ವಾರಾಣಸಿ: ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್‌ ಉದ್ಘಾಟಿಸಿದ ಪ್ರಧಾನಿ ಮೋದಿ

ವಾರಾಣಸಿ: ಇಲ್ಲಿನ ಕೇಂದ್ರ ಭಾಗದಲ್ಲಿ ₹339 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಕಾಶಿ ವಿಶ್ವನಾಥ ಕಾರಿಡಾರ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಈ ಯೋಜನೆಯಿಂದಾಗಿ ಪಾರಂಪರಿಕ ನಗರದಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ ಎಂದು ಆಶಿಸಲಾಗಿದೆ. ಕಾಶಿ ವಿಶ್ವನಾಥ ಕಾರಿಡಾರ್‌ ಮೊದಲ ಹಂತದ ಯೋಜನೆ ಇದಾಗಿದೆ. ಮಧ್ವಾಚಾರ್ಯ, ಶಂಕರಾಚಾರ್ಯರನ್ನು ಸ್ಮರಿಸಿದ ಮೋದಿ: ಸುದೀರ್ಘ ಭಾಷಣದಲ್ಲಿ ಶತಶತಮಾನಗಳಿಂದ ದೇಶದ ನೂರಾರು ಸಾಧು ಸಂತರು ಋಷಿ ಮುನಿಗಳು ವೇದ ಪುರಾಣಗಳು ಕಾಶಿ ವಾರಣಾಸಿಯ ವೈಭವವನ್ನು ಕಟ್ಟಿಕೊಟ್ಟಿರುವುದನ್ನು ಭಾವಪೂರ್ಣವಾಗಿ ಸ್ಮರಿಸಿಕೊಂಡ […]

ಮಲ್ಪೆ: ಚಾಲಕನ ನಿಯಂತ್ರಣ ತಪ್ಪಿ ದಕ್ಕೆಗೆ ಬಿದ್ದ ಆಟೊ; ಚಾಲಕ ಪ್ರಾಣಾಪಾಯದಿಂದ ಪಾರು

ಮಲ್ಪೆ: ಚಾಲಕ ನಿಯಂತ್ರಣ ತಪ್ಪಿ ಆಟೊ ರಿಕ್ಷಾವೊಂದು ದಕ್ಕೆಗೆ ಬಿದ್ದ ಘಟನೆ ಮಲ್ಪೆ ಬಂದರಿನಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ಆಟೊ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮಲ್ಪೆ ಆಟೊ ನಿಲ್ದಾಣದ ಚಂದ್ರ ಸುವರ್ಣ ಎಂಬವರ ಆಟೊ ನಿಯಂತ್ರಣ ಕಳೆದುಕೊಂಡು ದಕ್ಕೆಯ ನೀರಿಗೆ ಬಿದ್ದಿದೆ. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಈಜುತಜ್ಞ ಈಶ್ವರ್ ಮಲ್ಪೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕ್ರೈನ್ ಮೂಲಕ ಆಟೊವನ್ನು ಮೇಲೆತ್ತಲಾಯಿತು. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

21 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ.!

ನವದೆಹಲಿ: 21 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ಲಭಿಸಿದೆ. 2021ರ ಸಾಲಿನ ಮಿಸ್​ ಯೂನಿವರ್ಸ್​ ಪಟ್ಟಕ್ಕೆ ಭಾರತದ ಪಂಜಾಬ್​​ನ ಹರ್ನಾಜ್​ ಸಂಧು ಮಿಸ್​ ಯೂನಿವರ್ಸ್​ ಆಗಿ ಆಯ್ಕೆಯಾಗಿದ್ದಾರೆ. ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ “ಮಿಸ್​ ಯೂನಿವರ್ಸ್ -2021” ಸ್ಪರ್ಧೆಯಲ್ಲಿ ಹರ್ನಾಜ್​ ಸಂಧು ಭಾರತವನ್ನು ಪ್ರತಿನಿಧಿಸಿದ್ದರು. ವೃತ್ತಿಯಲ್ಲಿ ಮಾಡೆಲ್​ ಆಗಿರುವ ಹರ್ನಾಜ್​ ಸಂಧು, ಪಂಜಾಬ್​ನ ಚಂಡಿಘಡ ಮೂಲದರಾಗಿದ್ದಾರೆ. 2017ರಲ್ಲಿ ಮಿಸ್​ ಚಂಡಿಘಡ ಪ್ರಶಸ್ತಿ ಪಡೆದಿದ್ದ ಸಂಧುಗೆ ಮೆಕ್ಸಿಕೊದ ಆಂಡ್ರಿಯಾ ಮೆಜಾ ಮಿಸ್​ ಯೂನಿವರ್ಸ್ ಕಿರೀಟ ತೊಡಿಸಿದ್ದಾರೆ. ಇದರೊಂದಿಗೆ […]

ಗೋಕಳ್ಳರ ವಿರುದ್ಧ ಹೋರಾಡಲು ಪ್ರತಿ ಮನೆಯಲ್ಲೂ ಖಡ್ಗ ಇಟ್ಟುಕೊಳ್ಳಿ: ಸಾಧ್ವಿ ಸರಸ್ವತಿ

ಕಾರ್ಕಳ: ಹಟ್ಟಿಗೆ ನುಗ್ಗಿ ಗೋಕಳ್ಳತನ ಮಾಡುವವರ ವಿರುದ್ಧ ಹೋರಾಡಲು ಪ್ರತಿ ಮನೆಯಲ್ಲೂ ಖಡ್ಗ (ಆಯುಧ) ವನ್ನು ಇಟ್ಟುಕೊಳ್ಳಬೇಕು. ಖಡ್ಗದ ಮೂಲಕ ಗೋಕಳ್ಳರಿಗೆ ಉತ್ತರ ಕೊಡಬೇಕು. ಗೋರಕ್ಷಣೆಗಾಗಿ ಹಿಂದೂಗಳು ಈ ಕಾರ್ಯ ಮಾಡಲೇ ಬೇಕಾಗಿದೆ ಎಂದು ಸಾಧ್ವಿ ಸರಸ್ವತಿ ಹೇಳಿದರು. ಕಾರ್ಕಳ ವಿಶ್ವ ಹಿಂದೂ ಪರಿಷದ್ ಭಜರಂಗದಳದ ವತಿಯಿಂದ ಕಾರ್ಕಳದ ಗಾಂಧಿ ಮೈದಾನದ ಅಮರ ಸೇನಾನಿ ಜನರಲ್ ಬಿಪಿನ್ ರಾವತ್ ವೇದಿಕೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸೈನಿಕರ ಅವಹೇಳನ ಮಾಡುವ ದ್ರೋಹಿಗಳ ಮಟ್ಟಹಾಕಬೇಕಿದೆ. […]