ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಗೆ ‘ವಿಶ್ವಪ್ರಭಾ’ ಪುರಸ್ಕಾರ

ಉಡುಪಿ: ಕನ್ನಡ, ನಾಡು-ನುಡಿ, ಸಂಸ್ಕೃತಿಗೆ ಅನನ್ಯ ಸೇವೆ ಸಲ್ಲಿಸಿರುವ ಕಲಾವಿದರಿಗೆ ಉಡುಪಿ ವಿಶ್ವನಾಥ ಶೆಣೈ ಹಾಗೂ ಪ್ರಭಾವತಿ ವಿಶ್ವನಾಥ ಶೆಣೈ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಪ್ರದಾನ ಮಾಡುತ್ತಿರುವ ‘ವಿಶ್ವಪ್ರಭಾ ಪುರಸ್ಕಾರ’ಕ್ಕೆ ಈ ವರ್ಷ ಚಲನಚಿತ್ರ ನಿರ್ದೇಶಕ *ಗಿರೀಶ್ ಕಾಸರವಳ್ಳಿ ಪಾತ್ರರಾಗಿದ್ದಾರೆ. ಕನ್ನಡ ಸಿನಿಮಾ ಜಗತ್ತಿನಲ್ಲಿ ಈಗಾಗಲೇ 15 ಚಲನಚಿತ್ರಗಳನ್ನು ನಿರ್ದೇಶಿಸಿರುವ ಕಾಸರವಳ್ಳಿಯವರು ತಮ್ಮ ಅಷ್ಟೂ ಚಲನಚಿತ್ರಗಳಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. 16 ಬಾರಿ ರಾಷ್ಟ್ರಪತಿಯವರಿಂದ ‘ಕಮಲ ಪತ್ರ’ ಪ್ರಶಸ್ತಿಯನ್ನು ಪಡೆದಿರುವ ಇವರು, […]

ಹೆಬ್ರಿ: ಮರಕ್ಕೆ ಡಿಕ್ಕಿ ಹೊಡೆದ ಕಾರು; ಚಾಲಕ ಸಹಿತ ಐವರಿಗೆ ಗಂಭೀರ ಗಾಯ

ಹೆಬ್ರಿ: ಚಾಲಕ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾದ ಘಟನೆ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಬ್ಯಾಣ ಎಂಬಲ್ಲಿ ಬುಧವಾರ ನಡೆದಿದೆ. ಅಪಘಾತದಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರು ಶೃಂಗೇರಿ ಮೂಲದವರು ಎಂದು ತಿಳಿದುಬಂದಿದೆ. ಚಾಲಕ ಸಹಿತ ಐವರು ಎರ್ಟಿಗಾ ಕಾರಿನಲ್ಲಿ ಆಗುಂಬೆ ಘಾಟಿಯಿಂದ ಉಡುಪಿ ಕಡೆಗೆ ಬರುತ್ತಿದ್ದರು. ಹೆಬ್ರಿಯ ಶಿವಪುರದ ಸಮೀಪದ ಬ್ಯಾಣ ತಲುಪಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಚಾಲಕ […]

ಕೊಲ್ಲೂರು: ಬಸ್ ಉರುಳಿ 20ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಬೈಂದೂರು: ಚಾಲಕನ ನಿಯಂತ್ರಣ ತಪ್ಪಿ 42 ಮಂದಿ ಯಾತ್ರಾರ್ಥಿಗಳಿದ್ದ ಬಸ್ ವೊಂದು ಉರುಳಿ ಬಿದ್ದ ಘಟನೆ ಬೈಂದೂರು ತಾಲೂಕಿನ ಕೊಲ್ಲೂರಿನ ಸಮೀಪ ಮಂಗಳವಾರ ಸಂಜೆ ನಡೆದಿದೆ. ಕೋಲಾರ ಜಿಲ್ಲೆಯಿಂದ ಯಾತ್ರಾರ್ಥಿಗಳು ಬಸ್ ನಲ್ಲಿ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಕೊಲ್ಲೂರು ಗ್ರಾಮದ ಸಮೀಪ ಎನ್‌ಎಚ್‌ 76 ರಸ್ತೆಯ ಒಣ್ಕಣ್ ಮೋರಿ ತಿರುವಿನಲ್ಲಿ ನಿನ್ನೆ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಇದರ ಪರಿಣಾಮ ಬಸ್ ರಸ್ತೆಯ ಎಡಬದಿಗೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ 20ಕ್ಕೂ ಅಧಿಕ […]

