ಉಡುಪಿ ಜಿಲ್ಲೆಯಲ್ಲಿ ಇಂದು 361 ಮಂದಿಗೆ ಕೋವಿಡ್ ಪಾಸಿಟಿವ್

ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣ ಬುಧವಾರ 361ಕ್ಕೆ ಜಿಗಿದಿದೆ. ಆ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ1625 ಏರಿಕೆಯಾಗಿದೆ. ಇಂದು 78 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಪಾಸಿಟಿವ್ ಬಂದ 361 ಮಂದಿಯಲ್ಲಿ 178 ಮಂದಿ ಪುರುಷರಾಗಿದ್ದು, 183 ಮಂದಿ ಮಹಿಳೆಯರು. ಉಡುಪಿ ತಾಲೂಕಿನ 281, ಕುಂದಾಪುರ ತಾಲೂಕಿನ 26 ಹಾಗೂ ಕಾರ್ಕಳ ತಾಲೂಕಿನ 54 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂರು ತಾಲೂಕುಗಳ ಪಾಸಿಟಿವಿಟಿ ಪ್ರಮಾಣ ಸದ್ಯ ಶೇ.7.41, ಶೇ.2 […]
ಸಾರ್ವಕರ್ ವ್ಯಕ್ತಿತ್ವ ದಮನಿಸಲು ಒಂದು ವರ್ಗ ಇಂದಿಗೂ ಪ್ರಯತ್ನಿಸುತ್ತಿದೆ; ನಗರದಲ್ಲಿ ಸಾತ್ಯಕಿ ಸಾವರ್ಕರ್

ಉಡುಪಿ: ಸಾರ್ವಕರ್ ಅವರ ಚಿಂತನೆ, ವ್ಯಕ್ತಿತ್ವವನ್ನು ದಮನಿಸಲು ಒಂದು ವರ್ಗ ಇಂದಿಗೂ ಪ್ರಯತ್ನಿಸುತ್ತಿದೆ. ಆದರೆ, ಅವರ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ ಎಂದು ಸಾವರ್ಕರ್ ಅವರ ಮೊಮ್ಮಗನು ಆಗಿರುವ ಮೃತ್ಯುಂಜಯ ಪ್ರಕಾಶನದ ಮುಖ್ಯಸ್ಥ ಸಾತ್ಯಕಿ ಸಾವರ್ಕರ್ ಅಭಿಪ್ರಾಯಪಟ್ಟರು. ಸ್ವಾಮಿ ವಿವೇಕಾನಂದರ ಜನ್ಮವರ್ಷದ ಪ್ರಯುಕ್ತ ಕುರ್ಮಾ ಬಳಗ ವತಿಯಿಂದ ಉಡುಪಿಯ ಪುರಭವನದಲ್ಲಿ ಬುಧವಾರ ಆಯೋಜಿಸಿದ್ದ ಜಯೋಸ್ತುತೇ’ ಸಾರ್ವಕರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ವಿಶ್ವಗುರು ಹಿಂದೂಸ್ಥಾನದ ಕನಸನ್ನು ನನಸು ಮಾಡಲು ಸಾರ್ವಕರ್ ತನ್ನ 12ನೇ ವಯಸ್ಸಿನಲ್ಲಿಯೇ […]
ಯಕ್ಷಾರಾಧಕ ಕೆ. ಎಸ್. ಮಂಜುನಾಥ್ ಎನ್ನುವ ಕಲಾಸುಮದ ಕತೆ..

