ಅಶ್ವಥ ಎಲೆಯಲ್ಲಿ ಕೃಷ್ಣಾಪುರ ಶ್ರೀಗಳ ಕಲಾಕೃತಿ ರಚಿಸಿ ಪರ್ಯಾಯಕ್ಕೆ ಶುಭಕೋರಿದ ಉಡುಪಿಯ ಯುವ ಕಲಾವಿದ
ಅಶ್ವಥ ಎಲೆಯಲ್ಲಿ ಉಡುಪಿಯ ಯುವ ಕಲಾವಿದರೊಬ್ಬರು ಭಾವೀ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಕಲಾಕೃತಿ ರಚಿಸಿ ಪರ್ಯಾಯ ಮಹೋತ್ಸವಕ್ಕೆ ವಿಶಿಷ್ಟ ರೀತಿಯಲ್ಲಿ ಶುಭಕೋರಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು exclusive ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆ ಗೊಂಡ ಉಡುಪಿಯ ಯುವ ಕಲಾವಿದ ಮಹೇಶ್ ಮರ್ಣೆ ಅವರು ಅಶ್ವಥ ಎಲೆಯಲ್ಲಿ ಶ್ರೀಗಳ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಮಹೇಶ್ ಅವರು ಈ ಹಿಂದೆಯೂ ಅನೇಕ ರಾಜಕೀಯ ನಾಯಕರು, ಸಾಧಕರು, ಸ್ವಾಮೀಜಿಗಳು ಹಾಗೂ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು […]
ಇಂದು ಪರ್ಯಾಯ ಶ್ರೀ ಅದಮಾರು ಮಠಾಧೀಶರಿಗೆ ನಾಗರಿಕ ಅಭಿವಂದನಾ ಸಮಾರಂಭ
ಉಡುಪಿ ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ವತಿಯಿಂದ ಜನವರಿ 17ರ ಸೋಮವಾರ ಸಂಜೆ 6.30 ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ನಾಗರಿಕ ಅಭಿವಂದನಾ ಕಾರ್ಯಕ್ರಮ ನಡೆಯಲಿದೆ . ಭಾವೀ ಪರ್ಯಾಯ ಶ್ರೀ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಪ್ರಸಿದ್ಧ ವಿದ್ವಾಂಸ ಕೃಷ್ಣರಾಜ ಕುತ್ಪಾಡಿ ಅಭಿವಂದನಾ ಭಾಷಣ ಮಾಡಲಿರುವರು. ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷ […]
ಉಡುಪಿ ಕೃಷ್ಣಾಪುರ ಪರ್ಯಾಯಕ್ಕೆ ಕುಂಜಾರುಗಿರಿಯ ಗಿರಿಬಳಗ ಮತ್ತು ಗಿರಿಭಗಿನಿಯರ ಬಳಗದಿಂದ ಹೊರಕಾಣಿಕೆ ಸಮರ್ಪಣೆ
ಉಡುಪಿ: ಶ್ರೀಕೃಷ್ಣಾಪುರ ಪರ್ಯಾಯಕ್ಕೆ ಕುಂಜಾರುಗಿರಿಯ ಗಿರಿಬಳಗ ಮತ್ತು ಗಿರಿಭಗಿನಿಯರ ವತಿಯಿಂದ ಭಾನುವಾರ ಹೊರಕಾಣಿಕೆ ಸಮರ್ಪಿಸಲಾಯಿತು.800 ಕಿಲೋ ಅಕ್ಕಿ, 650 ತೆಂಗಿನ ಕಾಯಿ,35 ಕಿಲೋ ಬೆಲ್ಲ, 25 ಕಿಲೋ ಸಕ್ಕರೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಿರಿಬಳಗದ ಅಧ್ಯಕ್ಷರಾದ ಪುಂಡರೀಕಾಕ್ಷ ಭಟ್, ಕಾರ್ಯದರ್ಶಿ ಶ್ರೀಶ ಕಾರಂತ, ಹಿರಿಯರಾದ ರಾಜಮೂರ್ತಿ ಭಟ್,ಪುಂಡರೀಕಾಕ್ಷ ಆಚಾರ್ಯ,ಬಳಗದ ಸದಸ್ಯರು,ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣು ಪ್ರಸಾದ್ ಪಾಡಿಗಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೋಕಳ್ಳರನ್ನು ಗಡಿಪಾರು ಮಾಡುವಂತೆ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹ
ಉಡುಪಿ: ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೂ ಕೂಡಾ ವಿವಿಧ ವಿನೂತನ ಜಾಲಗಳ ಮೂಲಕ ಜನರ ಹಾಗೂ ಪೊಲೀಸರ ಕಣ್ಣಿಗೆ ಮಣ್ಣೆರಚಿ ಉಡುಪಿ ಜಿಲ್ಲೆಯಾದ್ಯಂತ ಗೋಕಳ್ಳತನ, ಅಕ್ರಮ ಗೋಸಾಗಾಟ, ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿರುವುದು ಖಂಡನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ. ಇದೇ ರೀತಿ ಆಕ್ರಮ ಗೋಕಳವು, ಗೋಹತ್ಯೆ ಮುಂದುವರಿದರೆ ಸಮಾಜದಲ್ಲಿ ಶಾಂತಿ ಭಂಗವಾಗುವ ಎಲ್ಲಾ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಲ್ಲಾ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸುವ ಮೂಲಕ ಶಂಕಿತರ ಪೂರ್ವಾಪರ […]