ಉಡುಪಿ: ಡಿ.28ರಿಂದ ಜಿಲ್ಲೆಯಲ್ಲಿ ನೈಟ್‌ಕರ್ಫ್ಯೂ ಜಾರಿ; ಸಾರ್ವಜನಿಕರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ

ಉಡುಪಿ: ಓಮಿಕ್ರಾನ್ ನಿಯಂತ್ರಣ ಕುರಿತಂತೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನೈಟ್‌ಕರ್ಫ್ಯೂ ಮತ್ತು ಹೊಸ ವರ್ಷಾಚರಣೆ ಕುರಿತ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಆನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಾದ್ಯಂತ ಡಿಸೆಂಬರ್ 28 ರಿಂದ ಜನವರಿ 7 ರ ವರಗೆ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್‌ಕರ್ಫ್ಯೂ ಜಾರಿಗೊಳಿಸಲಾಗುತ್ತಿದ್ದು, ಈ ಅವಧಿಯಲ್ಲಿ ಅಗತ್ಯ ಚಟುವಟಿಕೆ ಹೊರತುಪಡಿಸಿ ಸಾರ್ವಜನಿಕರ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವೈದ್ಯಕೀಯ […]
ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ “ಮೂಡು – ಪಡು” ಜೋಡುಕರೆ ಅರಸು ಕಂಬಳ ಕೂಟದ ಫಲಿತಾಂಶ ಪ್ರಕಟ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 06 ಜೊತೆ ಅಡ್ಡಹಲಗೆ: 07 ಜೊತೆ ಹಗ್ಗ ಹಿರಿಯ: 13 ಜೊತೆ ನೇಗಿಲು ಹಿರಿಯ: 27 ಜೊತೆ ಹಗ್ಗ ಕಿರಿಯ: 14 ಜೊತೆ ನೇಗಿಲು ಕಿರಿಯ: 70 ಜೊತೆ ಒಟ್ಟು ಕೋಣಗಳ ಸಂಖ್ಯೆ: 141 ಜೊತೆ •••••••••••••••••••••••••••••••••••••••••••••• ಕನೆಹಲಗೆ: ಪ್ರಥಮ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ •••••••••••••••••••••••••••••••••••••••••••••• ಅಡ್ಡ […]
ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭ; ಸಾಧಕರಿಗೆ ಸನ್ಮಾನ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ, ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾದ ಡಾ.ಟಿ.ಎಸ್.ರಮೇಶ್, ಶ್ರೀಮಠದ ಕಲಾಸಂಘಟಕರಾದ ಪ್ರಾದೇಶ ಆಚಾರ್ಯ, ಖ್ಯಾತ ಯಕ್ಷಗಾನ ಕಲಾವಿದರಾದ ವಾಸುದೇವ ರಂಗಾ ಭಟ್ಟ, ವಿದ್ವಾಂಸರಾದ ಹೆರ್ಗ ವಿದ್ವಾನ್ ರವೀಂದ್ರ ಭಟ್,ಖ್ಯಾತ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಶ್ರೀಮಠದ ಕಾಲ ಸಲಹೆಗಾರರಾದ ಪುರುಷೋತ್ತಮ ಅಡ್ವೆ ಅವರನ್ನು ಸನ್ಮಾನಿಸಿ ಅನುಗ್ರಹ ಸಂದೇಶ ನೀಡಿದರು. […]
ಕೊಡವೂರು: ಶಿವಾಜಿ ಪಾರ್ಕ್ ಗೆ ತಗಡು ಚಪ್ಪರ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ

ಕೊಡವೂರು: ಜನರ ಸಮಸ್ಯೆ ಅರಿತುಕೊಂಡು ಅವರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಬೇಕು. ಆ ನಿಟ್ಟಿನಲ್ಲಿ ಕೊಡವೂಡು ವಾರ್ಡ್ ಮಾದರಿಯಾಗಿದೆ. ಹಾಗೆ, ದಾನಿಗಳಿಂದ ಹಣ ಸಂಗ್ರಹಿಸಿ ಅನೇಕರ ಕಷ್ಟಕ್ಕೆ ಸ್ಪಂದಿಸುವ ಸಂಘ-ಸಂಸ್ಥೆಗಳು ನಮ್ಮ ಕೊಡುವೂರು ವಾರ್ಡಿನಲ್ಲಿ ಇರುವುದು ಹೆಮ್ಮೆಯ ವಿಚಾರ ಎಂದು ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ ಕೊಡವೂರು ತಿಳಿಸಿದರು. ಕೊಡವೂರಿನಲ್ಲಿ ನಿರ್ಮಾಣ ಆಗಲಿರುವ ಶಿವಾಜಿ ಪಾರ್ಕ್ ಗೆ ತಗಡು ಚಪ್ಪರ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕೊಡವೂರಿನಲ್ಲಿ 28 ಸಂಘ ಸಂಸ್ಥೆಗಳಿವೆ. ಅವುಗಳು […]
ಹಿರಿಯಂಗಡಿ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಅವಧೂತ ವಿನಯ್ ಗುರೂಜಿ ಭೇಟಿ

ಕಾರ್ಕಳ: ಶಿವಾಜಿ ಕೇವಲ ಮರಾಠಾ ದೊರೆ ಅಲ್ಲ. ಆತ ಹಿಂದವೀ ಸಾಮ್ರಾಜ್ಯವನ್ನು ಕಟ್ಟಿದವನು. ಅದಕ್ಕೆ ಅವನು ಆರಿಸಿಕೊಂಡ ದಾರಿ ಕ್ಷಾತ್ರವಾದದ್ದು. ಭಾರತದ ಅತೀ ದೊಡ್ಡ ಮತ್ತು ಮೊದಲ ಶಸ್ತ್ರಸಜ್ಜಿತ ಕ್ರಾಂತಿಗೆ ಕಾರಣ ಆದವನು ಶಿವಾಜಿ. ಆದ್ದರಿಂದ ಕ್ಷಾತ್ರ ತೇಜಸ್ಸು ಮರಾಠರಿಗೆ ರಕ್ತದಲ್ಲಿ ಬಂದಿದೆ. ಕಾರ್ಕಳದ ಕೇಂದ್ರ ಭಾಗದಲ್ಲಿ ಇರುವ ಮರಾಠಾ ಕ್ಷತ್ರಿಯರ ಶ್ರದ್ಧಾ ಕೇಂದ್ರವಾದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯವು ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶದ ಹೊಸ್ತಿಲಲ್ಲಿ ಬಂದು ನಿಂತಿರುವುದು ಅದೇ ಕ್ಷಾತ್ರ ತೇಜಸ್ಸಿನ ಶಕ್ತಿಯಿಂದ. ದೇವಳದ […]