ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ‌ ಅವಘಡ: ತಪ್ಪಿದ ಭಾರೀ‌ ದುರಂತ

ಉಡುಪಿ: ಮಣಿಪಾಲದ ರಾಜೀವನಗರ-ಪ್ರಗತಿನಗರಕ್ಕೆ ಹೋಗುವ ರಸ್ತೆಯ ಬದಿಯ ಹುಲ್ಲುಗಾವಲಿಗೆ ಸೋಮವಾರ ರಾತ್ರಿ ಬೆಂಕಿ ಬಿದ್ದಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.   80 ಬಡಗಬೆಟ್ಟು ಗ್ರಾಮದ ರಾಜೀವನಗರದ ಮೀಸಲು ಅರಣ್ಯದ ಹುಲ್ಲುಗಾವಲಿಗೆ ಯಾರೋ‌ ಕಿಡಿಗೇಡಿಗಳು ಬೆಂಕಿಹಾಕಿದ್ದು, ಬೆಂಕಿಯೂ ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ವ್ಯಾಪಿಸಿದೆ. ನೋಡು ನೋಡುತ್ತಿದ್ದಂತೆ ಸುತ್ತಲಿನ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ.‌ ಆಕೇಶಿಯ ಕಾಡಿಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಬೆಂಕಿಯ ರುದ್ರನರ್ತಕ್ಕೆ ಕೆಲವೊಂದು ಆಕೇಶಿಯ ಮರಗಳು ಆಹುತಿಯಾಗಿವೆ. ಗಾಳಿಯ ರಭಸಕ್ಕೆ ವೇಗ ಪಡೆದುಕೊಂಡ ಬೆಂಕಿ, ಸಮೀಪವೇ […]

ಯಕ್ಷಾಭಿನಯ ಬಳಗದಿಂದ ಯಕ್ಷಗಾನ ಪ್ರದರ್ಶನ

ಮಂಗಳೂರು: ಮಂಗಳೂರಿನಲ್ಲಿರುವ ಬಡಗು ತಿಟ್ಟು ಯಕ್ಷಗಾನ ಆಸಕ್ತರು ಹುಟ್ಟುಹಾಕಿದ ‘ಯಕ್ಷಾಭಿನಯ ಬಳಗ’ದ ಎರಡನೆಯ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಪ್ರದರ್ಶನ ವಾರಾಂತ್ಯದ ಲಾಕ್ಡೌನ್ ಕಾರಣದಿಂದ ಮುಂದೂಡಿದ್ದು, ಇದೇ ಬರುವ ಜನವರಿ 13ಕ್ಕೆ ಮಂಗಳೂರಿನ ಪುರಭವನದಲ್ಲಿ ಮರುನಿಗದಿಗೊಂಡಿದೆ.   ಅಂದು ಅಪರಾಹ್ನ 2.30 ಕ್ಕೆ  ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಗುರು ಐರೋಡಿ ಮಂಜುನಾಥ ಕುಲಾಲ್ ನಿರ್ದೇಶನದಲ್ಲಿ ಸಂಸ್ಥೆಯ ಶಿಕ್ಷಣಾರ್ಥಿ ಸದಸ್ಯರಿಂದ ಅಭಿಮನ್ಯು ಕಾಳಗ ಮತ್ತು ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.   ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸಾದ್ […]

ಉಡುಪಿ: ಸೋಂಕು ಪತ್ತೆಯಾದರೆ ಮನೆ ಸೀಲ್ ಡೌನ್; ತಾಲೂಕುವಾರು ಕೋವಿಡ್ ಕೇರ್ ಸೆಂಟರ್ ನಿರ್ಮಾಣ; ಸಚಿವ ಸುನಿಲ್ ಕುಮಾರ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವ ಉದ್ದೇಶದಿಂದ ತಾಲೂಕುವಾರು ಕೋವಿಡ್ ಕೇರ್ ಸೆಂಟರ್ ಸಿದ್ಧಪಡಿಸಿಕೊಂಡು, ಅಲ್ಲಿಗೆ ಸೋಂಕಿತರನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ. ಅಲ್ಲದೆ, ಸೋಂಕಿತರ ಮನೆ ಸೀಲ್‌ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಸೋಮವಾರ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ 979 ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ 61 ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. […]