ಉಡುಪಿ: ಇನ್ನೋವಾ ಕಾರಿಗೆ ಮದುವೆ ದಿಬ್ಬಣದ ಅಲಂಕಾರ ಮಾಡಿ ಅಕ್ರಮ ಗೋಸಾಗಾಟ; ಹಿಂದೂ ಸಂಘಟನೆಯ ಕಾರ್ಯಕರ್ತರಿಂದ 10 ಗೋವುಗಳ ರಕ್ಷಣೆ

ಉಡುಪಿ: ಇನ್ನೋವ ಕಾರಿಗೆ ಮದುವೆ ದಿಬ್ಬಣದ ಅಲಂಕಾರ ಮಾಡಿ ಹಿಂಸಾತ್ಮಕವಾಗಿ ಗೋವುಗಳನ್ನು ತುಂಬಿಸಿಕೊಂಡು  ಸಾಗಾಟ ಮಾಡುತ್ತಿದ್ದ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿ 10 ಗೋವುಗಳನ್ನು ರಕ್ಷಣೆ ಮಾಡಿರುವ  ಕಾಪು ತಾಲೂಕಿನ ಶಿರ್ವದಲ್ಲಿ ಬುಧವಾರ ನಸುಕಿನ ವೇಳೆ ನಡೆದಿದೆ. ಮಂಗಳವಾರ ತಡರಾತ್ರಿ ಪೆರ್ಡೂರಿನಿಂದ ಮಂಗಳೂರಿಗೆ ಇನ್ನೋವಾ ಹಾಗೂ ಪಿಕಪ್ ವಾಹನದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಕಾರ್ಯಾಚರಣೆಗೆ ಇಳಿದ ಹಿಂದು ಸಂಘಟನೆಯ ಕಾರ್ಯಕರ್ತರು ವಾಹನಗಳನ್ನು ಹಿಂಬಾಲಿಸಿಕೊಂಡು ಹೋಗಿ ಶಿರ್ವದ ಬಳಿ ತಡೆದಿದ್ದಾರೆ. […]

ಕಟ್ಟಡ ಕಾರ್ಮಿಕರಿಗೆ ಪ್ರತಿರಕ್ಷಣಾ ಕಿಟ್ ವಿತರಣೆ

ಉಡುಪಿ: ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ವತಿಯಿಂದ, ಕಟ್ಟಡ ಕಾರ್ಮಿಕರ ಪ್ರತಿರೋದಕ ವ್ಯವಸ್ಥೆಯನ್ನು ಉತ್ತಮ ಪಡಿಸುವ ಸಲುವಾಗಿ ಪ್ರತಿರಕ್ಷಣಾ ಕಿಟ್‌ಗಳನ್ನು ವಿತರಿಸಲು ಜಿಲ್ಲಾ ಕಾರ್ಮಿಕ ಇಲಾಖೆ ಕಛೇರಿಗೆ ಒದಗಿಸಿದೆ. ಕಿಟ್‌ಗಳನ್ನು 30 ವರ್ಷ ಮೀರಿದ ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ತಮ್ಮ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿಯನ್ನು ಪ್ರತಿ ಸೋಮವಾರದಂದು ಸಂಪರ್ಕಿಸಿ, ನೋಂದಣಿ ಪತ್ರ ಹಾಗೂ ಆಧಾರ್ ಕಾರ್ಡ್ ಪ್ರತಿ ಹಾಜರುಪಡಿಸಿ ಕಿಟ್‌ಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.