ಸರ್ಕಾರಿ ಬ್ಯಾಂಕ್‌ಗಳಲ್ಲಿ 41,177 ಹುದ್ದೆಗಳು ಖಾಲಿ: ನಿರ್ಮಲಾ ಸೀತಾರಾಮನ್
ನವದೆಹಲಿ: ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳಲ್ಲಿ ಒಟ್ಟು 41,177 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಒಟ್ಟಾರೆ 8.05 ಲಕ್ಷ ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 41,177 (ಶೇಕಡ 5ರಷ್ಟು) ಹುದ್ದೆಗಳು ಖಾಲಿ ಇವೆ. ಇದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿಯೇ (ಎಸ್‌ಬಿಐ) ಗರಿಷ್ಠ 8,544 ಹುದ್ದೆಗಳು ಖಾಲಿ ಇವೆ ಎಂದು ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ಬಜೆ-ತಂಗಾಣ ವರ್ತೆಕಲ್ಕುಡ ದೈವಸ್ಥಾನ: ಡಿ. 16ಕ್ಕೆ ಕಾಲಾವಧಿ ನೇಮೋತ್ಸವ
ಕುಕ್ಕೆಹಳ್ಳಿ: 109 ವರ್ಷಗಳ ಇತಿಹಾಸವಿರುವ ಶ್ರೀ ಮಹಾಲಿಂಗೇಶ್ವರ ಪ್ರಸನ್ನ ಶ್ರೀ ವರ್ತೆಕಲ್ಕುಡ ದೈವಸ್ಥಾನ ಬಜೆ- ತಂಗಾಣ ಇದರ ಕಾಲಾವಧಿ ನೇಮೋತ್ಸವ ಇದೇ ಬರುವ ಡಿ.16ರ ಗುರುವಾರ ನಡೆಯಲಿದೆ. ಅಂದು ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ, 7 ಗಂಟೆಗೆ ಅನ್ನಸಂತರ್ಪಣೆ, 8 ಗಂಟೆಗೆ ಹೂವಿನಪೂಜೆ, 9 ಗಂಟೆಗೆ ದೈವಗಳ ನೇಮೋತ್ಸವ ಜರುಗಲಿದೆ ಎಂದು ತಂಗಾಣ ಕುಟಂಬಸ್ಥರು ತಿಳಿಸಿದ್ದಾರೆ.
ಬೈಂದೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು
ಬೈಂದೂರು: ನೀರು ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಂದೂರು ತಗ್ಗರ್ಸೆ ಗ್ರಾಮದ ಕಂಠದ ಮನೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ತಗ್ಗರ್ಸೆ ಗ್ರಾಮದ ಕಂಠದ ಮನೆ ನಿವಾಸಿ ಅನಿತಾ ಶೆಟ್ಟಿ (55) ಮೃತ ದುರ್ದೈವಿ. ಈಕೆ ಗಂಡ ಹಾಗೂ ಮಗಳೊಂದಿಗೆ ಕಂಠದ ಮನೆಯಲ್ಲಿ ವಾಸವಾಗಿದ್ದರು. ಇಂದು ಬೆಳಿಗ್ಗೆ 6 ಗಂಟೆಗೆ ಸುಮಾರಿಗೆ ನೀರು ತರಲು ಹೋದವರು ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ […]
ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ
ಉಡುಪಿ: ಪ್ರಸಿದ್ಧ ಕನ್ನಡ ಕವಿ ಡಾ. ಡಿ.ಎಸ್. ಕರ್ಕಿ ಅವರ ಹೆಸರಿನಲ್ಲಿ ಬೆಳಗಾವಿಯ ಡಾ. ಡಿ. ಎಸ್ ಕರ್ಕಿ ಪ್ರತಿಷ್ಠಾನವು ನೀಡುತ್ತಿರುವ ಕಾವ್ಯ ಪ್ರಶಸ್ತಿಗೆ 2021ನೇ ಸಾಲಿನಲ್ಲಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ‘ಅವನು ಹೆಣ್ಣಾಗಬೇಕು’ ಎಂಬ ಕೃತಿಯು ಆಯ್ಕೆಯಾಗಿದೆ. ಇದೇ ಬರುವ ಡಿಸೆಂಬರ್ 18ರಂದು ಬೆಳಗಾವಿಯಲ್ಲಿ ನಡೆಯಲಿರುವ ಡಾ. ಡಿ ಎಸ್ ಕರ್ಕಿಯವರ 114ನೇ ಜನ್ಮದಿನದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನ ಪ್ರಕಟಿಸಿದೆ. ಪ್ರಸ್ತುತ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರು ಉಡುಪಿಯ ಎಂ.ಜಿ.ಎಂ […]
ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ: ಪ್ರಶಾಂತ್ ಕುಂದಾಪುರಗೆ ಮೂರು ಚಿನ್ನದ ಪದಕ; ರಾಷ್ಟ್ರಮಟ್ಟಕ್ಕೆ ಆಯ್ಕೆ
ಚಿತ್ರದುರ್ಗ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯು ಡಿ. 11 ಮತ್ತು 12 ರಂದು ಚಿತ್ರದುರ್ಗದಲ್ಲಿ ಆಯೋಜಿಸಿದ “40ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ- 2021” ದಲ್ಲಿ ಭಾಗವಹಿಸಿದ ಪ್ರಶಾಂತ್ ಕುಂದಾಪುರ ಅವರು ತ್ರಿಬಲ್ ಜಂಪ್ ನಲ್ಲಿ ಚಿನ್ನದ ಪದಕ, ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಹಾಗೂ 400 ಮೀ. ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫೆಬ್ರುವರಿ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಾಂತ್ ಕರ್ನಾಟಕ ತಂಡ ಪ್ರತಿನಿಧಿಯಾಗಿ ಭಾಗವಹಿಸುವರು.