ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಹುದ್ದೆಗಳ : ನೇರ ಸಂದರ್ಶನ

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ:  ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕದಲ್ಲಿ  ಖಾಲಿ ಇರುವ ಒಟ್ಟು 5 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಫೆಬ್ರವರಿ 2 ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು. ಹುದ್ದೆಗಳು: ಹಿರಿಯ ಸಂಶೋಧನಾ ಅಭ್ಯರ್ಥಿ ಮತ್ತು ಕಿರಿಯ ಸಂಶೋಧನಾ ಅಭ್ಯರ್ಥಿ ,ಕ್ಷೇತ್ರ ಸಹಾಯಕ ವೇತನ: ಹಿರಿಯ ಸಂಶೋಧನಾ ಅಭ್ಯರ್ಥಿ – ₹18,000, ಕಿರಿಯ ಸಂಶೋಧನಾ ಅಭ್ಯರ್ಥಿ  -₹16,000, ಕ್ಷೇತ್ರ ಸಹಾಯಕ – ₹ 12,000 ವಿದ್ಯಾರ್ಹತೆ: ಹಿರಿಯ ಸಂಶೋಧನಾ ಅಭ್ಯರ್ಥಿ – M.E ಅಥವಾ M.Tech ಕಿರಿಯ ಸಂಶೋಧನಾ ಅಭ್ಯರ್ಥಿ – B.E  ಅಥವಾ B.Tech […]

3882 ಹುದ್ದೆಗಳಿಗೆ ಅರ್ಜಿ ಆಹ್ವಾನ: ನೇರ ನೇಮಕಾತಿ

ನೌಕರರ ರಾಜ್ಯ ವಿಮಾ ನಿಗಮ: ನೌಕರರ ರಾಜ್ಯ ವಿಮಾ ನಿಗಮ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 3882 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 15 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇಲ್ದರ್ಜೆ ಕ್ಲರ್ಕ್​ ,ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಸ್ಟೆನೋಗ್ರಾಫರ್ ಪೋಸ್ಟ್‌ಗಳು ಖಾಲಿ ಇವೆ. 10ನೇ ಮತ್ತು 12ನೇ ತರಗತಿ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ  ಸಲ್ಲಿಸಬಹುದು. ನೇರ ನೇಮಕಾತಿ […]

ತುಳು ಕೊಡವ ಭಾಷೆಗಳ ಅಳಿವು ಉಳಿವು: ಪುಸ್ತಕ ಬಿಡುಗಡೆ 

ಉಡುಪಿ:ಪುಸ್ತಕ ಬಿಡುಗಡೆ ಸಮಾರಂಭ ಜನವರಿ ೨೪ ರಂದು ಜಗನ್ನಾಥ ಸಭಾಭವನ ಬಡಗುಬೆಟ್ಟು, ಸಭಾಭವನ ಕಟ್ಟಡ ಉಡುಪಿಯಲ್ಲಿ ಬೆಳ್ಳಗೆ ೧೧ ಗಂಟೆಗೆ ನಡೆಯಲಿದೆ.  ವಿಧಾನ ಪರಿಷತ್ ಸದಸ್ಯ, ಮಾಜಿ ಸಂಸದರು ಬಿ.ಕೆ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಮಾಜಿ ಎಐಸಿಸಿ ಸದಸ್ಯ ಅಮೃತ್ ಶಣೈ ಹೇಳಿದರು. ತುಳು ಭಾಷೆಯನ್ನು ೮ ನೆ ಪರಿಚ್ಛೇದ ಕ್ಕೆ ಸೇರಿಸಬೇಕು ಹಾಗೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂಬ ಹೊರಾಟವನ್ನು  ಅನೇಕರು ಬೇರೆ ಬೇರೆ […]

ನಂಚಾರು: 15 ಕೋಟಿ ರೂ ವೆಚ್ಚದಲ್ಲಿ ಗೋಶಾಲೆ ಲೋಕಾರ್ಪಣೆ

 ಉಡುಪಿ: ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಗೋಶಾಲೆ ನಿರ್ಮಿಸಿ, ಗೋಹತ್ಯೆ ನಿಲ್ಲುವಂತಾಗಬೇಕು.  ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ ತಾತ್ಕಲಿಕವಾಗಿ ಗೋ ಸಾಕಾಣೆಗೆ ಶೆಡ್ಡ್ ನಿರ್ಮಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ 250 ಗೋ ಸಾಕಾಣೆಗೆ ಸಾಧ್ಯವಾಗುವಷ್ಟು ಆಶ್ರಯತಾಣದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು  ಮತ್ತು  ನಂಚಾರು ಕಾಮಧೇನು ಗೋ ಶಾಲಾ ಮಹಾಸಂಘ ಟ್ರಸ್ಟ್ ನಂಚಾರು ಅಧ್ಯಕ್ಷ ರಾಜೇಂದ್ರ ಚಕ್ಕೇರ ಅವರು ತಿಳಿಸಿದರು.  ಶುಕ್ರವಾರ  ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನವರಿ 24 ರಂದು ಮೊದಲ ಹಂತದ ಗೋಶಾಲೆಯ ಲೋಕಾರ್ಪಣೆ […]

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು: ನೈಟ್ ಕರ್ಫ್ಯೂ, ಕಠಿಣ ನಿಯಮಗಳು ಮುಂದುವರಿಕೆ.. ಮದುವೆ, ಸಭೆ, ಸಮಾರಂಭಗಳಿಗೆ ಹಳೆ ರೂಲ್ಸ್ ಮುಂದುವರಿಕೆ..!!

ಬೆಂಗಳೂರು: ರಾಜ್ಯದಲ್ಲಿ ವಿಕೇಂಡ್ ಕರ್ಫ್ಯೂ ರದ್ದುಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ‌. ಅಧಿಕೃತ ಆದೇಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ‌. ವೀಕೆಂಡ್ ಕರ್ಫ್ಯೂಗೆ ವ್ಯಾಪಾರಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲು ನಿರ್ಧಾರಿಸಲಾಗಿದೆ. ನೈಟ್ ಕರ್ಫೂ ಅವಧಿಯಲ್ಲೂ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ರಾತ್ರಿ 10 ಗಂಟೆಯ ಬದಲಾಗಿ 11 ಗಂಟೆಯಿಂದ ಕರ್ಫ್ಯೂ […]