ಆತ್ರಾಡಿ: ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 17ನೇ ಶಾಖಾ ಮಠ ಲೋಕಾರ್ಪಣೆ

ಉಡುಪಿ: ಇಲ್ಲಿನ ಆತ್ರಾಡಿ ಪರೀಕದಲ್ಲಿ ನೂತನವಾಗಿ ನಿರ್ಮಿಸಿರುವ ಸಾರಸ್ವತ ಸಮಾಜದ ಗುರುಪೀಠ ಗೋವಾ ಕೈವಲ್ಯಪುರದ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಮಠದ 17ನೇ ಶಾಖಾ ಮಠವನ್ನು ಗೋವಾ ಕೈವಲ್ಯಪುರ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಇಂದು (ಡಿ.11) ಲೋಕಾರ್ಪಣೆಗೊಳಿಸಿದರು. ಬಳಿಕ ಆಶೀರ್ವಚನ ನೀಡಿದ ಕೈವಲ್ಯ ಸ್ವಾಮೀಜಿ, ಧರ್ಮ ಮರೆತರೆ ಸ್ವಯಂ ತನ್ನನ್ನು ತಾನೇ ಮರೆತಂತೆ. ಹೀಗಾಗಿ ಧರ್ಮಾಚರಣೆ, ದೇವತಾ ಉಪಾಸನೆ ಅಗತ್ಯ. ಇದು ಸಮಾಜದ ಉದ್ಧಾರಕ್ಕಿರುವ ಮಾರ್ಗವಾಗಿದೆ. ಶ್ರೀಕೃಷ್ಣನ ಪುಣ್ಯ ನಾಡಿನಲ್ಲಿ ಗೌಡಪಾದಾಚಾರ್ಯ ಮಠದ […]

ಉಡುಪಿ: ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯದೊಳಗೆ ಶೇ. 90ರಷ್ಟು ಎರಡು ಡೋಸ್ ಲಸಿಕೆ ನೀಡಿ: ಸಚಿವ ಸುನೀಲ್ ಕುಮಾರ್

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ 19 ಮೂರನೇ ಅಲೆಯನ್ನು ಸಮರ್ಥವಾಗಿ ತಡೆಯಲು ಡಿಸೆಂಬರ್ ಅಂತ್ಯದೊಳಗೆ 18 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಶೇ. 90ರಷ್ಟು ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ನೀಡುವ ನಿಟ್ಟಿನಲ್ಲಿ ತಕ್ಷಣದಿಂದ ಕಾರ್ಯ ಪ್ರವೃತ್ತರಾಗುವಂತೆ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ […]

ಉಡುಪಿ XPRESS ನ ವಿಶೇಷ ಸಂಚಿಕೆ “ಸಹಕಾರ ಸಂಗಮ” ಲೋಕಾರ್ಪಣೆ

ಉಡುಪಿ: ಉಡುಪಿ ಮೀಡಿಯಾ ನೆಟ್ ವರ್ಕ್ಸ್ ಸಂಸ್ಥೆಯ ಸುದ್ದಿ ಜಾಲತಾಣ ಉಡುಪಿXPRESS.com ಇದರ  3 ನೇ ವರ್ಷದ ಸಂಭ್ರಮದ ಪ್ರಯುಕ್ತ ಸಂಯೋಜಿಸಲಾದ ಕರಾವಳಿಯ ಸಹಕಾರ ಕ್ಷೇತ್ರದ ವಿಶೇಷ ಸಂಚಿಕೆ “ಸಹಕಾರ ಸಂಗಮ”  ಇದರ ಲೋಕಾರ್ಪಣೆ ಶನಿವಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಯಲ್ಲಿ ನಡೆಯಿತು. ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಇದರ ಪ್ರಧಾನ ವ್ಯವಸ್ಥಾಪಕರು ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಇದರ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಇದರ ನಿರ್ದೇಶಕರಾದ ಜಯಕರ ಶೆಟ್ಟಿ […]

ಮಣಿಪಾಲ: ವಿಹಾರಕ್ಕೆ ಬಂದಿದ್ದ ಜೋಡಿಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಹಲ್ಲೆ

ಮಣಿಪಾಲ: ನೆರೆಮನೆಯ ಗೆಳತಿಯೊಂದಿಗೆ ಮಣಿಪಾಲದ ಮಣ್ಣಪಳ್ಳ ಉದ್ಯಾನವನಕ್ಕೆ ಸುತ್ತಾಡಲು ಬಂದಿದ್ದ ಯುವಕನಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಇಂದು ನಡೆದಿದೆ‌. ಸಾಲಿಗ್ರಾಮದ ಅಲ್ತಾಫ್ (27) ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಾಣೇಶ್, ವಿನೂತ್ ಪೂಜಾರಿ ಹಾಗೂ ಸಂಜಯ ಕುಮಾರ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ತಾಫ್ ತನ್ನ ನೆರೆಮನೆಯ ಗೆಳತಿಯೊಂದಿಗೆ ಇಂದು ಮಧ್ಯಾಹ್ನ ಮಣಿಪಾಲದ ಮಣ್ಣಪಳ್ಳ ಉದ್ಯಾನವನಕ್ಕೆ ತಿರುಗಾಡಲು ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿಗಳಾದ ಪ್ರಾಣೇಶ್‌, […]

ಉಡುಪಿ: ಕಾಂಕ್ರೀಟ್ ಕಾಮಗಾರಿ; ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

ಉಡುಪಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೈಗೊಳ್ಳುತ್ತಿರುವ ಪಳ್ಳಿ-ಕಣಜಾರು ಗುಡ್ಡೆಯಂಗಡಿ ರಸ್ತೆ ವಯಾ ರಂಗನಪಲ್ಕೆ ರಸ್ತೆಯ 8.20 ಕಿ.ಮೀ ಉದ್ದದ ಕಾಂಕ್ರೀಟ್ ಕಾಮಗಾರಿಗೆ ಸ್ಥಳಾವಕಾಶದ ಕೊರತೆ ಹಾಗೂ ಹಳ್ಳಿಯ ಪರಿಮಿತಿ ಇರುವುದರಿಂದ, ಸದರಿ ರಸ್ತೆಯಲ್ಲಿ ಫೆಬ್ರವರಿ 8 ರ ವರೆಗೆ ವಾಹನ ಸಂಚಾರ ನಿರ್ಬಂಧಿಸಿ, ಪಳ್ಳಿ-ನಿಂಜೂರು ಜಂಕ್ಷನ್‌ನಿಂದ ಜೀವನ್ ಜ್ಯೋತಿ ಮಾರ್ಗವಾಗಿ ಬೈಲೂರು ಉಡುಪಿ ಕಡೆ ಪರ್ಯಾಯ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ.