ಅಜೆಕಾರು: ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು
ಕಾರ್ಕಳ: ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಜ್ಯೋತಿ ಹೈಸ್ಕೂಲ್ ಸಮೀಪದ ದೊಡ್ಡಪಲ್ಕೆ ಕ್ರಾಸ್ ಎಂಬಲ್ಲಿ ನಡೆದಿದೆ. ಮೃತ್ಯುಂಜಯ (28)ಆತ್ಮಹತ್ಯೆ ಮಾಡಿಕೊಂಡ ಯುವಕ. ತಂದೆ ತಾಯಿ ಬಾದಾಮಿಯಲ್ಲಿ ನೆಲೆಸಿದ್ದು ಅಜೆಕಾರಿನಲ್ಲಿ ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತಿದ್ದನು. ಕೆಲವು ದಿನಗಳ ಹಿಂದೆ ಕೆಲಸವನ್ನು ಬಿಟ್ಟಿದ್ದು, ಏಕಾಂಗಿಯಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಜ.28 ರಂದು ಆತ್ಮಹತ್ಯೆ ಗೆ ಶರಣಾಗಿದ್ದಾನೆ. ಅತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಕೃಷ್ಣಾಪುರ ಮಠದಿಂದ ಡಾ. ಶಶಿಕಿರಣ್ ಅವರಿಗೆ ‘ವೈದ್ಯವಾರಿಧಿ’ ಬಿರುದಿನೊಂದಿಗೆ ಸನ್ಮಾನ
ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಕೃಷ್ಣಾಪುರ ಮಠದ ವತಿಯಿಂದ ರಾಜಾಂಗಣದ ಜನಾರ್ದನ ತೀರ್ಥ ವೇದಿಕೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕೋವಿಡ್ ಸಂದರ್ಭದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದ ಡಾ. ಶಶಿಕಿರಣ್ ಉಮಾಕಾಂತ್ ಅವರನ್ನು “ವೈದ್ಯವಾರಿಧಿ” ಎಂಬ ಬಿರುದಿನೊಂದಿಗೆ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪರ್ಯಾಯೋತ್ಸವಕ್ಕೆ ದೇಣಿಗೆ ನೀಡಿ ವಿಶೇಷವಾಗಿ ಸಹಕರಿಸಿದ ಭಕ್ತಾಭಿಮಾನಿಗಳನ್ನು ಶ್ರೀಗಳು ಸನ್ಮಾನಿಸಿ, ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪ್ರಧಾನ […]
ಆತ್ರಾಡಿ ಗ್ರಾಮದಲ್ಲಿ ಮಟ್ಕಾ ಜುಗಾರಿ ಆಟ; ಓರ್ವನ ಬಂಧನ
ಹಿರಿಯಡ್ಕ: ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಹಾಲು ಡೈರಿಯ ಎದುರಿನ ಸಾರ್ವಜನಿಕ ರಸ್ತೆಯ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ಬಂಧಿತ ಆರೋಪಿಯನ್ನು ಪ್ರವೀಣ್ ಕೆ ಎಂದು ಗುರುತಿಸಲಾಗಿದೆ. ಈತ ಆತ್ರಾಡಿ ಗ್ರಾಮದ ಹಾಲು ಡೈರಿಯ ಎದುರಿನ ಸಾರ್ವಜನಿಕ ರಸ್ತೆಯ ಬಳಿ ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಹಿರಿಯಡಕ ಠಾಣೆಯ ಪಿಎಸ್ […]
ನಾವುಂದ: ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆಗೆ ಯತ್ನ
ಬೈಂದೂರು: ಕಲ್ಲು ಎತ್ತು ಹಾಕಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಬೈಂದೂರು ತಾಲೂಕಿನ ನಾವುಂದದ ವಿನಾಯಕ ಬಸ್ ನಿಲ್ದಾಣದ ಬಳಿ ನಡೆದಿದೆ. ನಾವುಂದ ಗ್ರಾಮದ ನೀಲು ಎಂಬವರು ಜ. 26ರಂದು ಸಂಜೆ ನಾವುಂದದಿಂದ ಕುಂದಾಪುರ ಆಸ್ಪತ್ರೆಗೆ ಹೋಗುತ್ತಿದ್ದರು. ವಿನಾಯಕ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಆರೋಪಿ ತಿಮ್ಮಪ್ಪ ಪೂಜಾರಿ ಎಂಬಾತನು ನೀಲು ಅವರನ್ನು ತಡೆದು ಮುಂದಕ್ಕೆ ಹೋಗಲು ಬಿಡದೇ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಶಿಲೆ ಕಲ್ಲನ್ನು ಎತ್ತಿ ಬಿಸಾಡಿ ಪಿರ್ಯಾದಿದಾರರನ್ನು ಕೊಲ್ಲುವುದಾಗಿ ಜೀವ […]
ಫೆ.8, 9: ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ
ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವು ಫೆಬ್ರವರಿ 8 ಮತ್ತು 9 ರಂದು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೆಬ್ರವರಿ 8 ರಂದು ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟ ಪ್ರಾರಂಭವಾಗಲಿದ್ದು, ಎರಡು ಡೋಸ್ ಕೋವಿಡ್ ಲಸಿಕೆ ಪಡೆದ ಸರಕಾರಿ ನೌಕರರು ತಮ್ಮ ವಯಸ್ಸಿನ ದೃಢೀಕರಣ ದಾಖಲಾತಿ ಹಾಗೂ ಕೋವಿಡ್ ಲಸಿಕೆ ಪಡೆದ ಕುರಿತ ದಾಖಲಾತಿಯನ್ನು ಹಾಜರುಪಡಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ನೌಕರರಿಗೆ ಅಥ್ಲೆಟಿಕ್ಸ್, […]