ಸೇನಾ ಹೆಲಿಕಾಪ್ಟರ್ ದುರಂತ: ಅವಮಾನಕರ ಪೋಸ್ಟ್ ಪ್ರಕಟಿಸಿದರೆ ಕಠಿಣ ಕ್ರಮ; ಸಿಎಂ ಬೊಮ್ಮಾಯಿ
ಬೆಂಗಳೂರು: ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿರುವ ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಸಾವನ್ನು ಸಂಭ್ರಮಿಸುವುದು ಹಾಗೂ ಅವಮಾನಕರ ಪೋಸ್ಟ್ ಪ್ರಕಟಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬೊಮ್ಮಾಯಿ, ಸಿಡಿಎಸ್ ಜನರಲ್ ಬಿಪಿನ್ ರಾವತ್ ಕುರಿತು ಟ್ವಿಟರ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅವಮಾನಕರ ಪೋಸ್ಟ್‌ಗಳನ್ನು ಪ್ರಕಟಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಅಂಥ ಸಂದೇಶಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತುಕ್ರಮ, ಕಾನೂನು ಕ್ರಮ […]
ಉಡುಪಿ: ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದರೆ ತಪ್ಪೇನಿಲ್ಲ: ಶಾಸಕ ರಘುಪತಿ ಭಟ್
ಉಡುಪಿ: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಉಡುಪಿ ಶಾಸಕ ಕೆ. ರಘುಪತಿ ಭಟ್, ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ಎಲ್ಲರೂ ಮೊಟ್ಟೆ ತಿನ್ನಬೇಕೆಂದಿಲ್ಲ. ಎಳವೆಯಲ್ಲಿ ಯಾರು ಸಸ್ಯಾಹಾರಿಗಳಾಗಿರುತ್ತಾರೋ, ಅವರು ಸಸ್ಯಾಹಾರಿಯಾಗಿಯೇ ಇರುತ್ತಾರೆ. ಅವರು ಬೆಳೆದು ದೊಡ್ಡವರಾದ ಮೇಲೆ ಅವರ ಆಹಾರ ಕ್ರಮ ಬದಲಾಗಬಹುದು. ಹೀಗಾಗಿ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವುದರಲ್ಲಿ ತಪ್ಪಿಲ್ಲ […]
ಆತ್ರಾಡಿ: ಇಂದು ಕೈವಲ್ಯ ಶ್ರೀಗಳ ಉಡುಪಿ ಶಾಖಾ ಮಠ ಪ್ರವೇಶೋತ್ಸವ
ಉಡುಪಿ: ಇಲ್ಲಿನ ಆತ್ರಾಡಿ ಪರೀಕ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಸಾರಸ್ವತ ಸಮಾಜದ ಆದ್ಯಪೀಠ ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ 17ನೇ ನೂತನ ಶಾಖಾ ಮಠದ ಉದ್ಘಾಟನೆ ಹಾಗೂ ಶ್ರೀ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ಅವರ ಮಠ ಪ್ರವೇಶ ಕಾರ್ಯಕ್ರಮ ಇಂದಿನಿಂದ (ಡಿ.10) ಆರಂಭಗೊಳ್ಳಲಿದೆ. ಇಂದು ಕೈವಲ್ಯ ಶ್ರೀಗಳ ಮಠ ಪ್ರವೇಶ: ಕೈವಲ್ಯ ಸ್ವಾಮೀಜಿ ಅವರು ಇಂದು (ಡಿ. 10) ಸಂಜೆ ಶ್ರೀಮಠವನ್ನು ಪ್ರವೇಶ ಮಾಡುವರು. ಈ ಪ್ರಯುಕ್ತ ಅವರನ್ನು ಅಂದು ಸಂಜೆ 4.30ಗಂಟೆಗೆ […]
ಉಡುಪಿ: 9ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ
ಉಡುಪಿ: 9ನೇ ತರಗತಿಯ ಶಾಲಾ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉಡುಪಿಯ ಬನ್ನಂಜೆ ಗರಡಿ ಸಮೀಪ ಗುರುವಾರ ರಾತ್ರಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ದೀಪಾ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಬಾಲಕಿಯ ಕುಟುಂಬ ಉಡುಪಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಈಕೆ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಖಿನ್ನತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನಗರ ಪೊಲೀಸ್ ಠಾಣೆ ನಿರೀಕ್ಷಕ ಪ್ರಮೋದ್ […]
ಉಡುಪಿ: ರಾಮ್ ಸೇನಾ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಉಡುಪಿ: ವಾಹನದ ಇನ್ಸೂರೆನ್ಸ್ ನೆಪದಲ್ಲಿ ರಾಮ್ ಸೇನಾ ಕಾರ್ಯಕರ್ತನೋರ್ವನನ್ನು ಉಡುಪಿಯ ರಾಜಾಂಗಣಕ್ಕೆ ಕರೆಸಿಕೊಂಡ ದುಷ್ಕರ್ಮಿಗಳು, ಆತನ ಮೇಲೆ ಏಕಾಏಕಿಯಾಗಿ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ರಾಮ್ ಸೇನಾ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ನಮ್ಮ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಉಡುಪಿ, ದ. ಕ ಜಿಲ್ಲೆಯಾದ್ಯಂತ ರಾಮ್ ಸೇನಾ ಕಾರ್ಯಕರ್ತರು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಏಚ್ಚರಿಕೆ ನೀಡಿದ್ದಾರೆ.