ಸದಸ್ಯತ್ವ ಅಭಿಯಾನದತ್ತ ಹೆಚ್ಚಿನ ಗಮನ ಹರಿಸಿ: ಸಹಕಾರ ಭಾರತೀ ಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಕರೆ

ಉಡುಪಿ: ದೇಶದಲ್ಲಿ ಸಹಕಾರ ಭಾರತೀಯ ದ್ಯೇಯೋದ್ದೇಶಗಳು ವ್ಯಾಪಕವಾಗಿ ಜಾಗ್ರತವಾಗಬೇಕಾದರೆ ಮತ್ತು ಸಹಕಾರಿ ರಂಗ ಮತ್ತಷ್ಟು ಪ್ರಬಲಗೊಳ್ಳಬೇಕಾದರೆ ಇದರ ಸದಸ್ಯರ ಪಾತ್ರ ಮಹತ್ವಪೂರ್ಣವಾಗಿದ್ದು ಸಹಕಾರಿ ಪ್ರಮುಖರು ಸದಸ್ಯತ್ವ ಅಭಿಯಾನವನ್ನು ನಡೆಸಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಹಕಾರಿ ಭಾರತಿ ಉಡುಪಿ ಜಿಲ್ಲಾ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಸಹಕಾರಿ ಪ್ರಮುಖರಿಗೆ ಕರೆ ನೀಡಿದರು. ಅವರು ಶುಕ್ರವಾರ ಉಡುಪಿ ತಾಲೂಕು ಸಹಕಾರ ಭಾರತೀಯ ಆಶ್ರಯದಲ್ಲಿ ಇಂಡಸ್ಟ್ರಿಯಲ್ ಕಾರ್ಪೊರೇಟರ್ ಸೊಸೈಟಿ ಕಿನ್ನಿಮುಲ್ಕಿ ಸಭಾಂಗಣದಲ್ಲಿ ಆಯೋಜಿಸಿದ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆಯನ್ನು ದೀಪ […]

ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಎರಡು ವರ್ಷಗಳಿಂದ ನಿತ್ಯ ಯಾಗ; ದೇಶದ ಸುಭಿಕ್ಷೆ ಸಮೃದ್ಧಿಗಾಗಿ ಋಗ್ವೇದ ಸಂಹಿತಾ ಯಾಗ

ಉಡುಪಿ ಜಿಲ್ಲೆಯ ಕಾಪು ಹೋಬಳಿ ವ್ಯಾಪ್ತಿಯ ಅಡ್ವೆ ಎಂಬ ಪುಟ್ಟ ಹಳ್ಳಿಯಲ್ಲಿ ವೇದ ವಿದ್ವಾಂಸರೊಬ್ಬರು ತಮ್ಮ ಮನೆಯಲ್ಲೇ ಕಳೆದೆರಡು ವರ್ಷಗಳಿಂದ ಯಾವ ಪ್ರಚಾರವೂ ಇಲ್ಲದೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ದೇಶಕ್ಕೆ ಕ್ಷೇಮ‌ ಸುಭಿಕ್ಷೆ ಸಮೃದ್ಧಿ ಶಾಂತಿಗಾಗಿ ಪ್ರಾರ್ಥಿಸಿ ಪ್ರತಿನಿತ್ಯ ಅತ್ಯಂತ ಶ್ರದ್ಧೆಯಿಂದ ಋಗ್ವೇದ ಸಂಹಿತಾ ಯಾಗವು ಶುಕ್ರವಾರ ಸಂಪನ್ನಗೊಂಡಿದೆ. ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ಈ ಯಾಗದ ಕರ್ತೃವಾಗಿದ್ದು ಈಗಾಗಲೇ ಬಾರಿ ಲೋಕದ ಒಳಿತಿಗಾಗಿ ಒಂಭತ್ತು ಬಾರಿ ಋಕ್ ಸಂಹಿತಾಯಾಗವನ್ನು ನಡೆಸಿದ್ದು ಈ ಬಾರಿ […]

