ಸಾಲಿಗ್ರಾಮ ಶ್ರೀ ಗುರುನರಸಿಂಹ ಮತ್ತು ಆಂಜನೇಯ ದೇವಸ್ಥಾನದಲ್ಲಿ ಮಧ್ಯವರ್ತಿಗಳನ್ನು ನೇಮಿಸಿಲ್ಲ: ಡಾ. ಕೆ.ಎಸ್. ಕಾರಂತ

ದೇಶದ ಹೆಸರಾಂತ ದೇವಸ್ಥಾನಗಳ ಸೇವೆಗಳನ್ನು ಅಂತರ್ಜಾಲದ ಮೂಲಕ ಒದಗಿಸುವ ಬಗ್ಗೆ ಅನೇಕ ಕೊಂಡಿಗಳು ಅಸ್ತಿತ್ವದಲ್ಲಿವೆ. ಅಂತಹ ಕೊಂಡಿಗಳು ತಮ್ಮ ಜಾಲದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರುನರಸಿಂಹ ಮತ್ತು ಆಂಜನೇಯ ದೇವಳಗಳನ್ನೂ ಹೆಸರಿಸಿ ಕಾರ್ಯಾಚರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಆಡಳಿತಕ್ಕೆ ಒಳಪಟ್ಟಿರುವ ಉಭಯ ದೇವಳಗಳಿಗೂ ಇಂತಹ ಜಾಲತಾಣಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಮಾತ್ರವಲ್ಲದೆ, ನಮ್ಮ ಆಡಳಿತ ಮಂಡಳಿಯು ಆನ್ ಲೈನ್ ಸೇವೆಗೆಂದು ಯಾವುದೇ ಮಧ್ಯವರ್ತಿ ವ್ಯಕ್ತಿಗಳನ್ನಾಗಲಿ, ಸಂಸ್ಥೆಗಳನ್ನಾಗಲಿ ನೇಮಿಸಿರುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಸಾರ್ವಜನಿಕ ಆಸ್ತಿಕ ಬಂಧುಗಳು […]

ಮಣಿಪಾಲ: ಗಾಂಜಾ ಸೇವನೆ; ನಾಲ್ವರ ಬಂಧನ

ಮಣಿಪಾಲ: ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ ಘಟನೆ 80 ಬಡಗಬೆಟ್ಟು ಗ್ರಾಮದ ನೇತಾಜಿ ನಗರದಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಶ್ರೇಯಸ್‌, ಪೆಮಿಸ್ಟನ್, ಚೈತನ್ಯ ಎಸ್. ಕುಂದರ್ ಮತ್ತು  ಮೊಹಮ್ಮದ್ ಅಬ್ದುಲ್ ರಜಾಕ್ ಎಂದು ಗುರುತಿಸಲಾಗಿದೆ. ನ.24ರಂದು ಮಣಿಪಾಲ ಠಾಣೆಯ ಎಎಸ್ಐ ಶೀನ ಸಾಲಿಯಾನ್‌, ಪಿಎಸ್ಐ ವಿನಯ್, ಸಿಬ್ಬಂದಿ ಸಂಗಮೇಶ್ ಮತ್ತು ಅಣ್ಣಪ್ಪ ಅವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ನೇತಾಜಿನಗರದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳಾದ ಶ್ರೇಯಸ್‌, ಪೆಮಿಸ್ಟನ್, ಚೈತನ್ಯ […]

ಕೊರೊನಾ ಸೋಂಕು ನಿಯಂತ್ರಿಸಲು ಕಠಿಣ ಕ್ರಮ ಅನಿವಾರ್ಯ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೊರೊನಾ ಸೋಂಕು ನಿಯಂತ್ರಿಸಲು ರಾಜ್ಯದಲ್ಲಿ ವಿಶೇಷವಾಗಿ ಗಡಿಭಾಗಗಳಲ್ಲಿ ಕಠಿಣ ನಿಯಮ ತರುವ ಅನಿವಾರ್ಯತೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆ ಮೂಲಕ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ತರುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ನಾಳೆ ದೆಹಲಿಗೆ ಹೋಗುತ್ತಿದ್ದು ಅಲ್ಲಿ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ನಿಯಮ ಜಾರಿಗೆ ತರಲಾಗುವುದು. ಆರೋಗ್ಯ ಇಲಾಖೆ ಮತ್ತು ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಗೆ ಬೂಸ್ಟರ್ ಡೋಸ್ […]

ಇಂದಿನಿಂದ ಆಟೊ ಪ್ರಯಾಣ ಮತ್ತಷ್ಟು ದುಬಾರಿ

ಬೆಂಗಳೂರು: ನಗರದಲ್ಲಿ ಇಂದಿನಿಂದ ಆಟೊ ಪ್ರಯಾಣ ದರವನ್ನು ಹಾಲಿ ದರಕ್ಕಿಂತ ಐದು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಈ ಪರಿಷ್ಕೃತ ದರ ಇಂದಿನಿಂದಲೇ (ಡಿ.1) ಜಾರಿಯಾಗಲಿದೆ. ಇನ್ಮುಂದೆ ಮೊದಲ 2 ಕಿ.ಮೀ ಗೆ 30 ರೂಪಾಯಿ ನಿಗದಿಯಾಗಲಿದ್ದು, ಒಮ್ಮೆ ಆಟೊ ಏರಿದರೆ 30 ರೂಪಾಯಿ ಕೊಡಲೇಬೇಕಾಗುತ್ತೆ. ಇಲ್ಲಿಯವರೆಗೆ 25 ರೂಪಾಯಿ ಕನಿಷ್ಟ ದರವಾಗಿತ್ತು. ಇದೀಗ 2 ಕಿಲೋ ಮೀಟರ್​ ಬಳಿಕ ಪ್ರತಿ 1 ಕಿಲೋ ಮೀಟರ್​ ಗೆ 15 ರೂಪಾಯಿಯಂತೆ ಚಾರ್ಜ್​​ ಬೀಳಲಿದೆ. ಕನಿಷ್ಠ ದರ ಮೊದಲ 2 […]

ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ₹ 103.50 ಏರಿಕೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಮತ್ತೆ ಶಾಕ್ ಕೊಟ್ಟಿದೆ. 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ ದರ ₹ 103.50 ಹೆಚ್ಚಳಗೊಂಡಿದೆ. ಇದರಿಂದ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆದರೆ, ತೈಲ ಕಂಪನಿಗಳು 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸದಿರುವುದು ಸಮಾಧಾನಕರವಾದ ವಿಷಯವಾಗಿದೆ.