ಬಾಳೆಬರೇ ಘಾಟಿ: ಭಾರೀ ವಾಹನಗಳ ಸಂಚಾರ ನಿಷೇಧ
ಉಡುಪಿ: ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಹಾಗೂ ಮಡಿಕೇರಿ-ಸಂಪಾಜೆ ರಸ್ತೆ ಕುಸಿದಿರುವ ಹಿನ್ನೆಲೆ ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದ ಈ ಮಾರ್ಗಗಳಲ್ಲಿ ಸಂಚರಿಸುವ ಸರಕು ಸಾಗಣೆ ವಾಹನಗಳು ಬಾಳೆಬರೇ ಘಾಟ್ ಮೂಲಕ ಸಂಚರಿಸುತ್ತಿದ್ದು, ಅಧಿಕ ಭಾರ ಹೊತ್ತ ವಾಹನಗಳ ಸಂಚಾರದಿಂದ ರಸ್ತೆ, ಸೇತುವೆ ಮತ್ತು ಮೋರಿಗಳು ಹಾನಿಗೊಳ್ಳುವ ಸಂಭವವಿರುವುದರಿಂದ, ಬ್ರಹ್ಮಾವರ-ಜನ್ನಾಡಿ (ಜಿಲ್ಲಾ ಮುಖ್ಯ ರಸ್ತೆ), ಸೋಮೇಶ್ವರ-ಕೋಟೇಶ್ವರ ರಸ್ತೆ (ಜಿ.ಮು.ರ), ವಿರಾಜ್‌ಪೇಟೆ-ಬೈಂದೂರು (ರಾಜ್ಯ ಹೆದ್ದಾರಿ), ಸೌಢ-ಸಿದ್ಧಾಪುರ (ಜಿ.ಮು.ರ) ಹಾಗೂ ತೀರ್ಥಹಳ್ಳಿ-ಕುಂದಾಪುರ ರಸ್ತೆಯಲ್ಲಿ 18,500 ಆರ್.ಎಲ್..ಡಬ್ಲ್ಯೂಕ್ಕಿಂತ ಅಧಿಕ […]