ಕೊರೊನಾ ಸೋಂಕು ನಿಯಂತ್ರಿಸಲು ಚ್ಯುಯಿಂಗ್ ಗಮ್ ಅಭಿವೃದ್ಧಿ: ಸೋಂಕು ಹರಡುವ ಮೂಲವನ್ನು ಕಟ್ಟಿಹಾಕಲು ಇದು ಪರಿಣಾಮಕಾರಿ..!!

ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ವಿಶ್ವದ ಬಹುತೇಕ ದೇಶಗಳು ಲಸಿಕೆಯ ಮೊರೆ ಹೋಗಿವೆ. ಈ ಮಧ್ಯೆ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೊರೊನಾ ಹಬ್ಬುವಿಕೆ ಕಡಿಮೆ ಮಾಡುವ ಚ್ಯುಯಿಂಗ್ ಗಮ್ ಅನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸಲಿದೆ: ಕೊರೊನಾ ವೈರಸ್​​ ನಮ್ಮ ಲಾಲಾರಸ ಗ್ರಂಥಿಗಳಲ್ಲಿ ಉಳಿದುಕೊಳ್ಳುತ್ತವೆ. ಹೀಗಾಗಿ ಯಾರಾದರೂ ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡಿದಾಗ ಹನಿಗಳ ಮೂಲಕ ಬಹಳ ಸುಲಭವಾಗಿ ಸೋಂಕು ಹರಡುತ್ತದೆ. ಈ ಚ್ಯುಯಿಂಗ್ ಗಮ್ ಅಗೆಯುವಾಗ ನಮ್ಮ ಎಂಜಲು ಅಥವಾ ಲಾಲಾರಸದಲ್ಲಿ ನಿಲ್ಲುವ ವೈರಸ್ […]