಜಲಸೆಲೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಬಳಿಕ ಮನೆಗೆ ತೆರಳಿದ ಶ್ರೀಗಳಿಗೆ ಮಹಾಲಿಂಗ […]