ವೃತ್ತಿ ನಿರತರಿಗೆ ಪ್ರವೃತ್ತಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳವುದು ಕಷ್ಟ ಸಾಧ್ಯ. ಪ್ರವೃತ್ತಿಗಳತ್ತ ಮನಸ್ಸು ತುಡಿಯುತ್ತಿದ್ದರೂ ಮಾಡುವ ವೃತ್ತಿಗೆ ಸಂಪೂರ್ಣ ನ್ಯಾಯ ಸಲ್ಲಿಸಬೇಕಾಗುತ್ತದೆ. ವೃತ್ತಿ ಉದರ ಪೋಷಣೆಯ ಮೂಲ. ಪ್ರವೃತ್ತಿ ಮಾನಸಿಕ ಉಲ್ಲಾಸ, ಉತ್ಸಾಹಗಳ ಸೆಲೆ. ಈ ಸೆಲೆಯ ನೆಲೆಯನ್ನು ಕಲಾತ್ಮಕವಾಗಿ ಬೆಳೆಸಿ, ಉಳಿಸಿಕೊಳ್ಳಲು ದೈಹಿಕವಾಗಿ, ಮಾನಸಿಕವಾಗಿ ನಿತ್ಯ ನಿರಂತರ ಶ್ರಮಿಸಬೇಕಾಗುತ್ತದೆ. ವಿಧಿಯಿತ್ತ ತನ್ನ ಪಾಲಿನ ಬದಕುನ್ನು ಹಸನಾಗಿ, ಸೊಗಸಾಗಿ, ತಂಪಾಗಿ ಕಂಪಬೀರುತ್ತ ಬಾಳಬೇಕು. ಅದರೊಂದಿಗೆ ತನ್ನ ಬೊಗಸೆಗೆ ದಕ್ಕುವಷ್ಟು ತನ್ನ ಸುತ್ತ ಮುತ್ತಣದ ಪ್ರಕೃತಿ, ಜೀವಜಗತ್ತು, […]
ಕೊರಗರ ಮೇಲಿನ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ನಿಂದ ಪ್ರತಿಭಟನಾ ಪಾದಯಾತ್ರೆ

ಉಡುಪಿ: ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುನಲ್ಲಿ ನಡೆದ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರ ದೌರ್ಜನ್ಯ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬುಧವಾರ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿಯ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಪಾದಯಾತ್ರೆ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಪಾದಯಾತ್ರೆ ಮೆರವಣಿಗೆಯು ಅಂತ್ಯಗೊಂಡ ಬಳಿಕ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರಿಗೆ ಮನವಿ ಸಲ್ಲಿಸಿ, ನ್ಯಾಯಯುತವಾದ ತನಿಖೆ ನಡೆಸಿ ಕೊರಗ ಸಮುದಾಯದ ಮನೆಯವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಲಾಯಿತು. ಈ ಪ್ರತಿಭಟನಾ ಪಾದಯಾತ್ರೆ ಮೆರವಣಿಗೆಯಲ್ಲಿ ಮಾಜಿ ಸಚಿವರಾದ ವಿನಯ್ […]
ಕೊಲ್ಲೂರು: ಶಾಪಿಂಗ್ ಹೋದ ಯುವತಿ ನಾಪತ್ತೆ

ಬೈಂದೂರು: ಶಾಪಿಂಗ್ ಗೆಂದು ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕಿರಿಮಂಜೇಶ್ವರದಲ್ಲಿ ನಡೆದಿದೆ. ಕಿರಿಮಂಜೇಶ್ವರ ಗ್ರಾಮದ ಆದ್ರಗೋಳಿ ನಿವಾಸಿ 21 ವರ್ಷದ ರಮ್ಯಾ ನಾಪತ್ತೆಯಾದ ಯುವತಿ. ಈಕೆ ಜ.10ರಂದು ಬೆಳಿಗ್ಗೆ 10.30ರ ವೇಳೆಗೆ ತಾನು ಕುಂದಾಪುರಕ್ಕೆ ಹೋಗಿ ಬಟ್ಟೆಗಳನ್ನು ಖರೀದಿ ಮಾಡಿಕೊಂಡು ಬರುವುದಾಗಿ ಹೇಳಿ ಹೋದವಳು, ಈವರೆಗೂ ಮನೆಗೆ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ […]