ಜಿಲ್ಲೆಯಲ್ಲಿ ಜ.10 ರಿಂದ ಕೋವಿಡ್-19 ಮುನ್ನೆಚ್ಚರಿಕಾ ಡೋಸ್: ಜಿಲ್ಲಾಧಿಕಾರಿ
ಉಡುಪಿ: ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಜನವರಿ 10 ರಿಂದ ಕೋವಿಡ್ -19 ಮುನ್ನೆಚ್ಚರಿಕಾ ಡೋಸ್ ನೀಡಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ತಿಳಿಸಿದರು. ಅವರು ಇಂದು ವರ್ಚುವಲ್ ಸಭೆಯ ಮೂಲಕ, ಕೋವಿಡ್ 19 ಮುನ್ನೆಚ್ಚರಿಕಾ ಡೋಸ್ ನೀಡಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು. […]
ಉಡುಪಿ: ಹೋಟೆಲ್ ಕಾರ್ಮಿಕನಿಂದ ಮಾಲೀಕರ ಸ್ಕೂಟರ್ ಕಳವು
ಉಡುಪಿ: ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಮಾಲೀಕರ ದ್ವಿಚಕ್ರ ವಾಹನವನ್ನೇ ಕಳವು ಮಾಡಿಕೊಂಡು ಹೋಗಿರುವ ಘಟನೆ ಉಡುಪಿಯ ವೇದಾಂತ್ ವೆಜ್ ಹೋಟೆಲ್ ನಲ್ಲಿ ನಡೆದಿದೆ. ಮಣಿಪಾಲ ಶಾಂತಿನಗರ ನಿವಾಸಿ ಸಂತೋಷ ದ್ವಿಚಕ್ರ ವಾಹನ ಕಳೆದುಕೊಂಡ ವ್ಯಕ್ತಿ. ಇವರು ಉಡುಪಿಯಲ್ಲಿ ವೇದಾಂತ್ ಹೋಟೆಲ್ ನಡೆಸುತ್ತಿದ್ದಾರೆ. ಜ. 3ರಂದು ವೇದಾಂತ್ ಹೋಟೆಲ್ ಗೆ ಆರೋಪಿ ಶ್ರೀಧರ ಬೈಂದೂರು ಕೆಲಸ ಕೇಳಿಕೊಂಡು ಬಂದಿದ್ದು, ಬಳಿಕ ಕೆಲಸಕ್ಕೆ ಸೇರಿದ್ದನು. ಜ.5ರಂದು ಸಂಜೆ 4ಗಂಟೆಗೆ ಹೋಟೇಲ್‌ನ ಡ್ರಾವರ್‌ನಲ್ಲಿಟ್ಟಿದ್ದ ಪಿರ್ಯಾದಿದಾರರ ದ್ವಿಚಕ್ರ ವಾಹನದ ಕೀಯನ್ನು […]
ಪಂಚರಾಜ್ಯ ಚುಣಾವಣೆಗೆ ದಿನಾಂಕ ಘೋಷಣೆ: ಫೆ.10ರಿಂದ 7 ಹಂತಗಳಲ್ಲಿ ಮತದಾನ
ಕೇಂದ್ರ ಚುನಾವಣಾ ಆಯೋಗ ಪಂಚರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯೂ 7 ಹಂತಗಳಲ್ಲಿ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದಲ್ಲಿ ಫೆಬ್ರುವರಿ 14 ರಂದು ಮತ್ತು ಮಣಿಪುರದಲ್ಲಿ ಫೆಬ್ರುವರಿ 27 ಮತ್ತು 3 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ. […]
ಜ.10: ಸಮಾಜ ಕಲ್ಯಾಣ ಇಲಾಖೆ ಸಚಿವರ ಪ್ರವಾಸ ಕಾರ್ಯಕ್ರಮ
ಉಡುಪಿ: ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಜನವರಿ 10 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು 7.30 ರಿಂದ 9 ಗಂಟೆಯ ವರೆಗೆ ಕೋಟದ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ, 10 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಸ್.ಸಿ.ಎಸ್.ಪಿ. ಟಿ.ಎಸ್.ಪಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ, ಮ. 12 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೋವಿ ಜನಾಂಗದ […]
ನೊಂದ ಮಹಿಳೆಯರು ಉಚಿತ ಸಹಾಯವಾಣಿ ಸಂಖ್ಯೆ 181 ಸಂಪರ್ಕಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
ಉಡುಪಿ: ವಿವಿಧ ಕಾರಣಗಳಿಂದ ನೊಂದ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ 24*7 ಕಾರ್ಯನಿರ್ವಹಿಸುವ ಉಚಿತ ದೂರವಾಣಿ ಸಂಖ್ಯೆ 181 ನ್ನು ಸಂಪರ್ಕಿಸಿ ತಮ್ಮ ದೂರುಗಳು ಸಲ್ಲಿಸಿ, ಅಗತ್ಯ ನೆರವು ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ನೊಂದ ಮಹಿಳೆಯರ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಖಿ ಒನ್ ಸ್ಟಾಪ್ ಸೆಂಟರ್ ಮತ್ತು […]