ಉಡುಪಿ: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಉಡುಪಿ: ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪರ್ಕಳ ದೇವಿನಗರದಲ್ಲಿ ಭಾನುವಾರ ನಡೆದಿದೆ. ಮೂಲತಃ ಧಾರಾವಾಡ ಜಿಲ್ಲೆಯ ಕುಂದಗೋಳ್ ನಿವಾಸಿಯಾಗಿರುವ ಸರಸ್ವತಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಉಡುಪಿ ಎಂಜಿಎಂ ಕಾಲೇಜಿನ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ. ಇವರ ಕುಟುಂಬ ಪರ್ಕಳ ದೇವಿನಗರದಲ್ಲಿ ವಾಸಿಸುತ್ತಿದ್ದು, ತಂದೆ-ತಾಯಿ ಕಟ್ಟಿಗೆ ಮಿಲ್ ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಕೆಲಸಕ್ಕೆ ತೆರಳಿದ ವೇಳೆ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ: ಆಟೊ ಚಾಲಕನಿಗೆ ಹಲ್ಲೆ ನಡೆಸಿ ಚಿನ್ನದ ಸರ ಸುಲಿಗೆ
ಗಂಗೊಳ್ಳಿ: ಬಾಡಿಗೆಗೆ ಹೋಗುವ ನೆಪದಲ್ಲಿ ಆಟೊಗೆ ಹತ್ತಿದ ವ್ಯಕ್ತಿಯೋರ್ವ ಆಟೊ ಚಾಲಕನ ಕುತ್ತಿಗೆಯಲ್ಲಿದ್ದ ₹ 52 ಸಾವಿರ ಮೌಲ್ಯದ ಎರಡೂವರೆ ಪವನ್ ತೂಕದ ಚಿನ್ನದ ಸರವನ್ನು ಸುಲಿಗೆಗೈದು ಪರಾರಿಯಾದ ಘಟನೆ ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಎಂಬಲ್ಲಿ ನಡೆದಿದೆ. ಹಕ್ಲಾಡಿ ಗ್ರಾಮದ ಹಕ್ಲಾಡಿಗುಡ್ಡೆಯ ಹಾಡಿಮನೆ ನಿವಾಸಿ ಶಿವ ಪೂಜಾರಿ ಚಿನ್ನದ ಸರ ಕಳೆದುಕೊಂಡ ಆಟೊ ಚಾಲಕ. ಇವರು ಡಿ. 24ರ ರಾತ್ರಿ ಆಲೂರು-ಮುಳ್ಳಿಕಟ್ಟೆ ರಸ್ತೆಯಲ್ಲಿ ತನ್ನ ಆಟೊ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಕಟ್ಟಿನಮಕ್ಕಿ ಎಂಬಲ್ಲಿ […]
ಹೆಬ್ರಿ: ಮನೆಗೆ ನುಗ್ಗಿದ ಕಾರು; ಚಾಲಕ ಸಾವು
ಹೆಬ್ರಿ: ಕಾರೊಂದು ಹಿಮ್ಮುಖವಾಗಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಎದುರಿನ ಮನೆಗೆ ನುಗ್ಗಿದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಗಾಂಧಿನಗರ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತ ಕಾರು ಚಾಲಕನನ್ನು ಗಾಂಧಿನಗರ ನಿವಾಸಿ ವಸಂತ (52) ಎಂದು ಗುರುತಿಸಲಾಗಿದೆ. ವಸಂತ್ ಅವರು ತನ್ನ ಮನೆಯಿಂದ ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಎದುರುಗಡೆಯ ಮನೆಗೆ ಹಿಮ್ಮುಖವಾಗಿ ಕಾರು ನುಗ್ಗಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಚಾಲಕ ವಸಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರು ನುಗ್ಗಿದ ರಭಸಕ್ಕೆ […]
ಜ್ಞಾನಸುಧಾ- ಭಜನಾಸುಧಾ: ಅಹೋರಾತ್ರಿ ಭಜನಾ ಕಾರ್ಯಕ್ರಮ, ವೀರಯೋಧರ ಸಂಸ್ಮರಣೆ
ಕಾರ್ಕಳ: ಶ್ರೀ ಮಹಾಗಣಪತಿ ದೇವಸ್ಥಾನ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ದೇವಸ್ಥಾನವು ನವೀಕರಣಗೊಂಡ ಪ್ರಯುಕ್ತ ಹಾಗೂ ಇತ್ತೀಚೆಗೆ ಹುತಾತ್ಮರಾದ ವೀರಯೋಧರ ಸಂಸ್ಮರಣೆಯೊಂದಿಗೆ ಅಹೋರಾತ್ರಿ ಭಜನಾ ಸುಧಾವನ್ನು ಗುಜರಾತಿನ ಶಶಿ ಕೆಟರರ್ಸ್ ಮ್ಯಾನೆಜಿಂಗ್ ಡೈರಕ್ಟರ್ ಶ್ರೀ ಶಶಿಧರ್ ಶೆಟ್ಟಿ ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪವಿಸರ್ಜನೆ : ಡಿಸೆಂಬರ್ 24ರ ಮುಂಜಾನೆ 7ಗಂಟೆಗೆ ಪ್ರಾರಂಭಗೊಂಡ ಭಜನಾಸುಧಾವು 25ರಬೆಳಗ್ಗೆ […]
ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನಯನಾ ಗಣೇಶ್ ಉದ್ಯಾವರ ನೇಮಕ
ಉಡುಪಿ: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನಯನಾ ಗಣೇಶ್ ಉದ್ಯಾವರ ಅವರು ಆಯ್ಕೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿದ್ದರು.