ಹುತಾತ್ಮರಾದ ವೀರ ಯೋಧರಿಗೆ ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಶ್ರದ್ಧಾಂಜಲಿ ಅರ್ಪಣೆ
ಕಾಪು: ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ ಸೇನೆಯ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸುತ್ತಿದ್ದ ಸೇನಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಹಾಗೂ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೀರ ಯೋಧರಿಗೆ ಬಿಜೆಪಿ ಯುವಮೋರ್ಚಾ ಕಾಪು ಮಂಡಲದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವೀರ ಸೇನಾನಿ ರಾವತ್ ಅವರಿಗೆ ಶ್ರದ್ಧಾಂಜಲಿ
ಉಡುಪಿ: ಹುತಾತ್ಮರಾದ ವೀರ ಸೇನಾನಿ ಜನರಲ್ ಬಿಪಿನ್ ರಾವತ್ ಅವರಿಗೆ ಉಡುಪಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಇಂದು ಶ್ರದ್ಧಾಂಜಲಿ ಸಲ್ಲಿಸಿದರು.
ಉಡುಪಿ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್: ಝಕಾತ್ ಮೊತ್ತದಿಂದ ಸ್ವಉದ್ಯೋಗಕ್ಕಾಗಿ ಆರು ದ್ವಿಚಕ್ರ ವಾಹನ ವಿತರಣೆ
ಉಡುಪಿ: ಉಡುಪಿ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಈ ವರ್ಷ ಸಂಗ್ರಹಿಸಿದ ಝಕಾತ್ ಮೊತ್ತದಿಂದ ಬಡ ಫಲಾನು ಭವಿಗಳಿಗೆ ಸ್ವಉದ್ಯೋಗಕ್ಕಾಗಿ ಆರು ದ್ವಿಚಕ್ರ ವಾಹನ ವಿತರಿಸುವ ಕಾರ್ಯಕ್ರಮ ವನ್ನು ಶುಕ್ರವಾರ ಉಡುಪಿ ಜಾಮೀಯ ಮಸೀದಿ ವಠಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಫೇಮಸ್ ಗ್ರೂಪ್ನ ರಿಯಾಜ್ ಅಹ್ಮದ್ ಫಲಾನು ಭವಿಗಳಾದ ಅಬ್ದುಲ್ ಅಜೀಜ್ ಹೊನ್ನಾಳ, ನಯಾಜ್ ಹೊನ್ನಾಳ, ಅಬೂಬಕ್ಕರ್ ಕೊಂಬಗುಡ್ಡೆ, ಯೂನಿಸ್ ಖಾನ್ ಫಕೀರ್ಣಕಟ್ಟೆ, ನಿಸಾರ್ ಸಾಸ್ತಾನ, ಮುಹಮ್ಮದ್ ಶರೀಫ್ ಫಣಿಯೂರು ಅವರಿಗೆ ದ್ವಿಚಕ್ರ ವಾಹನಗಳ ಕೀಲಿ ಕೈಯನ್ನು […]
ಉಡುಪಿ: ಸಮಾಜ ಸೇವಕರಿಂದ ಅನಾಥ ಶವದ ಅಂತ್ಯಸಂಸ್ಕಾರ
ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರವನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಗೌರಯುತವಾಗಿ ಬೀಡಿನಗುಡ್ಡೆ ದಫನಭೂಮಿಯಲ್ಲಿ ಶುಕ್ರವಾರ ನಡೆಸಿದರು. ನಗರ ಪೊಲೀಸ್ ಠಾಣೆಯ ಎ.ಎಸ್.ಐ ಹರೀಶ್ ಕೆ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರು, ಕಾನೂನು ಪ್ರಕ್ರಿಯೆ ನಡೆಸಿದರು. ಪ್ರದೀಪ್ ಅಜ್ಜರಕಾಡು, ಸೋನಿಯಾ ಅಜ್ಜರಕಾಡು, ಪ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ ಸಹಕರಿಸಿದರು. ಸಮಾಜಸೇವಕರು ಕಳೆದ ಜುಲೈ 27 ರಂದು, ನಗರದ ಸಾರ್ವಜನಿಕ […]
ವಿಧಾನ ಪರಿಷತ್ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಶೇ. 99.48ರಷ್ಟು ಮತದಾನ
ಉಡುಪಿ: ಜಿಲ್ಲೆಯಲ್ಲಿ ಇಂದು ನಡೆದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನ ಪರಿಷತ್‌ನ ದ್ವೈವಾರ್ಷಿಕ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 99.48 ಮತದಾನ ನಡೆದಿದ್ದು, ಜಿಲ್ಲೆಯ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ 1203 ಪುರುಷ 1289 ಮಹಿಳಾ ಸದಸ್ಯರು ಸೇರಿದಂತೆ ಒಟ್ಟು 2492 ಮಂದಿ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು, 10 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 43.91 % ಮತದಾನ […]