ತೀರ್ಥಹಳ್ಳಿ: ಸದ್ದಿಲ್ಲದೆ ಹಬ್ಬುತ್ತಿದೆ ಮಂಗನ ಕಾಯಿಲೆ
ತೀರ್ಥಹಳ್ಳಿ: ಕಳೆದ ಅನೇಕ ವರ್ಷಗಳಿಂದ ಮಲೆನಾಡಿನಾದ್ಯಂತ ಬೀತಿ ಹುಟ್ಟಿಸಿದ್ದ ಮಂಗನಕಾಯಿಲೆ ಸದ್ದಿಲ್ಲದೆ ಹಬ್ಬುತ್ತಿದೆ. ಜ.21 ರಂದು ಈ ವರ್ಷದ ಮೊದಲ ಪ್ರಕರಣ ಪತ್ತೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಾಳೂರು ವ್ಯಾಪ್ತಿಯ ಕೂಡಿಗೆ ಗ್ರಾಮದ ಮಹಿಳೆಯಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿದೆ. ಕಳೆದ ಎರಡು ದಶಕದಿಂದ ಶಿವಮೊಗ್ಗ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಪತ್ತೆಯಾಗಿದ್ದ ಮಂಗನ ಕಾಯಿಲೆ 70 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು. ನೂರಾರು ಜನರು ಮಂಗನ ಕಾಯಿಲೆ ಜ್ವರದಿಂದ ಬಳಲಿದ್ದರು. ಶೆಟ್ಟಿಗಳ ಕೊಪ್ಪ, ಲಕ್ಕುಂದ, ದೊಡ್ಡಿನಮನೆ, […]
ಕಾರ್ಕಳ: ನೇಣುಬಿಗಿದ ಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಅರೆಕಾಲಿಕ ನೌಕರನ ಶವ ಪತ್ತೆ
ಕಾರ್ಕಳ: ಕಾರ್ಕಳ ತಾಲೂಕಿನ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಅರೆಕಾಲಿಕ ನೌಕರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೃತದೇಹವು ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಲ್ಲೊಟ್ಟೆ ಪರಿಸರದ ನಿವಾಸಿ ಸತೀಶ್ ಮೃತ ವ್ಯಕ್ತಿ. ಇವರ ಮೃತದೇಹವು ಇಂದು ಮುಂಡ್ಲಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕಿಸಲಾಗಿದೆ. ಸ್ಥಳಕ್ಕೆ ವನ್ಯ ಜೀವಿ ವಿಭಾಗದ ಅಧಿಕಾರಿಗಳು ಹಾಗೂ ಅಜೆಕಾರು ಠಾಣೆಯ ಪೊಲೀಸರು ತೆರಳಿ ತನಿಖೆ ನಡೆಸುತ್ತಿದ್ದಾರೆ.
ನಾರಾಯಣ ಗುರುಗಳು ವಿಶ್ವ ಮಾನವರು, ಕೇವಲ ಹಿಂದುಳಿದ ವರ್ಗಕ್ಕೆ ಸೀಮಿತವಾಗಿರಲಿಲ್ಲ: ಪ್ರತಿಭಾ ಕುಳಾಯಿ
ನಾರಾಯಣ ಗುರುಗಳು ವಿಶ್ವ ಮಾನವರು, ಅವರು ಕೇವಲ ಹಿಂದುಳಿದ ವರ್ಗಕ್ಕೆ ಸೀಮಿತವಾಗಿರಲಿಲ್ಲ. ಅವರು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವಸಿದ್ಧಾಂತವನ್ನು ಜಗತ್ತಿಗೆ ಸಾರಿದ್ದರು ಎಂದು ಕುಳಾಯಿ ಫೌಂಡೇಶನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ ಹೇಳಿದರು. ಒಂದು ಕಾಲದಲ್ಲಿ ಹೀನಾಯ ಸ್ಥಿತಿಯಲ್ಲಿದ್ದ ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತಂದವರು ನಾರಾಯಣ ಗುರುಗಳು. ಇಂದು ಹಿಂದುಳಿದ ವರ್ಗದವರು ಎಂಎಲ್ ಎ, ಎಂಪಿ ಸ್ಥಾನದಲ್ಲಿದ್ದಾರೆ. ಆದರೆ, ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರಕಾರ ಅವಕಾಶ ನಿರಾಕರಿಸಿದಾಗ […]
ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್ ನಲ್ಲಿ ಆಫೀಸರ್ ಹುದ್ದೆ: ಇಂದೇ ಅರ್ಜಿ ಸಲ್ಲಿಸಿ
ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಎ (ಸೈಂಟಿಫಿಕ್ ಆಫೀಸರ್) ಪೋಸ್ಟ್ ಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ barc.gov.in ಗೆ ಭೇಟಿ ನೀಡಬಹುದು. ವಿದ್ಯಾರ್ಹತೆ: ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್ ನೇಮಕಾತಿ ಅಧಿಸೂಚನೆ ಪ್ರಕಾರ, ಗ್ರೂಪ್ ಎ (ಸೈಂಟಿಫಿಕ್ ಆಫೀಸರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್ನಿಂದ ಕಡ್ಡಾಯವಾಗಿ ಬಿಇ, ಬಿ.ಟೆಕ್, ಬಿಎಸ್ಸಿ ಪೂರ್ಣಗೊಳಿಸಿರಬೇಕು. ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳು- ಗರಿಷ್ಠ 26 ವರ್ಷ […]
ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ನೇಮಕಾತಿ ಪ್ರಕ್ರಿಯೆ : ಅವಧಿ ವಿಸ್ತರಣೆ
ಉಡುಪಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರಸಕ್ತ ಸಾಲಿನ ನೇಮಕಾತಿ ಪ್ರಕ್ರಿಯೆ ಅವಧಿಯನ್ನು ಜನವರಿ 27 ರ ವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾತಿ, ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವೃತ್ತಿಪರ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ […]