ಕಾಪು: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ದುಷ್ಕರ್ಮಿಗಳು
ಕಾಪು: ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕಾಪುವಿನ ಏಣಗುಡ್ಡೆ ಗ್ರಾಮ ಅಚ್ಚಡ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜೋಸ್ ಫಿನ್ ಲೋಬೋ(75) ಎಂಬವ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸೆ.8ರಿಂದ ಅ.25ರ ಮಧ್ಯಾವಧಿಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಕಪಾಟಿನಲ್ಲಿ ಇಟ್ಟಿದ್ದ ರೋಪ್ ಚೈನ್, ಹವಳದ ಚೈನ್, ಸಾಧಾರಣ ಚೈನ್, ಒಂದು ಜೊತೆ ಬಳೆ, 4 ಉಂಗುರ, 3 ಜೊತೆ ಕಿವಿಯ ಓಲೆಯನ್ನು ಕಳವು ಮಾಡಿದ್ದಾರೆ. […]
ಕಟಪಾಡಿ: ಮನೆಮಂದಿಗೆ ಮಂಕುಬೂದಿ ಎರಚಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾದ ಖದೀಮರು.!
ಕಟಪಾಡಿ: ಮೂವರು ಫಕೀರನ ವೇಷಧಾರಿಗಳು ಮನೆ ಮಂದಿಗೆ ಮಂಕುಬೂದಿ ಎರಚಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿಗೊಂಡು ಪರಾರಿಯಾದ ಘಟನೆ ಕಟಪಾಡಿಯ ಅಗ್ರಹಾರ ಸಮೀಪ ಬುಧವಾರ ನಡೆದಿದೆ. ಫಕೀರನ ವೇಷ ಧರಿಸಿಕೊಂಡು ಬಂದಿದ್ದ ಮೂವರು ಖದೀಮರು ಕಟಪಾಡಿಯ ಅಗ್ರಹಾರದ ಮನೆಗೆ ಬಂದಿದ್ದು, ತಮ್ಮ ತಂತ್ರವನ್ನು ಬಳಸಿ ಮನೆಯವರಿಗೆ ಮಂಕುಬೂದಿ ಎರಚಿದ್ದಾರೆ. ಖದೀಮರ ತಂತ್ರಕ್ಕೆ ಬಲಿಪಶುಗಳಾದ ಮನೆಯವರು ತಮ್ಮ ಸ್ವಪ್ರಜ್ಞೆಯನ್ನು ಕಳೆದುಕೊಂಡಿದ್ದರು. ತಮ್ಮಲ್ಲಿರುವ ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತಮ್ಮ ಕೈಯಾರೇ ಖದೀಮರಿಗೆ ತಂದುಕೊಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲಿಂದ […]
ಬೈಂದೂರು: ಅಪ್ರಾಪ್ತ ನಾದಿನಿಯ ಅತ್ಯಾಚಾರಗೈದ ಅಪರಾಧಿಗೆ 10 ವರ್ಷ ಶಿಕ್ಷೆ, 20 ಸಾವಿರ ದಂಡ
ಕುಂದಾಪುರ: ಹೆಂಡತಿಯ ತಂಗಿಯ(ನಾದಿನಿ) ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿ ಮೇಲಿನ ಆಪಾದನೆಗಳು ರುಜುವಾತಾಗಿದ್ದು ಆತ ಅಪರಾಧಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ಡಿ.9ರಂದು ತೀರ್ಪು ಪ್ರಕಟಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಈ ಘಟನೆ ನಡೆದಿತ್ತು. ಸುರೇಶ್ ಮರಾಠಿ (29) ಎಂಬಾತನೇ ಅಪರಾಧಿಯಾಗಿದ್ದು ಈತ ತನ್ನ ಹೆಂಡತಿ ತಂಗಿಯನ್ನು ಕಾಡಿಗೆ ಕರೆದೊಯ್ದು ಅಲ್ಲಿನ ಮರವೊಂದರ ಮೇಲೆ ಗುಡಿಸಲು ಸಿದ್ದಪಡಿಸಿ […]
60 ವರ್ಷದ ವ್ಯಕ್ತಿಯನ್ನು ಮದುವೆಯಾಗಲು ಒಪ್ಪಿದ್ದ ಮಹಿಳೆ ಆಭರಣದೊಂದಿಗೆ ಪರಾರಿ.!
ಉಡುಪಿ ಎಕ್ಸ್‌ಪ್ರೆಸ್ ವರದಿ: ಅರವತ್ತು ವರ್ಷದ ವ್ಯಕ್ತಿಯೊಬ್ಬರು ತನ್ನನ್ನು ಮದುವೆಯಾಗಲು ಒಪ್ಪಿದ್ದ ಮಹಿಳೆಯಿಂದಲೇ ವಂಚನೆಗೆ ಒಳಗಾಗಿದ್ದಾರೆ. ಸಾಗರ ತಾಲೂಕಿನ ಹೊಳೆಹೊನ್ನೂರಿನ ನಂಜುಂಡಪ್ಪ (60) ಮೋಸ ಹೋದವರು. ಇವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದು, 7 ತಿಂಗಳ ಹಿಂದೆ ಪತ್ನಿ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ಒಂಟಿತನ ಕಾಡುತ್ತಿತ್ತು. ಹೀಗಾಗಿ ಮತ್ತೆ ಮದುವೆ ಮಾಡಿಕೊಳ್ಳಲು ಕನ್ನಡ ಮ್ಯಾಟ್ರಿಮೊನಿಯಲ್ಲಿ ಹೆಸರು ನೋಂದಾಯಿಸಿದ್ದರು. ಬೆಂಗಳೂರಿನ ಯಲಹಂಕದ ಚಂದ್ರಿಕಾ ಎನ್ನುವ ಮಹಿಳೆ ನಂಜುಂಡಪ್ಪ ಅವರನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದರು. ನ.15ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ದತೆ […]
ಕೋಡಿ ಬೆಂಗ್ರೆ ಬೋಟ್ ಹೌಸ್ ನಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆ
ಉಡುಪಿ: ಜಿಲ್ಲೆಯ ಎಲ್ಲಾ ಮೋರ್ಚಾಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನಿರಂತರ ವೈವಿಧ್ಯಮಯ ಕಾರ್ಯ ಚಟುವಟಿಕೆಗಳಿಂದ ಜಿಲ್ಲೆಯ ಮೋರ್ಚಾಗಳಲ್ಲೇ ಮೂಂಚೂಣಿಯಲ್ಲಿರುವ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಮಲ್ಪೆ ಕಡಲ ತೀರದ ತುದಿಯಲ್ಲಿರುವ ಕೋಡಿ ಬೆಂಗ್ರೆ ಬೋಟ್ ಹೌಸ್ ನಲ್ಲಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಂಡಿರುವುದು ರಾಜ್ಯಕ್ಕೇ ಮಾದರಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಉಡುಪಿ-ಮಲ್ಪೆ ಕಡಲ ತೀರದ ಕೋಡಿ ಬೆಂಗ್ರೆ ಬೋಟ್ ಹೌಸ್ ನಲ್ಲಿ ಬಿಜೆಪಿ ಜಿಲ್ಲಾ ಮಹಿಳಾ […]