ಉಡುಪಿ ವರ್ತಕರ ನಿರ್ಧಾರಕ್ಕೆ ಕಾಂಗ್ರೆಸ್ ‌ಮುಖಂಡರ ಬೆಂಬಲ

ಉಡುಪಿ: ನಿನ್ನೆ ಉಡುಪಿಯಲ್ಲಿ ವರ್ತಕರ ಸಂಘದ ಒಕ್ಕೂಟದವರು ಪತ್ರಿಕಾಗೋಷ್ಠಿ‌ ನಡೆಸಿ ಸರ್ಕಾರದ ಅವೈಜ್ಞಾನಿಕ ‌ವಾರಾಂತ್ಯ ಕರ್ಫ್ಯೂ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ ಇದೇ‌ ಬರುವ ಶನಿವಾರ ರವಿವಾರ ವ್ಯಾಪಾರ ಸ್ಥಗಿತ ಗೊಳಿಸುವುದಿಲ್ಲ ಎಂದಿದ್ದಾರೆ. ಈ‌ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾ ಪ್ರಕಟಣೆ ನೀಡಿದ ಕಾಂಗ್ರೆಸ್ ಮುಖಂಡರುಗಳಾದ ಅಮೃತ್ ಶೆಣೈ ,ಮಾಜಿ ಎಐಸಿಸಿ ಸದಸ್ಯರು ಹಾಗೂ ರಮೇಶ ಕಾಂಚನ್ ಉಡುಪಿ ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ವರ್ತಕರ ನಿರ್ಧಾರ ಸ್ವಾಗಿತಿಸಿದ್ದಾರೆ, ಹಲವಾರು ಮಳಿಗೆಗಳಿಗೆ ಶನಿವಾರ ರವಿವಾರ ಮಾತ್ರ ಅತಿ ಹೆಚ್ಚಿನ ವ್ಯಾಪಾರ […]

ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಸಂಭ್ರಮ

ಮಂಗಳೂರು: ಮಂಗಳೂರಿನಂತಹ ತೆಂಕು ತಿಟ್ಟಿನ ಯಕ್ಷ ಕ್ಷೇತ್ರದಲ್ಲಿ ಬಡಗಿನ ಯಕ್ಷಗಾನ ಅಭ್ಯಾಸಕ್ಕೆ ವೇದಿಕೆ ಒದಗಿಸುವ ಮೂಲಕ, ಮಂಗಳೂರಿನ ಯಕ್ಷಾಭಿನಯ ಬಳಗ ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನಾರ್ಹ ಎಂದು ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ ಹೇಳಿದರು. ಅವರು ಮಂಗಳೂರು ಪುರಭವನದಲ್ಲಿ ಇದೇ ಜನವರಿ 13ರಂದು ನಡೆದ ಯಕ್ಷಾಭಿನಯ ಬಳಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ವೈದ್ಯಾಧಿಕಾರಿ ಡಾ.ಅಣ್ಣಯ್ಯ ಕುಲಾಲ್, ಇಷ್ಟು ಜನ ಆಸಕ್ತರಿಗೆ ಯಕ್ಷಾಭ್ಯಾಸ ನೀಡುವ […]

ಅವಿಭಜಿತ ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಬಹಿಷ್ಕರಿಸಿ ವ್ಯಾಪಾರ; ಕೆನರಾ ಉದ್ಯಮಿಗಳ ಒಕ್ಕೂಟ ಘೋಷಣೆ

ಉಡುಪಿ: ರಾಜ್ಯ ಸರಕಾರ ಈ ವಾರದಿಂದ ವೀಕೆಂಡ್ ಕರ್ಫ್ಯೂ ಹಿಂಪಡೆಯದಿದ್ದರೆ ಸರಕಾರದ ಎಲ್ಲ ಆದೇಶಗಳನ್ನು ದಿಕ್ಕರಿಸಿ, ಕೇಸು, ಬಂಧನಕ್ಕೆ ಹೆದರದೆ ಶನಿವಾರ ಮತ್ತು ಭಾನುವಾರ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟು ವ್ಯಾಪಾರ ನಡೆಸಲಾಗುವುದು ಎಂದು ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳ ಒಟ್ಟು 40 ವರ್ತಕರ ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟ ತಿಳಿಸಿದೆ. ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಎಂ.ಜಿ ಹೆಗ್ಡೆ ಅವರು, ರಾಜ್ಯದಲ್ಲಿ ಅವೈಜ್ಞಾನಿಕ‌ ಹಾಗೂ ಅನೈತಿಕವಾದ ನೈಟ್ […]